ಸಿರಿ ನರಸಿಂಗನ ಪಾಡಿರೊ |
ಮಂಗಳಮೂರುತಿ ಡಿಂಗರಿಗರ ಹೃಸ್ಸಂಗ ಕರುಣಾತರಂಗಾ ಪ
ಮೊರೆಯಿಡಾ ಬಂದ | ಕಂಭದೊಳಿಂದ |
ಲೋಕಸ್ವಾಮಿ | ಅಂತರ್ಯಾಮಿ ||
ಕರುಳಮಾಲೆ ಇಟ್ಟಾ | ಕೊರಳೊಳು ದಿಟ್ಟಾ |
ಜಯವೆನುತಿರೆ ಮೆರೆದಾ | ಪ್ರಹ್ಲಾದವರದಾ 1
ಕೊಡುವನು ಚಲುವಾ | ಭಕುತರಿಗೊಲಿವ |
ಹರಿ ನಮಗೆಲ್ಲಾ | ಭಕ್ತವತ್ಸಲಾ ||
ಗುಣಾಂಬುಧಿ ತೇಜ | ರಾಜಾಧಿ ರಾಜ |
ಕರ್ತನು ಸಖ್ಯ 2
ಕನಕಮುನೀಶ್ವರ ತಪವನು ಮಾಡಲು ಮೆಚ್ಚಿ | ಬಂದನು ಮೆಚ್ಚಿ |
ಕನಕ ವರುಷವನು ಗರೆವದು ಅಂದಿನ ದಿನದಿ | ಆನಂದವನಧಿ |
ಕನಕ ನೃಕೇಸರಿ ಎನಿಸಿದಾ ಅಂದಿನಾರಭ್ಯಾ | ಈತನೆ ಸಭ್ಯಾ |
ನುತಿಸಲು ಸುಳಿವಾ 3
ಇದು ಪುಸಿಯಲ್ಲಾ |
ವೇದಾ | ಪೇಳ್ವದು ಮೋದಾ ||
ಅವನೇ ದನುಜಾ |
ನಮಗೀತ ತಂದೆ 4
ನಿಧಿಯೊಳು ಧನದಾ | ದಿಕ್ಕಿಲಗಾಧಾ |
ಮುನಿಜನ ಸಮ್ಮತ ಶ್ರುತಿ ಉಕ್ತಿಗಳಲ್ಲಿ ಅಕ್ಕು | ಕೇಳೀವಾಕು |
ಮಾಡಲು ಭಕುತಿ | ಉಂಟು ವಿರಕುತಿ |
ವಿಠ್ಠಲ ನರಸಿಂಗಾ | ರಿಪುಗಜ ಸಿಂಗಾ 5