ಸಖಿ ಕೇಳೇ ಇನ್ನು ಹರುಷದ ಮಾತಾ|
ಸಕಲ ಜನರಿಗೆ ಆನಂದ ವೀವಾ| ಪ
ಇಂತೆಂದು ಹರಿಯು ನಾನಾಪರಿ ವಿರಹದ|
ಸಂತಾಪ ಮಾತವ ನುಡಿಯಲು ಕೇಳಿ|
ಅಂತರಂಗದ ಕೋಪವಬಿಟ್ಟು ಎದ್ದು|ಅ|
ನಂತನ ಬಿಗಿದಪ್ಪಿದಳು ಅಂಬುಜಾಕ್ಷಿ 1
ಲಲಿತಾಂಗಿ ಆಲಿಂಗನವ ನೀಯೇ ಹರಿಗಾಗಾ|
ಒಲಿದು ಉಕ್ಕೇರಿತು ಆನಂದ ಉದಧಿ|
ಸತಿ ಮಾತಾಡುವ ದೇವ ಶ್ರೀ|
ಲಲನೇಯಾ ಸದ್ಬುವನೆಯಾ ಪೂರಿಸಿದನು 2
ಈ ಪರಿಯಾಡಿದ ಶ್ರೀ ಹರಿ ಚರಿತೆಯಾ|
ನಾ ಪೇಳಿದುದು ಭಾವ ಭಕುತಿಯಲಿಂದಾ|
ಆ ಪದಿಂದಲಿ ಕೊಂಡಾಡುವ ಮನುಜನ|
ತಾ ಪಾಲಿಸುವಾ ಮಹಿಪತಿ ಸುತ ಪ್ರೀಯಾ3