ಕರ್ಮ ದೊಡ್ಡದೊ ಸ್ವಾಮಿ ನಿನ್ನ ಮಹಿಮೆ ದೊಡ್ಡದೊ
ಮುನ್ನಿನ ದೃಷ್ಟಾಂತದಿಂದ ನಿರ್ಣಯಿಸುವ ನಿತ್ಯಾನಂದ ಪ.
ಅಡವಿಯಲ್ಲಿ ನಿಂತು ಮೃಗವ ಬಡಿದು ತಿಂಬ ಬ್ಯಾಡ ಕಡೆಗೆ
ಗಿಡವ ಕೂಡಿಸೆಂದ ನುಡಿಯ ದೃಢಕೆ ಮೆಚ್ಚಿ ಕಡೆಹಾಯಿಸಿದೆ 1
ಉಗ್ರಭಾವದಿಂದ ತಮ್ಮ ಅಗ್ರಜರನ್ನು ಕೊಲಿಸಿದಂಥ
ಸುಗ್ರೀವ ವೈಶ್ರವಣರ ಭಕ್ತಾಗ್ರಣ್ಯರೆಂದು ಕಾಯ್ದೆ 2
ಕರ್ಮ ಬಾಧೆ ಕಳದು ಕರುಣದಿಂದ
ಮಾಧವ ನೀ ಸಲಹೊ ಶೇಷ ಭೂಧರೇಂದ್ರ ಶಿಖರವಾಸ 3