ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಯಾರಿಗೆ ದೂರುವೆನು ಗಿರಿಯ ರಾಯ ಯಾರೆನ್ನ ಸಲಹುವರು ಪ ಸಾರಿದ ಭಕ್ತ ಸಂಸಾರಿ ನಿನ್ನಯ ಪಾದ ವಾರಿಜವನು ತೋರಿ ಕಾರುಣ್ಯವೆನಗೀಯೊ ಅ.ಪ ಕಷ್ಟ ಜನ್ಮದಿ ಬಂದೆನು ಧಾರುಣಿಯೊಳು ದುಷ್ಟರಿಂದಲೆ ನೊಂದೆನು ನಿಷ್ಟುರ ಬೇಡವೊ ನಿನ್ನ ನಂಬಿದ ಮೇಲೆ ಸೃಷ್ಟಿಪಾಲಕ ಎನ್ನ ಬಿಟ್ಟು ಕಳೆಯಬೇಡ 1 ಹಿಂದೆ ಮಾಡಿದ ಕರ್ಮವು ಈ ಭವದೊಳು ಮುಂದಾಗಿ ತೋರುತಿದೆ ಇಂದಿಲ್ಲ ಗತಿಯದರಿಂದ ನೊಂದೆನು ನಾನು ಮಂದರಧರ ಗೋವಿಂದ ನೀನಲ್ಲದೆ 2 ಹಗಲುಗತ್ತಲೆ ಸುತ್ತಿಯೆ ಕಂಗೆಡಿಸುತ್ತ ಹಗೆಯೊಳು ನಗಿಸುತಿದೆ ಉಗುರಿನಸಿಗಿಗೆ ಮಚ್ಚುಗಳೀಗ ನಾಟ್ಯವು ಸೊಗಸು ಹಾರಿಸಿ ಎದೆ ದಿಗಿಲುಗೊಳಿಸುತಿದೆ 3 ಬಾಡಿದ ಅರಳಿಯನು ಕಲ್ಲೀನ ಮೇಲೆ ಈಡಾಗಿ ನಟ್ಟಿದರೆ ಬೇಡಿಕೊಂಡರೆ ತಳಿರ್ಮೂಡಿ ಬರುವುದುಂಟೆ ರೂಢಿಗೊಡೆಯ ನೀನು ನೋಡದಿದ್ದರೆ ಮೇಲೆ 4 ಹಲವು ಪರಿಯ ಕಷ್ಟವ ನಿನ್ನಯ ಪದ ಜಲಜದ ಕರುಣದಲಿ ಸುಲಿಗೆಗೊಟ್ಟೆನು ನಾನು ಸೂರೆಗಾರರಿಗೆಲ್ಲ ಒಲವಾಗೆನ್ನೊಳು (ವರಾಹತಿಮ್ಮಪ್ಪ)15
--------------
ವರಹತಿಮ್ಮಪ್ಪ