ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಯಾಕೆಲೋ ರಂಗಾ | ನಿನ್ನರಸಿಯೊಳುಮುನಿದಿರುವೆ | ಲೋಕವೀರೇಳು ರಕ್ಷಿಪ ಮುದ್ದು ರಂಗಾ ಪ ನಾಲ್ಕನೆಯ ಅವತಾರದಲಿ ಉಗ್ರವಾಗಿರೆ | ಆ ಕಮಲಜ ಮುಖ್ಯ ಬೆದರುತಿರಲು | ಲಕುಮಿ ತಾಕಂಡು ತೊಡೆಮೇಲೆ ಕುಳ್ಳಿರಲು | ಈ ಲೋಕದೊಳು ಶಾಂತನೆನಿಸಿದಳೊ ನಿನ್ನರಿಸಿ 1 ಗುಂಜೆಯಮಾಲೆ ಕೊರಳಿಗೆ ಹಾಕಿ ಗೋವಳರ | ಎಂಜಲ ತಿನುತ ಗೋಗಳ ಕಾಯುತಿರಲು | ಕಂಜನಯನೆಯು ಬಂದು ಸಕಲ ಶಿರಿಯಿಂದಲಿ | ರಂಜಿಸಿದಳೊ ಜಗದೊಳಗೆ ನಿನ್ನ ಅರಿಸಿ 2 ಇಂತರಿದು ನಾನಾಪರಿಯಿಂದ ನಿನ್ನ ಮೇಲೇ | ಸಂತತ ಉಪಕಾರ ಮಾಡಿರೆ ನೀನು | ಕಂತುಮಾತೆಯ ತಪ್ಪು ನೋಡುವರೇನೋ | ಆ- ನಂತನೇ ಏಳು ಮಹೀಪತಿನಂದನೊಡೆಯಾ 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು