ಇಂದು ಹೊಳೆವುತದೆ ಸುಚಿನ್ಹಬೋಧ
ತಂದಿ ಕಂಡೆವೇನೊ ಸದ್ಗುರು ಶ್ರೀಪಾದ ಧ್ರುವ
ಪ್ರಾಣದೊಡಿಯ ಬಾವ್ಹಾಂಗನೇನೊ
ಪೂರ್ಣಕ್ಷಣಕೊಮ್ಮಾಗುತದೆ ಸುಶಕುನ
ಕಣ್ಹುಬ್ಬಾರುತದೆ ಬಲದೆನ್ನ
ಚೆನ್ನಾಗ್ಯಾಗಮ್ಮ ತಾನೇನೊ ಸುಪ್ರಸನ್ನ 1
ತೋಳಭುಜಹಾರುತದೆ ಬಲುಬಹಳ
ವ್ಯಾಳ್ಯಕೊದಗಿಬಂದೆನೇನೊ ದಯಾಳ
ಸುಳವುದೋರುತದೆ ನಿಶ್ಚಳ
ಸುಳಿದೊಮ್ಮೆ ಬಂದನೇನೊ ಕೃಪಾಳ 2
ಬುದ್ಧಿ ಮನಸಿಗಾಗುತದೆ ವಿಕಾಸ
ಸಿದ್ಧಿಸೋರುವ್ಹಾಗಾದೆ ಪ್ರಕಾಶ
ಸದ್ಯ ಹೃದಯವಾಗುತದೆ ಉಲ್ಹಾಸ
ಸಾಧ್ಯವಾಗುವ್ಹಾಂಗ್ಹಾನೇನೊ ತಾ ಸರ್ವೇಶ 3
ಪ್ರೇಮ ಉಕ್ಕಿಬರುದೆನ್ನೊಳಗೆ
ಸ್ವಾಮಿದರುಷಣಾದೀತೇನೊ ತಾ ಈಗ
ರೋಮರೋಮವು ಬಿಡದೆ ಎನಗೆ
ಬ್ರಹ್ಮಾನಂದ ಭಾಸುತದೇನೊ ಬ್ಯಾಗ 4
ಖೂನದೋರಿಬರುತದೆನಗೊಂದು
ಭಾನುಕೋಟಿ ತೇಜ ತಾ ಬಾವ್ಹಾಂಗಿಂದು
ದೀನ ಮಹಿಪತಿಗುರು ಕೃಪಾಸಿಂಧುಮನೋಹರ ಮಾಡುವ್ಹಾಂಗ್ಹಾನೆ ಬಂದು 5