ಜಯ ಜಯಾ ದೇವ ದೇವಾ
ಮಾರ್ತಾಂಡ ಭೈರವಾ
ದಯದಿಂದ ಪಾಲಸೆನ್ನಾ
ಭಕ್ತರನುದಿನಕಾವಾ ಪ
ಶರಣರ ಮೊರೆಯ ಕೇಳಿ | ಶಿವ ಅವತಾರವ ತಾಳಿ
ಭವರೂಪಮಣಿಮಲ್ಲನಾ | ಮರ್ಧಿಸಿದೆ ತನುಶೀಳಿ 1
ವಿವೇಕಹಯವನೇರಿ | ಭೋಧನಾಸ್ತ್ರವನು ದೋರಿ
ಅವಗುಣ ಬಲಮುರಿದೇ | ಜಗಕಭಯವ ಬೀರಿ 2
ಮ್ಯಾಲಕರದಿಂದ ಉಘೇ | ಯನ್ನಲು ಕೂಗಿ 3
ಘನಗುರು ಮಹಿಮಪತಿ | ಸುತ ಪ್ರಭು ಮಾಪತಿ
ಮನದೊಳು ಜ್ಞಾನ ದೀಪಾ | ದಿಂದಬೆಳಗುವೆ ಆರತಿ 4