ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಮದನ ಜನಕ ಪುರು| ಷೋತ್ತಮ ಪರತರ ಶೇಷಗಿರಿವಾಸಾ| ಪ ಕರುಣ ನೋಟದಿ ಸರ್ವಜೀವನುಳಹಿ ಕೊಂಡು| ಅಮೃತ ನುಣಿಸಿದನು| ಧರಣಿಯ ಮೋಹಿಸಿ ಬಿಗಿದಪ್ಪಿ ತರಳನು| ಹರಣಗಾಯ್ವ ದೇವ ಶರಣೆಂದೆನಲ್ಲದೆ| ತೆರೆಗಣ್ಣಿನವನೇಂದೆನೇ ಉಬ್ಬಿಗೊಂಡ| ಬಿರುಸು ಮೈಯ್ಯವನೆಂದನೇ ದಾಡಿಲಿಂದ| ಸುರಿವ ಜೊಲ್ಲುವನೆಂದನೇ ಬ್ರಹ್ಮಾದಿಗ| ಳರಸ ಉಗ್ರಾವ ತಾರೀ ಬಾಯೆಂದೆನಲ್ಲದೆ1 ಚಿಕ್ಕಮಾಟದಿ ಬಹು ಚಲುವ ಭೂಸುರರುಗೆ ಪುಕ್ಕಟೆ ಅರಸು ತನವ ಕೊಟ್ಟನು| ಸಿಕ್ಕಿದ ದೇವರ ಸೆರೆಬಿಡಿಸಿದ ಕುಂತೀ| ಸಾರಥಿ ಶರಣೆಂದೆನಲ್ಲದೇ| ಕಕ್ಕು ಲಾತೆವನೆಂದೆನೇ ಕೊಡಲಿಹೊತ್ತ| ನಿಕ್ಕರುಣಿಕನೆಂದನೇ ವಾನರ ಕೂಡಾ| ಹೊಕ್ಕವನನೆಂದೆನೇ ಕೌರವರ| ಸೊಕ್ಕು ಮುರಿದ ಸ್ವಾಮಿ ಬಾಯೆಂದೆನಲ್ಲದೆ2 ನೊಸಲಗಣ್ಣಿನವನ ಸಾಹ್ಯಕ ಶರವಾಗಿ| ಯಶೆವ ಮುಪ್ಪುರವನು ಧರೆಗಿಳುಹೀ| ವಸುಧಿಲಿ ಕಲಿಮಲ ಬಿಡಿಸಿ ಸಜ್ಜನರಪಾ| ಲಿಸಿದ ಮಹಿಪತಿ ಸುತಪ್ರಭು ಎಂದೆನಲ್ಲದೆ ಹುಸಿನುಡಿಯುವ ನೆಂದನೇ ಯವನರ| ದೆಸಿಗೆಡಿಸಿದ ನೆಂದನೇ ಆರಿಗೆ ನೆಲೆ| ತುಸುಗುಡದವ ನೆಂದನೇ ಜಗದೊಳು| ದಶ ಅವತಾರನೇ ನಮೋ ಎಂದೆ ನಲ್ಲದೆ.3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಸರ್ವೋತ್ತಮನ ಪರಮ ಪುರುಷ ಪರಮಾತ್ಮನ ವರ ಶಿರೋಮಣಿ ಪುರುಷೋತ್ತಮನ 1 ಧರೆಯ ಗೆಲಿದ ಮಹಾಶೂರನ ವರವಿತ್ತ ಉಗ್ರಾವತಾರನ 2 ಧರೆಯ ಬೇಡಿದ ಬ್ರಾಹ್ಮಣೋತ್ತಮನ ಪರಶುಪಿಡಿದ ಪರಾಕ್ರಮನ ಸ್ಥಿರ ಪದವಿತ್ತ ದೇವೋತ್ತಮನ ಗಿರಿಯನೆತ್ತಿದ ಮಹಾಮಹಿಮನ 3 ಗುಪಿತ ಪೊಕ್ಕಿದ್ದನ ಅಪರಂಪಾರ ಮಹಿಮಾನಂದನ ಒಪ್ಪುವ ತೇಜಿನೇರಿದ್ದನ ಕಪಟನಾಟಕ ಪ್ರಸಿದ್ಧನ 4 ಭಕ್ತವತ್ಸಲ ಭವನಾಶನ ಮುಕ್ತಿದಾಯಕ ದೇವ ದೇವೇಶನ ಮಹಿಪತಿ ಆತ್ಮ ಪ್ರಾಣೇಶನ ಗುರು ಭಾನುಕೋಟಿ ಪ್ರಕಾಶನ 5
--------------
ಕಾಖಂಡಕಿ ಶ್ರೀ ಮಹಿಪತಿರಾಯರು