ಒಟ್ಟು 3 ಕಡೆಗಳಲ್ಲಿ , 3 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ನಡೆಯ ಬೇಕೆಲ್ಲೋರಂಗಾ ವಳಮನಿಗೆ | ತಡವಾಯಿತು ಬಂದು ಸಭೆಯೊಳಗೆ ಪ ಭಕುತರು ತಾಳ ಮೃದಂಗ ವೀಣೆಗಳಿಂದ | ನಿಗಮಗೋಚರ ನಿಮ್ಮಚರಿತವನು | ಬಗಿ ಬಗಿಯಲಿ ಪಾಡುವದಕೆ ಮರುಳಾಗಿ | ನಗಧರನಿಂತೀ ಸಕಲ ಮರೆದು 1 ಹೊನ್ನು ಮಯದ ತೂಗು ತೊಟ್ಟಿಲ ವಂಬರ | ಬಣ್ಣಬಣ್ಣದ ಪುಷ್ಪವಹಾಸಿ | ರನ್ನ ದೀಪದ ಎಡಬಲಲಿಂದಿರೆದೇವಿ | ನಿನ್ನ ಮಾರ್ಗವ ನೋಡುತಿಹಳಯ್ಯಾ | 2 ಬಂದ ಭಾಗವತರಿಗೆಲ್ಲ ಬೇಡಿದ್ದು ಕೊಟ್ಟು | ಮಂದ ಹಾಸದ ಉಚಿತದಿ ಕಳುಹಿ | ಸಾರಥಿ | ಛಂದದಿ ಬಿನ್ನಹ ಅವಧರಿಸಿ 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ವಾದಿರಾಜಾಶ್ರಮ ನೋಡಲು ಸಂಭ್ರಮ ಪಾಡಿ ಪೊಗಳುವರಿಗಾಹುದು ಪ್ರೇಮ ಪ ಕಾಡೊಳಗೆ ಸಂಚರಿಪ ಋಷಿಗಳು ಪಾಡಿಪೊಗಳುತ ಪರಮ ಪುರುಷನ ಬೇಡಿದಿಷ್ಟಾರ್ಥಗಳ ಪಡೆಯುತ ಕೂಡಿ ಸುಖಿಸುವ ಶಿಷ್ಟರಂದದಿ ಅ.ಪ ಪರಮಸಾತ್ವಿಕರೆಲ್ಲ ಪುರಂದರದಾಸರ ಪರಮ ಪುಣ್ಯದ ದಿನ ಬರಲು ಸಂಭ್ರಮದಿ ಪರಿಪರಿವಿಧದಿಂದ ಹರಿದಾಸರೆಲ್ಲರು ತ್ವರದಿಂದ ಗುರುಗಳಾಜ್ಞೆಯ ಮೀರದೆ ಭರದಿಂದ ನೆರೆದರತಿ ಶೀಘ್ರದಿಂದಲಿ ಮುದದಿಂದ ಗುರುಗಳಡಿಗೊಂದಿಸುತ ಕ್ರಮದಿಂದ ಸರಸವಾಕ್ಯಗಳಿಂದ ಶಿಷ್ಯರಿಂದ ಹರಿಸಿ ಆಶೀರ್ವಾದದಿಂದಲಿ ಸುರಿಸಿ ಅಮೃತವಾಣಿ ನುಡಿಯುತ ಹರುಷಪಡುತಿಹ ಗುರುಗಳಿಹ ಸ್ಥಳ 1 ಪವಮಾನಮತದವರೆಲ್ಲರೊಂದಾಗುತ ನಮಿಸಿ ಶ್ರೀಪತಿಗೆ ವಂದನೆ ಮಾಡುತ ವಿನಯದಿಂದಲಿ ತಮ್ಮನಿಯಮಿತ ಕಾರ್ಯವ ನÀಡೆಸುತ್ತ ತಂಬೂರಿಗಳ ಸುಸ್ವರದಿ ಮೀಟುತ ನಿಂದು ಹರುಷಿಸುತ ತಾಳಗಳ ಬಾರಿಸುತ ಶಿಷ್ಯರು ಕುಣಿಯುತ್ತ ಬಲುನಾದ ಕೊಡುತಿಹ ಕಾಲಗೆಜ್ಜೆಗಳೆಲ್ಲ ಘಲುರೆನುತ ದಾಸರಿಗೆ ಉಚಿತದ ಜೋಳಿಗೆಗಳನೆ ಪಿಡಿದು ನಡಿಯುತ್ತ ಶ್ರೀರಾಮರ ದೂತನ ಬಾರಿಬಾರಿಗೆ ನಮಿಸಿ ನಮಿಸಿ ಪೊಗಳುತ್ತ ಹರಿನಾಮ ಸ್ಮರಣೆಯಲಿ ಮಾರುತೀಶನ ಭಕುತರೆಲ್ಲರು ದ್ವಾರಬಿಡುತಲಿ ಪೊರಟು ಭಜಿಸುತ ಬೀದಿಯಲಿ ಕುಣಿಯುತ್ತ ಹರಿಗುಣ ಪಾಡಿ ಪೊಗಳುವ ಪರಮ ವೈಭವ2 ಆ ಮಾರುತನ ದಯದಿಯಾಯಿವಾರವು ಮಾಡಿ ಶ್ರೀನಿಕೇತನ ಪಾಡಿ ಪೊಗಳುತಲಿ ಜ್ಞಾನಿ ಪುರಂದರದಾಸರ ಚರಿತೆಯ ಪೇಳುವರು ಸಂಭ್ರಮದಿಂದಲಿ ನಲಿದಾಡುವರು ಹರಿದಾಸರ ಅದ್ಭುತಕಾರ್ಯಗಳ ಸುಸ್ವರದಿ ಪಾಡುವರು ಹರಿದಾಸ ಶ್ರೇಷ್ಠರ ಮಹಿಮೆಗಳ ಇನ್ನುಳಿದ ಶಿಷ್ಯರು ಪೇಳುವರು ವರ ಪಾರ್ಥಿವ ವತ್ಸರದಿ ಗುರುಗಳ ಕರುಣ ಪಡೆದವರು ನೆರೆದು ರಾತ್ರಿಕಾಲದಲಿ ಶ್ರೀ ಹರಿಯ ಭಜನೆ ಮಾಡುತಿರಲು ಹರುಷ ಪಡುತಲಿ ನಲಿದು ಕಮಲನಾಭ- ವಿಠ್ಠಲನೆ ಸಲಹು ಎನ್ನುವ3
--------------
ನಿಡಗುರುಕಿ ಜೀವೂಬಾಯಿ
ಕಂಡೆ ತಿರುಪತಿ ವೆಂಕಟೇಶನಕಾರಣಾತ್ಮಕಸಾರ್ವಭೌಮನಕಾಮಿತಾರ್ಥವನೀವ ದೇವನ ಕರುಣನಿಧಿಯೆಂದೆನಿಸಿ ಮೆರೆವನ ಪಕೋಟಿ ಸೂರ್ಯ ಪ್ರಕಾಶವೆನಿಪ ಕಿರೀಟವನು ಮಸ್ತಕದಿ ಕಂಡೆನುನೋಟಕ್ಕಚ್ಚರಿಯೆನಿಪ ನಗೆಮೊಗನೊಸಲೊಳಗೆ ತಿರುಮಣಿಯ ಕಂಡೆನುಸಾಟಿಯಿಲ್ಲದ ಶಂಖ-ಚಕ್ರವ ಚತುರ ಹಸ್ತದಲೀಗ ಕಂಡೆನುಬೂಟಕದ ಮಾತಲ್ಲ ಕೇಳಿ-ಭೂರಿದೈವದ ಗಂಡನಂಘ್ರಿಯ 1ತಪ್ಪುಗಾಣಿಕೆ ಕಪ್ಪುಗಳನು ಸಪ್ತಲೋಕಗಳಿಂದ ತರಿಸುವಉಪ್ಪು ವೋಗರವನ್ನು ಮಾರಿಸಿಉಚಿತದಿಂದಲಿ ಹಣವ ಗಳಿಸುವ ||ಇಪ್ಪತ್ತು ದುಡ್ಡಿಗೆ ಸೇರು ತೀರ್ಥವ ಒಪ್ಪದಿಂದಕ್ರಯ ಮಾಡಿ ಕೊಡಿಸುವಸರ್ಪಶಯನನ ಸಾರ್ವಭೌಮನ ಅಪ್ಪವೆಂಕಟರಮಣನಂಘ್ರಿಯ 2ಉರದಿ ಶ್ರೀದೇವಿ ಇರಲು ಕಂಡೆನುಉನ್ನತದ ಕೌಸ್ತುಭವ ಕಂಡೆನುಗರುಡಕಿನ್ನರನಾರದಾದಿಗಳಿರಲು ಎಡಬಲದಲ್ಲಿ ಕಂಡೆನು ||ತರತರದಿ ಭಕ್ತರಿಗೆ ವರಗಳ ಕರೆದುಕೊಡುವುದ ನಾನು ಕಂಡೆನುಶರಧಿಶಯನನ ಶೇಷಗಿರಿವರಸಿರಿಪುರಂದರವಿಠಲನಂಘ್ರಿಯ3
--------------
ಪುರಂದರದಾಸರು