ಒಟ್ಟು 9 ಕಡೆಗಳಲ್ಲಿ , 4 ದಾಸರು , 8 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಅರಣೀ ಗರ್ಭದಿಂ ಸಂಭವ | ಸುರ ಜೇಷ್ಠ ಭ್ರಾತಾಸುರಪತಿ ನುತ ವೈಭವ ಪ ಭವ ಪರಿ ಹರಿಸಾಮಯೆ ಅ.ಪ. ಅಂಬಾರ ಮಣಾ - ಶಂಕರಾ | ಗೌರಿವರಾ |ಜಂಭಾಸುರ ಹರ - ಸುರ ವರ ||ಅಂಬುಜಾಸನ - ಕುವರಾ - ಗಂಗಾಧರಾ |ಹಂಬಲಿಸುವ - ಭಕ್ತರ ||ಶುಂಭ ನಿಶುಂಭರ | ಸಂಹರ ರಾಮನಅಂಬುಜ ಪದ ದ್ವಯ | ನಂಬಿದ ಭಕ್ತನೆ |ತುಂಬಿದ ಭಕುತಿಯ | ಹಂಬಲ ಹರಿಯಲಿಸಂಭ್ರಮದಲಿ ಕೊಡು | ಶಂಭು ವಂದಿಸುವೆ 1 ಪ್ರಮಥರ ಪೋಷ-ಭೂತೇಶ-ಭುವನೆ5ವ್ಯೋಮಕೆ5-ಉಗ್ರೇಶ ||¸5Àುನಸ ಮುನೀಶ - ಕೈಲಾಸ ವಾಸೇಶಅಮರಾರಿ ನಾಶ ಸತೀಶ ||ಕುಮತಿಗಳ್ಮೋಹಕ | ಕುಮತವ ವಿರಚಿಸಿರಮೆಯರಸಗೆ ಬಹು | ಪ್ರಮುದವ ಪಡಿಸಿದೆ |ಅಮರೋತ್ತಮ ನಿಮ | ವಿಮಲ ಪದಾಬ್ಜಕೆನಮಿಸುತ ಬೇಡುವೆ ಸನ್ಮತಿ ಪ್ರದನೇ 2 ಶುಕ | ಶುಕಿ ಭವನೆನಿಸೀ 3
--------------
ಗುರುಗೋವಿಂದವಿಠಲರು
ಈತನೀಗ ಪ್ರಣವ ಪಾದ್ಯನೊ | ಭೂತ ಪ್ರೇತ ಪ್ರಮಥ ತತಿಗೆ | ನಾಥನೆನಿಪ ನಮಗೆ ನಿರುತ | ವಾಕನೊಳಗೆ ಹರಿಯ ತೋರುವ ಪ ಗಜದನುಜ ವಿನಾಶನೀತ | ಗಜವದನನ ಪೆತ್ತನೀತ | ಗಜನ ಸದದನೀತ ಪೆತ್ತಂ | ಗಜನ ಗೆದ್ದ ಗಂಭೀರನೀತ | ಗಜರಿಪುರಥ ರಮಣನೀತಾ ನಂ | ಗಜಮಾರಗೊಲಿದನೀತ | ಗಜ ವರದನ ಭಕ್ತರಘವೆಂಬೊ | ಗಜಕೆ ಕೇಸರಿಯಾಗಿಪ್ಪನೀತಾ 1 ದ್ವಿಜರಾಜ ಜುಟನೀತಸೋತ್ತಮ | ದ್ವಿಜಗೆ ಪಾಲಿಪನೀತ ಸತತಾ | ದ್ವಿಜ ಪನ್ನಗನ್ನ ಸಮಗುಣನೀತಾ | ದ್ವಿಜ ಕುಲದಲ್ಲಿ ಉದ್ಭವನೀತ | ದ್ವಿಜನ ಶಾಪವ ಕೈಕೊಂಡನೀತ | ದ್ವಿಜ ಭೂಷಣ ಯಾಗದಲಿ ಸೂರ್ಯನ | ಧ್ವಜವ ಕಿತ್ತಿದನೀತ ಕೈಲಾಸ | ದ್ವಿಜವಾಗಿವುಳ್ಳ ಉಗ್ರೇಶನೀತ2 ತ್ರಿಗುಣಾಕಾರ ನೀತ ಮೂರು | ಜಗವದಲ್ಲಣನೀತ ಮೇರು | ನಗಚಾಪನೀತ ನಾರಾಯಣಾಸ್ತ್ರದಿ | ನಗರನುರುಪಿ ಬಿಟ್ಟನೀತ | ಬಗೆಬಗೆಯ ಜೀವಿಗಳಿಗೆ ಬಿಡದೆ | ಅಗಣಿತ ಭೋಗ ಪ್ರದಾತನೀತ | ಮೃಗಲಾಂಛನದ ಮೊಗನಗೆ ಈತ | ನಿಗಮಾಶ್ರವದಗಧಿಕನೀತಾ 3 ಭಸುವ ರಾವಣ ಮಾಗಧ ಕಶ್ಯಪ | ಅಸುರಗಣಕೆ ವರವಿತ್ತನೀತ | ಪಶುವದನ ಪರಮೇಶ್ವರನೀತ | ವಿಷವ ಭಂಜನಭವ ಶಿವನೀತ | ಬಿಸಿಜ ಸಂಭವ ನಂದನನೀತ | ಅಸಮವೀರ ವೈಷ್ಣವನೀತ | ವಸುಧಿಯೊಳಗೆ ಶರಣ ಜನಕೆ | ವಶವಾಗಿಯಿಪ್ಪ ಉಗ್ರೇಶನೀತಾ 4 ಹೇಮಕೂಟಾದ್ರಿ ನಿಲಯನೀತ | ರಾಮದೇವ ವಾಸವಂದ್ಯ | ಸೋಮವರ್ಣನೀತ ಸಕಲ | ಕಾಮಿತಾರ್ಥವ ಕೊಡುವನೀತ | ಯಾಮ ಯಾಮಕೆ ಮನದೊಳು ನಿಂದು | ಕ್ಷೇಮ ಮಾರ್ಗಕ್ಕೆ ಪ್ರೇರಕÀನೀತ | ರಾಮ ವಿಜಯವಿಠ್ಠಲನಂಘ್ರಿ | ನಾಮನೆನಿಸಿ ಕೊಂಡಾಡುವನೀತಾ5
--------------
ವಿಜಯದಾಸ
ಜಯದೇವಿ ಜಯದೇವಿ ಜಯ ಬಗಳಾಮುಖಿಯೇಜಯವೆಂದು ಬೆಳಗುವೆನು ಜಯಭಕ್ತ ಸಖಿಯೇ ಪ ನಿತ್ಯ ಪೀತೋಪಚರಣೆಪೀತಕುಂಡಲ ಹಾರಪೀತ ವರ್ಗಾವರಣೆಪೀತಮೂರ್ತಿಯ ನೆನೆವೆ ಪೀತ ಪ್ರಿಯೆ ಸ್ಮರಣೆ 1 ಬತ್ತೀಸಾಯುಧ ಪಿಡಿದೆ ಭಯಂಕರಿ ಉಗ್ರೇಶತ್ರುನಾಶಕಿ ನೀನು ಭಕುತ ಸಾಹಸ್ರೇಮತ್ತೆ ಹುಡುಕುತ್ತಿರುವೆ ದುಷ್ಟರನು ಶೀಘ್ರೆನಿತ್ಯ ನಾ ಭಜಿಸುತಿಹೆ ಮನವ ಏಕಾಗ್ರೇ 2 ಬ್ರಹ್ಮ ಚಿದಾನಂದ ಬಗಳಾಮುಖಿ ರಾಣಿಹಮ್ಮಳಿದ ಮಹಿಮರಾ ಮೆಚ್ಚಿನ ಕಟ್ಟಾಣಿಬ್ರಹ್ಮರಂಧ್ರದೊಳು ವಾಸಿಸುತಿಹ ದಿನಮಣಿಬಿಮ್ಮನೆ ನಮಗೊಲಿಯೆ ಶೀಘ್ರದಿಂ ಕೃಪಾಣಿ 3
--------------
ಚಿದಾನಂದ ಅವಧೂತರು
ನೇತ್ರ - ತ್ರಯನೇ | ಅಹಿಪದ ಪಾತ್ರಾ ||ಗೋತ್ರಾರಿ ಪಂಕೇರುಹ ಮಿತ್ರಾ | ಸ್ತೋತ್ರ ಪಾತ್ರ ಶತಪತ್ರ ಪ ಚಿತ್ರ ಚರಣ ಭುವನತ್ರಯ ದೊಳಹಂತತ್ವ ವ್ಯಾಪ್ತ ಗೌರವ ಗಾತ್ರಾ ಅ.ಪ. ಸ್ಥಾಣು ವೃಷಭೇಕ್ಷಣ ನೀರಕ್ಷ 1 ಪಾವಕ ಶ್ವೇತ ಗಿರೀಶ ಉಗ್ರೇಶ 2 ಸಿರಿ ಲೋಲನ ತೋರ್ವುದು3
--------------
ಗುರುಗೋವಿಂದವಿಠಲರು
ಪತಿ ಎನಿಪ | ರುದ್ರದೇವನೆ ನಮೋಕಾದ್ರವೇಯನ ಪದ | ಭದ್ರವೋ ನಿನಗೆ ಪ ನಿಟಿಲಾಕ್ಷ | ಶ್ಮಶಾನದಲಿ ದೀಕ್ಷಅಕ್ಷಾರಿ ಪದದೀಕ್ಷ | ಪಕ್ಷಿವಹ ಕೃಪೆ ಈಕ್ಷಾ 1 ವೃಷನಾಭ ವಶದರ್ಪ | ವೃಷ ಋಷಭ ವೃಷಾಂಕವೃಷಶೃಂಗ ವೃಷದ್ವಜನೆ | ವೃಷಭೇಕ್ಷಣಾ |ವೃಷ ಭೂತ ವೃಷ ಶರನೆ | ವೃಷಪತಿ ವೃಷಾ ವರ್ತವೃಷಾಯುಧ ವೃಷೇಶ್ವರನೆ | ವೃಷಭೋದರಪಾಹಿ2 ದೂರ್ವಾಸ ಭೂವನೇಶ | ಸುರಪೇಶ ಉಗ್ರೇಶಗೌರೀಶ ಪ್ರಮಥೇಶ | ಅವ್ಯಕ್ತ ಕೇಶಾ |ಚೀರ ವಾಸ ಸುವಾಸ ಸ್ವರ್ಣಕೇಶ ಭೂತೇಶಈರಪತಿ ಗುರು ಗೋವಿಂದ | ವಿಠಲ ಭಜಕೇಶ 3
--------------
ಗುರುಗೋವಿಂದವಿಠಲರು
ಲಿಂಗಾ ಅಂಗಜಹ - ಮಂಗಳ | ಗಂಗಾಧರ ಕಾಯೊತುಂಗಾ ಘರಣ್ಯ ಅನಳಾ ಪ ತಿಂಗಳ ಧರ ಹರ | ಅಂಗಜ ಪಿತ ಸಖಮಂಗಳಾಂಗ ಕೃ | ಪಾಂಗ ದಯಾಳೊಅ.ಪ. ಭವ | ಭೀಮ ಮಹಾಘನಕೋಮಲಾಂಗಿ ತವ | ವಾಮಾಂಗನೆಗೆಆ ಮಹ ಮಂತ್ರವ | ರಾಮತಾರಕವನೇಮದಿ ಪೇಳ್ದ ಸು | ತ್ರಾಮ ವಂದಿತನೆ 1 ಭುಜಗ ಭೂಷಣನೆಸುಜನ ಸುರದ್ರುಮ | ಗಜವರದ ಪ್ರಿಯನಿಜಪತಿ ಪವನನ | ಭಜಿಸಿ ಬಹು ವಿಧದಿಅಜಗರ ಪದವಿಯ | ನಿಜವಾಗಿ ಪಡದೆ 2 ಭೂತೇಶ | ಭಸುಮ ಭೂಷವರ ವ್ಯೋಮಕೇಶ ಉಗ್ರೇಶ ||ಶರಣರ ತೋಷ | ವಿಶ್ವೇಶ | ಕಾಶಿ ಪುರೀಶಸರಿತ್ಕಪಿಲ ತಟದಿ ವಾಸ ||ವರ ಗೌರೀವರ | ಪರಮ ದಯಾನಿಧೆಚರಣಾಂಬುಜಗಳಿ | ಗೆರಗಿ ಬೇಡುವೆನೊಗುರು ಗೋವಿಂದ ವಿಠಲನ | ಚರಣ ನೀರೇರುಹನಿರುತ ಸ್ಮರಿಸುವಂಥ | ವರ ಮತಿ ಪಾಲಿಸು 3
--------------
ಗುರುಗೋವಿಂದವಿಠಲರು
