ದೇವದೇವತೆಗಳ ಸ್ತುತಿ
ವೀರನ ನೋಡಿರೈ ನರಮೃಗಾಕಾರನ ಪಾಡಿರೈ ಪ
ಕಾರ್ಪರ ಋಷಿ ತಪಕೊಲಿದು ಅಶ್ವತ್ಥದಿ ಮೆರೆವಾ
ಭಕುತರ ಪೊರೆವಾ ಅ.ಪ
ದುರಿತ ತಿಮಿರಕೆ ಸವಿತ
ವ್ರಾತ ಸೇವಿತ ತ್ವರಿತ
ಮಧ್ಬಂಧು ಪೊರೆಯೊನೀನೆಂದು
ಪ್ರಾರ್ಥಿಸುವರಿಗಭೀಷ್ಟಿಯಗರಿಯಲು ದೇವ ತರುಸ್ವಭಾವ 1
ಉಗ್ರನಾದರು ಭಕುತಾಗ್ರಣಿಗಳಿಗೆ ಅನುಗ್ರ ಒಲಿವನು ಶೀಘ್ರ
ವಾಗ್ಧೇವಿಯರ ಸನಾಜ್ಞದಿ ನಮಿಸಿ ಪ್ರಹ್ಲಾದ ಸ್ತುತಿಸಲು ಒಲಿದ
ಉಗ್ರವದನ ಶಾಲಿಗ್ರಾಮಗಳ ರೂಪದಲಿ ವೃ-
ಭಾರ್ಗವಿ ಪ್ರಕಟನಾಗಿಹನ 2
ತೋರಿಸುವದಕೆ
ಅಸುರನ ಮಥಿಸಿ
ನೆಲಸಿಕರುಣದಿ
ದಿವಿಜರೊಡೆಯನ3
ಪೋಪುದು ವೃಜಿನ
ತಿಳಿವದು ಮುನ್ನ
ಭಾನು ಕರ್ಕಾಟಸ್ಥಾನದಿ ಬರುವ ಕಾಲದಲಿ ತೀರ್ಥಗಳಲ್ಲಿ
ಹೃದಯದಿ ಪೊಳಿವ 4
ತರುವರ ಸಂಸ್ಥಾ
ಚರಿತ ತ್ರಿಗುಣಾತೀತ
ಪದಯುಗಲ ಬಿಡದನುಗಾಲ
ಸಾರಿ ಭಜಿಪರಿಗಪಾರ ಸೌಖ್ಯಗಳ ಗರಿವ ವಿಘ್ನವ ತರಿವ5