ಭಾವ ಭಕುತಿಗೆ ವಲಿವ ನೋಡಿರೋ|
ದೇವ ದೇವ ಮುಕುಂದನು|
ಆವನಾಗಲಿ ತನ್ನ ನಂಬಿದ|
ಸೇವಕರನು ದ್ಬರಿಸಿ ಪೊರೆವನು ಪ
ಆಚರಣೆ ನೋಡಿದನೆ ವ್ಯಾಧನ|
ನೀಚನೆಂದನೆ ವಿದುರನ|
ಯೋಚಿಸಿದನೇ ಧ್ರುವನ ವಯಸನು|
ನಾಚಿದನೇ ಕುಬ್ಜೆಯನು ಕೂಡಲು1
ಏನು ವಿದ್ಯೆ ಗಜೇಂದ್ರದೋರಿದ|
ಏನು ಕೊಟ್ಟ ಸುಧಾಮನು|
ಏನು ಪೌರುಷ ಉಗ್ರಸೇನನ|
ಏನುಣಿಸಿದಳು ಹರಿಗೆ ದ್ರೌಪದಿ2
ಆವಶೇವೆಯೋ ನರನ ಬಂಡಿಯ|
ಬೋವತನವನು ಮಾಡಲು|
ಭಾವಿಸಲು ಗುರುಮಹಿಪತಿ ಪ್ರಭು|
ಕಾವಕರುಣಿಯೋ ಮಹಿಮೆ ತಿಳಿಯದು3