ಒಟ್ಟು 6 ಕಡೆಗಳಲ್ಲಿ , 6 ದಾಸರು , 6 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಚಂದ್ರಶೇಖರ ಸುಮನಸೇಂದ್ರ ಪೂಜಿತ ಚರಣಾ ಹೀಂದ್ರ ಪದಯೋಗ್ಯ ವೈರಾಗ್ಯ | ವೈರಾಗ್ಯಾ ಪಾಲಿಸಮ ರೇಂದ್ರ ನಿನ್ನಡಿಗೆ ಶರಣೆಂಬೆ 1 327ನಂದಿವಾಹನ ವಿಮಲ ಮಂದಾಕಿನೀಧರನೆ ವೃಂದಾರಕೇಂದ್ರ ಗುಣಸಾಂದ್ರ | ಗುಣಸಾಂದ್ರ ಎನ್ನ ಮನ ಮಂದಿರದಿ ನೆಲೆಸಿ ಸುಖವೀಯೊ 2 328ಕೃತ್ತಿವಾಸನೆ ನಿನ್ನ ಭೃತ್ಯಾನುಭೃತ್ಯ ಎ ನ್ನತ್ತ ನೋಡಯ್ಯ ಶುಭಕಾಯ ಭಕ್ತರಪ ಮೃತ್ಯು ಪರಿಹರಿಸಿ ಸಲಹಯ್ಯ 3 329 ನೀಲಕಂಧರ ರುಂಡಮಾಲಿ ಮೃಗವರಪಾಣಿ ಶೈಲಜಾರಮಣ ಶಿವರೂಪಿ | ಶಿವರೂಪಿ ನಿನ್ನವರ ನಿತ್ಯ ಪರಮಾಪ್ತ 4 330ತ್ರಿಪುರಾರಿ ನಿತ್ಯವೆನ್ನಪರಾಧಗಳ ನೋಡಿ ಕುಪಿತನಾಗದಲೆ ಸಲಹಯ್ಯ | ಸಲಹಯ್ಯ ಬಿನ್ನೈಪೆ ಕೃಪಣವತ್ಸಲನೆ ಕೃಪೆಯಿಂದ 5 331ಪಂಚಾಸ್ಯ ಮನ್ಮನದ ಚಂಚಲವ ಪರಿಹರಿಸಿ ಸಂಚಿತಾಗಾಮಿ ಪ್ರಾರಬ್ಧ | ಪ್ರಾರಬ್ಧ ದಾಟಸು ವಿ ರಿಂಚಿಸಂಭವನೆ ಕೃತಯೋಗ 6 332 ಮಾನುಷಾನ್ನವನುಂಡು ಜ್ಞಾನ ಶೂನ್ಯನು ಆದೆ ಅನುದಿನ | ಅನುದಿನದಿ ನಾ ನಿನ್ನ ಧೀನದವನಯ್ಯ ಪ್ರಮಥೇಶ 7 333 ಅಷ್ಟಮೂತ್ರ್ಯಾತ್ಮಕನೆ ವೃಷ್ಟಿವರ್ಯನ ಹೃದಯಾ ಧಿಷ್ಠಾನದಲ್ಲಿ ಇರದೋರು | ಇರದೋರು ನೀ ದಯಾ ದೃಷ್ಟಿಯಲಿ ನೋಡೊ ಮಹದೇವ 8 334 ಪಾರ್ವತಿರಮಣ ಶುಕ ದೂರ್ವಾಸ ರೂಪದಲ್ಲಿ ಉರ್ವಿಯೊಳಗುಳ್ಳ ಭಕುತರ | ಭಕುತರ ಸಲಹು ಸುರ ಸಾರ್ವಭೌಮತ್ವ ವೈದಿದೆ 9 335 ಭಾಗಿಥಿಧರನೆ ಭಾಗವತ ಜನರ ಹೃ ದ್ರೋಗ ಪರಿಹರಿಸಿ ನಿನ್ನಲ್ಲಿ | ನಿನ್ನಲ್ಲಿ ಭಕ್ತಿ ಚೆ ನ್ನಾಗಿ ಕೊಡು ಎನಗೆ ಮರೆಯಾದೆ 10 336 ಮೃಡದೇವ ಎನ್ನ ಕೈಪಿಡಿಯೊ ನಿನ್ನವನೆಂದು ಬಡವ ನಿನ್ನಡಿಗೆ ಬಿನ್ನೈಪೆ | ಬಿನ್ನೈಪೆನೆನ್ನ ಮನ ದೃಢವಾಗಿ ಇರಲಿ ಹರಿಯಲ್ಲಿ 11 337 ವ್ಯೋಮ ಕೇಶನೆ ತ್ರಿಗುಣನಾಮ ದೇವೋತ್ತಮ ಉ ವಿರುಪಾಕ್ಷ ಮಮ ಗುರು ಸ್ವಾಮಿ ಎಮಗೆ ದಯವಾಗೊ 12 338 ಅಷ್ಟ ಪ್ರಕೃತಿಗನೆ ಸರ್ವೇಷ್ಟ ದಾಯಕನೆ ಪರ ಮೇಷ್ಟಿ ಸಂಭವನೆ ಪಂಮಾಪ್ತ | ಪರಮಾಪ್ತ ಎನ್ನದಯ ದೃಷ್ಟಿಯಿಂದ ನೋಡಿ ಸಲಹಯ್ಯ 13 339ಪಂಚಾಸ್ಯ ದೈತ್ಯಕುಲ ವಂಚಕನೆ ಭಾವಿ ವಿ ರಿಂಚಿ ಶೇಷನಲಿ ಜನಿಸಿದೆ | ಜನಿಸಿದೆ ಲೋಕತ್ರಯದಿ ಸಂಚಾರ ಮಾಳ್ಪೆ ಸಲಹಯ್ಯ 14 340 ಉಗ್ರತಪ ನಾ ನಿನ್ನನುಗ್ರಹದಿ ಜನಿಸಿದೆ ಪ ಸಂತೈಸಿ ಇಂದ್ರಿಯವ ನಿಗ್ರಹಿಪ ಶಕ್ತಿ ಕರುಣೀಸೊ 15 341 ಲೋಚನತ್ರಯ ನಿನ್ನ ಯಾಚಿಸುವೆ ಸಂತತವು ಗುಣರೂಪ ಕ್ರಿಯೆಗಳಾ ಲೋಚನೆಯ ಕೊಟ್ಟು ಸಲಹಯ್ಯ16 342ಮಾತಂಗ ಷಣ್ಮುಖರ ತಾತ ಸಂತತ ಜಗ ನ್ನಾಥ ವಿಠ್ಠಲನ ಮಹಿಮೆಯ | ಮಹಿಮೆಯನು ತಿಳಿಸು ಪ್ರೀತಿಯಿಂದಲೆಮಗೆ ಅಮರೇಶ 17 343 ಭೂತನಾಥನ ಗುಣ ಪ್ರಭಾತ ಕಾಲದಲೆದ್ದು ಪ್ರೀತಿಪೂರ್ವಕದಿ ಪಠಿಸುವ | ಪಠಿಸುವರ ಜಗ ನ್ನಾಥವಿಠಲನು ಸಲಹುವ 18
--------------
ಜಗನ್ನಾಥದಾಸರು
ಎಂದು ನಿನ್ನ ದಯವು ಆಗೋದೋ ಇಂದಿರೇಶ ದುರಿತ ಹಿಂದಕ್ಕ್ಹೋಗೋದೊ ಮಂದಬುದ್ಧಿಯಿಂದ ನಾಲಿಗೆ ಹಿಂದೆ ಮುಂದೆ ನೋಡುತಿಹುದು ಸಂದೇಹ ಬಿಟ್ಟು ಗೋವಿಂದನ್ನ ನೆನೆಯಲಿಕ್ಕೆ ಪ ಹರಿಯ ತನಯ ಹರಿಯು ಹರಿಯೆಂದು ಒರೆಯುತಿರಲು ಗಿರಿಯನ್ಹತ್ತಿಸಿ ಉರಿಗೆ ಕೆಡುಹಿದ ಕರುಣವಿಲ್ಲದ ಹಿರಣ್ಯಕನು ಪರಮ ಬಾಧೆ ಬಡಿಸುತಿರಲು ಕರೆಯೆ ಕಂಬದಿ ಬಂದು ನರ- ಹರಿಯ ನಾಮ ಕಾಯ್ತು ಅವನ 1 ಕಂತುಪಿತನೆ ನಿನ್ನ ಭಜಿಸದೆ ದ್ವಿಜನು ಕೆಟ್ಟು ಅಂತ್ಯಜ ಸ್ತ್ರೀಯಳ ಕೂಡಿ ಮೆರೆಯಲು ಅಂತ್ಯಕಾಲದಲ್ಲಿ ಏಕಾಂತದಿಂದ ಮಗನ ಕರೆಯೆ ಕಂತುನಯ್ಯ ನಿನ್ನ ನಾಮ ಎಂಥಗತಿಯ ಕೊಟ್ಟಿತವಗೆ2 ದುಷ್ಟಪತ್ನಿ ನುಡಿಗೆ ಉತ್ತಾನಪಾದ ತನ್ನ ಪುತ್ರನಿಂದ ರಹಿತನಾಗಲು ಅಚ್ಚುತನ ಧ್ಯಾನದಲಾಸಕ್ತನಾಗೆ ಉಗ್ರತಪಕೆ ಮೆಚ್ಚಿಕೊಟ್ಟ ನಮ್ಮ ಸ್ವಾಮಿ ಹೆಚ್ಚಿನ ಲೋಕ ಪದವಿ ಧ್ರುವಗೆ 3 ಬಂದು ಭರದಿ ಮಡುವ ಕಲಕುವೋ ಮದಡಗಜವ ಕಂಡು ಮಕರಿ ಕಾಲು ಹಿಡಿಯಲು ಬಂಧುಗಳಿಂದ ರಹಿತವಾಗಿ ಒಂದು ಸಾವಿರ್ವರುಷ ಬಾಳಲು ಇಂದಿರೇಶ ನಿನ್ನ ಸ್ಮರಣೆಯಿಂದ ಶಾಪ ವಿಮೋಚಿತನಾದ 4 ಸೃಷ್ಟಿಗಧಿಕ ನಿನ್ನ ದಯವಿರೆ ಪಾಂಡುಸುತರ ಪಟ್ಟದ ರಾಣಿ ಸಭೆಗೆ ಎಳೆಯಲು ವಸ್ತ್ರಹರಣ ಕಾಲದಲ್ಲಿ ಭಕ್ತಿಯಲ್ಲಿ ಭೀಮೇಶ- ಕೃಷ್ಣನ ಮುಟ್ಟಿ ಭಜಿಸೆ ಕೃಷ್ಣೆಗಾಕ್ಷಣ ತೃಪ್ತನಾಗಿ ಕೊಟ್ಟೆಯೊ ವಸನ 5
--------------
ಹರಪನಹಳ್ಳಿಭೀಮವ್ವ
ಪೇಳಲಳವಲ್ಲ ನಮ್ಮಯ್ಯನಾಟ ತಿಳಿವರಾರಿಲ್ಲ ಪ ಪೇಳೇನೆಂದರೆ ನಿಲುಕೊ ಮಾತಲ್ಲ ಹೇಳಿಕೆ ಕೇಳಿಕೆಗೆ ಮೀರಿದ ಮೇಲುಮಹಿಮನ ಲೀಲಾಜಾಲವ ಅ.ಪ ಸಾಧ್ಯ ಮಾತಲ್ಲ ಜಗಸೂತ್ರನಾಟಕೆ ಆದಿ ಅಂತಿಲ್ಲ ಜಗಮೂರರೊಳಗೆ ಸಾಧನಿಕರೆಲ್ಲ ನಿಜಭೇದ ತಿಳಿದಿಲ್ಲ ಸಾಧನಿಟ್ಟು ಆವಕಾಲದಿಂ ನಾದ ತಡೆಯದೆ ವೇದಗಳ ಬಿಡ ದೋದಿ ದಣಿದು ಇನ್ನು ಆದಿಮಹಿಮನ ಪಾದಕಾಣವು 1 ಬಾಗಿ ಅನುಗಾಲ ನಿಜತತ್ವಭೇದಿಸಿ ನೀಗಿ ಭವಮಾಲ ಜಡವಾದ ದುರ್ಭವ ರೋಗಗಳುಯೆಲ್ಲ ಪಾರಾಗಿ ನಿರ್ಮಲ ರಾಗಿ ಪರಮಯೋಗ ಒಲಿಸಿ ಯೋಗಿಗಳು ಮಹ ಉಗ್ರತಪದಿಂ ಯೋಗಬೆಳಗಿನೊಳಗೆ ನೋಡಲು ನಾಗಶಯನ ಮಹಿಮೆ ತಿಳಿಯದು 2 ಸಾನಂದಾದಿಗಳು ಮಹ ಭೃಗು ಗಾರ್ಗೇಯ ಮನು ಮುನ್ಯಾದಿಗಳು ದೇವರ್ಷಿ ನಾರದ ಶೌನಕಾದಿಗಳು ಘನ ಸಪ್ತಋಷಿಗಳು ಅನಂತಾನಂತ ಪ್ರಳಯದಿಂದ ಜ್ಞಾನ ಬೆಳಗಿನೋಳ್ನಿಂತು ನೋಡಿ ಕಾಣದೆ ಶ್ರೀರಾಮಪಾದ ಮೌನದೋಳ್ಮುಳುಗೇಳುತಿಹರು 3
--------------
ರಾಮದಾಸರು
ಮತ್ತಾರು ತಿಳಿಯರಲ್ಲಾ ಸದ್ಭಕ್ತಿಯ ಪ ತಂತ್ರಸಾರದಿಂದ ಪೂಜೆ ಮಂತ್ರದಿಂದ ಮಾಡಿ ಡಂಭ | ಯಂತ್ರದೊಳಗ ಸಿಲ್ಕ ಸಿಂತ್ರ ಹೋದರಲ್ಲದೇ 1 ಶಾಸ್ತ್ರವನೋದಿ ಹೇಳಿ ನಿಸ್ತರಿಸಿ ವಾದದಿಂದ | ದುಸ್ತರ ಹಮ್ಮಿನೊಳಗಸ್ತ ವಾದರಲ್ಲದೇ 2 ಇದ್ದು ಉಪವಾಸದಿಂದ ಉಗ್ರತಪವ ಮಾಡಿ | ಸಿದ್ಧಿಗಳ ತೋರಿ ಮೆರೆದು ಬಿದ್ದು ಹೋದರಲ್ಲದೇ 3 ಹಲವು ಕರ್ಮಗಳ ಮಾಡಿ ಫಲವ ಬೇಡಿಕೊಂಡು ತನ್ನ | ಘಳಿಕೆಯ ಸಂಸಾರದಿ ಕಳೆದುಕೊಂಡರಲ್ಲದೇ 4 ಇಂದಿರೆಪತಿಯ ಮನದಿಂದ ಅರಿತು ಪೂಜಿಸುವ | ತಂದೆ ಮಹಿಪತಿ ಪ್ರಭು ಹೊಂದಿದವರಲ್ಲದೇ 5
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ವ್ಯಗ್ರಬುದ್ಧಿಯು ನಿನಗೆ ಶ್ರೀಹರಿಯೆ ಸುಗ್ರಾಸನವು ನನಗೆ ಅಗ್ರದೈವರು ನೀನೇ ಗತಿಯೊ ಉಗ್ರತಪದಲಿ ಭಜಿಸುವಾತ್ಮಗೆ ಉಗ್ರರೂಪವ ತೋರಿ ವಿಧವಿಧಾ- ನುಗ್ರಹಿಪೆ ಅಮೃತಾನ್ನ ಭೋಜನ ಪ ಜನಿಸಲಮೃತ WಟÀವು ಸಿಂಧುವಿನೊಳು ವನಜನಾಭನೆ ವಂಚಿಸಿ ದನುಜ ಕಣಕದು ಇಲ್ಲದಾಗಿ ಅನುಮಿಷರಿಗತ್ಯಂತಮಿಕ್ಕೆ ಘನಹರುಷ ತೋರಿದೆಯು ಸುರರಿಗೆ ನಿನಗೆ ಮೆಲ್ಲಲು ಇರಿಸಲಿಲ್ಲಾ 1 ಧೀರ ದೂರ್ವಾಸ ಮುನಿ ಶಿಷ್ಯರ್ವೆರಸಿ ಹೋರಿದಾಹಾರಕ್ಕಾಗಿ ನೀರಜಾಕ್ಷಿಯು ಘೋರ ಬಂತೆಂದಾ ರಾತ್ರಿಯಲಿ ನೆನೆಯೆ ನಿನ್ನನು ಆ ರಭಸದೊಳು ಬಹುನಿಮಿಷÀದಿ ಸೂರಿ ಮಾಡ್ದೆಯೋ ಇಷ್ಟು ಭೋಜನಾ 2 ಸಖ ಸುದಾಮನು ಕಾಣಲು ಶ್ರೀಹರಿಯೆ ಭಕುತಿ ನೋಡಿ ಮೆಚ್ಚಿದಿ ಮುಕುತಿದಾಯಕ ಪರಮ ಪುರುಷನೆ ಭಕುತಿ ಭೋಜನವಿತ್ತೆನಗೆ ಸದಾ ಪ್ರಕಟ ನರಸಿಂಹವಿಠಲನೆ ಬಲು ನಿಕಟಮನ ಕೊಡು ನಿನ್ನ ಭಜಿಸುವಾ 3
--------------
ನರಸಿಂಹವಿಠಲರು
ಸಾಧನಕ್ಕೆ ಬಗೆಗಾಣೆನೆನ್ನಬಹುದೆ ಸಾದರದಿ ಗುರುಕರುಣ ತಾ ಪಡೆದ ಬಳಿಕ ಪ ಕಂಡಕಂಡದ್ದೆಲ್ಲ ಕಮಲನಾಭನ ಮೂರ್ತಿ ಉಂಡು ಉಟ್ಟದ್ದೆಲ್ಲ ವಿಷ್ಣು ಪೂಜೆ ತಂಡತಂಡದ ವಾರ್ತೆ ವಾರಿಜಾಕ್ಷನ ಕೀರ್ತಿ ಹಿಂಡು ಮಾತುಗಳೆಲ್ಲ ಹರಿಯ ನಾಮ 1 ವಾಗತ್ಯಪಡುವದೆ ವಿಧಿನಿಷೇಧಾರಚರಣೆ ರೋಗಾನುಭವವೆಲ್ಲ ಉಗ್ರತಪವು ಆಗದವರಾಡಿಕೊಂಬುವುದೆ ಆರ್ಶೀವಾದ ಬೀಗುರುಪಚಾರವೇ ಭೂತದಯವು 2 ಮೈಮರೆತು ಮಲಗುವುದೆ ಧರಣಿ ನಮಸ್ಕಾರ ಕೈಮೀರಿ ಹೋದದ್ದೆ ಕೃಷ್ಣಾರ್ಪಣ ಮೈ ಮನೋವೃತ್ತಿಗಳೆ ವಿಷಯದಲಿ ವೈರಾಗ್ಯ ಹೋಯ್ಯಾಲಿತನವೆಲ್ಲ ಹರಿಯ ವಿಹಾರ 3 ಹಿಡಿದ ಹಟ ಪೂರೈಸಲದು ಹರಿಯ ಸಂಕಲ್ಪ ನಡೆದಾಡುವೋದೆಲ್ಲ ತೀರ್ಥಯಾತ್ರೆ ಬಡತನವು ಬರಲದೇ ಭಗವದ್ಭಜನೆಯೋಗ ಸಡಗರದಲ್ಲಿಪ್ಪುದೆ ಶ್ರೀಶನಾಜ್ಞಾ 4 ಬುದ್ಧಿಸಾಲದೆ ಸುಮ್ಮನಿರುವುದೇ ಸಮ್ಮತವು ಯದೃಚ್ಛಾಲಾಭವೇ ಸುಖವುಯೆನಲು ಮಧ್ವಾಂತರ್ಗತ ಶ್ರೀ ವಿಜಯವಿಠ್ಠಲರೇಯ ಹೃದ್ಗತಾರ್ಥವ ತಿಳಿದು ಒಪ್ಪಿಸಿಕೊಳನೆ 5
--------------
ವಿಜಯದಾಸ