ಶಂಭೋಶಿವಹರ ತ್ರಿಯಂಬಕ ಶ್ರೀಜಗ - ದಂಬಾರಮಣ ಪರಿಪಾಲಯಾ ಪ ಅಜಿನಾಂಬರಧರ ಭಜಿಪರಾರ್ತಿಹರ ತ್ರಿಜಗಪಾವನ ಗಂಗಾಧರ1 ನಂದಿವಾಹನ ಸುರವೃಂದ ಸುಪೂಜಿತ ಇಂದ್ರ ವಂದಿತ ಗರಕಂಧರ 2 ರುಂಡಮಾಲಧರ ಶÀುಂಡಾಲಮದಹರ ಚಂಡವಿಕ್ರಮ ಉಗ್ರೇಶ್ವರ 3 ದಕ್ಷಾಧ್ವರ ಹರದುಷ್ಟಶಿಕ್ಷಕ ವಿರೂ - ಪಾಕ್ಷನೆ ವೈರಾಗ್ಯನಿಧೆ 4 ವಾಮದೇವನೆ ಭಕ್ತಾಕಾಮಿತ ಫಲದನೆ ಕಾಮಸಂಹರ ಕರುಣಾಕರ 5 ಮೃತ್ಯುಂಜಯನೆ ಯನ್ನಪಮೃಹಾರಕಹರಿ ಭಕ್ತಾಗ್ರೇಸರ ಶಿವಶಂಕರ 6 ರಾಮನಾಮಲೋಲ ತಾಮಸಖಳಕಾಲ ಧಿಮಂತಜನ ಪರಿಪಾಲಕ 7 ಗಿರಿಜಾರಮಣ ನಿನ್ನ ಗುರುವೆಂದು ಮೊರೆಹೊಕ್ಕೆ ಹರಿಭಕ್ತಿಯಲ್ಲಿ ಮನನಿಲ್ಲಿಸೋ 8 ನಂಬಿದೆ ನಿನ್ನ ಪಾದಾಂಬುಜ ಯುಗಳ ಹೇ ರಂಭಜನಕ ಪೊರಿಯನ್ನನು9 ರಜತಾಚಲನಿವಾಸ ರಜನಿಚರ ವಿನಾಶ ಅಜನಸುತನೆ ದಿಗಂಬರ 10 ಸರ್ವಶ್ರೀ ವರದೇಶವಿಠಲನ ಸಖ ಮು - ಪ್ಪುರಹರ ಶ್ರೀ ಮಹಾದೇವ 11
--------------
ವರದೇಶವಿಠಲ
ಹೌರನೆ ಮತಿಯಿತ್ತು ಸಲಬೇಕೆನ್ನ ಪ ಗೌರವ ಗಾತುರ ತೌರ ಮನೆಯ ಹರ ಕೌರವಾಂತಕನೊಳು ಶೌರಿಯ ತೋರಿಸೋ ಅ.ಪ. ಮೃಗಲಾಂಛನ ಸನ್ಮೌಳಿ ಶಿವ ಮಹಾದೇವ ತ್ರಿಗುಣಾತುವ ಗಾತುರ ಭಕ್ತ ಸಂಜೀವ ನಿಗಮತುರಗ ಪಾವ ವನಮಾಲ ಪಾವಾ ಮೃಗಪಾಣಿ ಮೃತ್ಯುಂಜಯ ಸುಪ್ರಭಾವ ನಗೆಪಗೆ ಮಗನನು ಮೃಗನೆವನದಿ ಕಾ ಅಗಣಿತ ಗುಣಮಣಿ ವಾಲಗ ನಿನ್ನವರೊಳು ಮಗಳೆ ಮಗುಳೆ ಕೊಡು ಗಗನೇಶ ಜನಕ 1 ಅವನಿಯೋಳ್ ಕೈಲಾಸ ವಾಸ ಅಪ್ರತಿ ನವ ವಿಧ ಭಕುತಿ ಕೊಡು ಶಂಭು ಪಶುಪತಿ ದಿವಸ ದಿವಸ ವೈಶ್ರವಣ ಬಾಂಧವ ದೇ ಹವೆ ನಿನಗೊಪ್ಪಿತು ಅವನಿಯೊಳುತ್ತಮ ಶ್ರವಣದೊಳಗೆ ರಾಘವನ ಕಥಾಮೃತ ಸವಿದೋರುವುದೋ ಭುವನ ಪವಿತ್ರ 2 ಅಜಭೃಕುಟ ಸಂಭೂತ ಭೂತಗಣೇಶ ಕುಂಡಲ ವಿಭೂತಿ ಭೂಪ ನಿಜ ಮಹಾ ಸ್ಮಶಾನವಾಸ ಉಗ್ರೇಶ ತ್ರಿಜಗಪಾವನ ಗಂಗಾಧರ ವಿಶ್ವೇಶ ಸುಜನರ ಹೃದಯ ಪಂಕಜದೊಳ್ ಮಿನುಗುವ ಗಜ ಪಾಲಕ ರಂಗ ವಿಜಯವಿಠ್ಠಲನಂಘ್ರಿ ಭಜನೆಯ ಕೊಡು ಭೂಭುಜ ದೇವೋತ್ತಮ ಗಜ ಅಜಿನಾಂಬರ 3
--------------
ವಿಜಯದಾಸ