ಒಟ್ಟು 15 ಕಡೆಗಳಲ್ಲಿ , 11 ದಾಸರು , 14 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

[ದಿತಿಜರಿಗೆದುರಾಂತ] ಕೃತಾಂತಗತಿ ನೀ ನಮಗೆ ಗುಣವಂತ ಹನುಮಂತಪ. ಕೇಸರಿತನಯ ದಕ್ಷಿಣಗಾಗಿ ಬಂದೆ ವ-ರುಷಗಳಿಂದಲಿ ಬಲುಗಿರಿಯನು ತಂದೆಈಶ ರಘುಪತಿ ಸೇವೆ ಘನವಾಗಿ ನಿಂದೆಅಸುರ ರಾವಣನ ಸರ್ವ ಸೈನ್ಯವ ಕೊಂದೆ 1 ಅಂಬುಧಿಯ ದಾಂಟಿ ಸೀತೆಯ ರೂಪ ಕಂಡೆಕುಬುದ್ಧಿಯ ರಾವಣನ ಪುರವ ಸೂರೆಗೊಂಡೆವಿಬುಧರ ಸ್ನೇಹವ ಮಾಡಿದೆ ಬಲುಗಂಡೆಪ್ರಬುದ್ಧರಂದದಿ ಪುಣ್ಯಫಲರಸ ಉಂಡೆ 2 ಹಯವದನನ ಕೃಪೆ ಪ್ರಿಯ ಹೂಡಿ ಪೊತ್ತೆ ಪ್ರಿಯವಾದ ಭವತರುವಿನ ಬೇರ ಕಿತ್ತೆಭಯವ ಖಂಡಿಸಿ ನಮಗಭಯವನಿತ್ತೆಜಯಜಯ ಪ್ರಾಣನಾಥ ನಮೋ ನಮಸ್ತೆ 3
--------------
ವಾದಿರಾಜ
ಏಸು ಜನ್ಮದಲೇನು ಪುಣ್ಯಮಾಡಿದೆವೊ ಲೇಸಾಗಿನ್ನು ಸ್ವಾಮಿ ನಿಮ್ಮನ ಕಂಡೆವೊ ಧ್ರುವ ಸಾಧನವೆಂಥಾದೆಂಬುದು ನಾವಿನ್ನರಿಯೆವೊ ನಿಮ್ಮ ದರುಶನದಲಿ ಪಾವನಾದೆವೊ ಇದೆ ಸಕಲ ಸಾಧನದ ಸುಫಲವೊ ಸ್ವಾಮಿ ನಿಮ್ಮ ದಯಕ ಸಾನುಕೂಲವೊ 1 ಮನೋಹರ ಮೋಹನಮೂರ್ತಿ ಕಂಡೆವೊ ಕೃಷ್ಣ ನಿಮ್ಮನ ಬಿಗಿದಪ್ಪಿಕೊಂಡೆವೊ ನಾನಾಸವಿಯ ನೆಲೆಗಳೂಟ ಉಂಡೆವೊ ಎಂದೂ ಬಿಡದೆ ಹೃದಯಲಿಟ್ಟುಕೊಂಡೆವೊ 2 ಹೆಣ್ಣು ಪ್ರಾಣಿಗಳು ನಾವೇನು ಬಲ್ಲ್ಲಿವೊ ನಿಮ್ಮ ವಿನಾ ಇನ್ನೊಂದು ನಾವೊಲ್ಲಿವೊ ಚನ್ನಾಗೊಲಿದ ಭಾನುಕೋಟಿ ನಮ್ಮಲ್ಲಿವೊ ಚಿಣ್ಣಮಹಿಪತಿಗಿದೆ ಸಾಫಲ್ಯವೊ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಏಳು ಗೋಪಾಲ ಬಾಲ ಇನ್ನೂ ಭಾಳ ಹೊತ್ತಾಯಿತು ಭಕ್ತ ಪರಿಪಾಲ ಪ. ಮುನಿಜನರೆದ್ದು ಪೂಜಿಸೆ ನಿನ್ನ ನಿಂತಿರೆ ಮನುಜರೆಲ್ಲರೂ ಕಾದಿಹರು ದರುಶನಕೆ ಸನಕಾದಿ ವಂದಿತ ಸರ್ವೇಶನೆಂತೆಂದು ವಿನಯದಿಂದಲಿ ನುತಿಪರು ಭಾಗವತರು 1 ತಾರೆಗಳಡಗಿತು ಕಮಲಗಳರಳಿತು ಪೂರ್ವ ದಿಕ್ಕಿನಲಿ ತೋರುವ ರವಿ ಉದಯ ಭೇರಿ ತುತ್ತೂರಿ ನಗಾರಿ ಬಾರಿಸುತಿದೆ ಸಾರಿ ಕೂಗುತಲಿದೆ ಕೋಳಿ ವೃಂದಗಳು 2 ಬಾಲಲೀಲೆಗಳಿಂದ ಗೋವಳರೊಡನಾಡಿ ಭಾಳ ಆಯಾಸವಾಗಿಹುದೆ ಕಂದಯ್ಯ ಬಾಲೆ ಗೋಪ್ಯಮ್ಮ ನಿನ್ನ ಲಾಲಿಸಲಿಲ್ಲವೆ ಬಾಲಯತಿಗಳು ಪೂಜಿಸುವರೇಳಯ್ಯ 3 ಬಿಸಿಬಿಸಿ ನೀರು ಪಂಚಾಮೃತವೆರೆಯುತ ಹಸನಾದ ಪಾಲು ಸಕ್ಕರೆ ಉಂಡೆಗಳು ಹಸುಗೂಸು ನಿನಗೆ ಹುಗ್ಗಿಯು ದೋಸೆ ಪೊಂಗಲು ಬಿಸಜಾಕ್ಷ ಯತಿಗಳರ್ಪಿಸುವರೇಳಯ್ಯ 4 ನುತಿ ಕೇಳಲಿಲ್ಲ ಆ ದಣಿದೆಂದು ಮಲಗಿದ್ಯಾ ಶ್ರುತಿ ವೇದತತಿಗಿಂತ ಚತುರ ಮಾತಿನೊಳು ಹಿತದಿ ಯಶೋದೆ ಎಬ್ಬಿಸಲೆಂದು ಮಲಗಿದ್ಯಾ ಚ್ಯುತದೂರ ಗೋಪಾಲಕೃಷ್ಣವಿಠ್ಠಲಯ್ಯ 5
--------------
ಅಂಬಾಬಾಯಿ
ಕೊಡು ತಾಯೆ ವರವ ಧೃಡವಾಗಿರುವ ಕೊಡು ತಾಯೆ ವರವಾ ಪ. ಕೊಡೆ ವರ ತಡಮಾಡದೆ ಧೃಡ ಭಕ್ತಿ ಎಂಬ ಮಾಂಗಲ್ಯ ಭಾಗ್ಯ ಧೃಡವಾಗಿರುವಂತೆ ಅ.ಪ. ಪರಿಪರಿ ಧ್ಯಾನಿಸೆನ್ನ ಮನಮಂದಿರವೆಂಬ ವರಗೃಹದಲಿ ಯೆನ್ನಯ ಭಕ್ತಿಮಂಟಪದಿ ಹರದಿ ಲಕುಮಿ ನಿನ್ನ ಪೂಜಿಸಿ ನಮಿಸಲು ವರ ಅಘ್ರ್ಯಪಾದ್ಯ ಆಚಮನವಿತ್ತು ನಲಿವೆ 1 ನವವಿಧ ಭಕ್ತಿಯೆಂಬ ನವರತ್ನ ಮಂಟಪದಿ ನವವಧು ಹರಿಗೆ ನೀನೆಂದು ಕುಳ್ಳಿರಿಸಿ ನವವಿಧ ಪಂಚಾಮೃತ ಸ್ನಾನಗೈಸಿ ನವನೀತಚೋರ ನಿನಗೆ ವಸ್ತ್ರಾಭರಣವನಿಟ್ಟು ನವವಿಧ ಭಕುತಿಲಿ ಪೂಜಿಪೆ 2 ಜಾಜಿ ಮಲ್ಲಿಗೆ ರೋಜ ಸಂಪಿಗೆ ರಾಜಿಪಲಕ್ಷ್ಮಿಗೆ ಮಲ್ಲಿಗೆ ದಂಡೆ ಮುಡಿಸಿ ಜಡೆಗೆ ಕಮಲ ಕೆಂಪಿನ ತಿರುಪಿನ ಹೂವ ತಿರುಗಿಸಿ 3 ಅರಿಶಿನ ಕುಂಕುಮ ಪರಿಮಳ ಗಂಧದಿ ವರಮಹಾಲಕ್ಷ್ಮಿಗೆ ಪೂಜಿಸುವೆ ವರಲಕ್ಷ್ಮಿಗೆ ಪರಿಪರಿ ಪುಷ್ಪ ಅಷ್ಟೋತ್ತರಗಳಿಂದರ್ಚಿಸೆ ಕೊಡು ವರ ದೃಢಭಕ್ತಿಯೆಂದು ಬೇಡುವೆ 4 ಷಡ್ರಾಸಾನ್ನ ಪಾಯಸ ಭಕ್ಷ್ಯಗಳ ಷಡ್ವಿಧ ದದಿಘೃತ ಪಾಲು ಸಕ್ಕರೆ ಬಗೆಬಗೆ ಉಂಡೆಗಳ ಷಡ್ವಿದ ಫಲಗಳನರ್ಪಿಸಿ ಧೂಪ ದೀಪದಿ ವರ ಅಷ್ಟ ಮಂಗಳಾರತಿ ಬೆಳಗಿ ಪಾಡುತ ನಮಿಸುವೆ 5
--------------
ಸರಸ್ವತಿ ಬಾಯಿ
ಜಾಣರಾಯಗೆ ಇಟ್ಟ ಕಾಣಿಕೆಯನು ಕೊಟ್ಟು ಪ ಕಷ್ಟಗಳೆಲ್ಲವು ಬೆನ್ನಟ್ಟಿ ಬರುವಾಗ ಕಟ್ಟಿದ ಹರಕೆಗಳೆಲ್ಲವನು ಸಿಟ್ಟು ಮಾಡುವ ಸ್ವಾಮಿ ಇಟ್ಟುಕೊಂಡರೆ ಇನ್ನು ಮುಟ್ಟಿಸಿಕೊಡಬೇಕಲ್ಲಿ ತಿಮ್ಮಪ್ಪನಲ್ಲಿ 1 ಗಂಡ ಹೆಂಡತಿಯು ಮಕ್ಕಳು ಸಹವಾಗಿ ದಂಡು ಮಾಳ್ಪೆವು ತಾವು ಎನುತಲಿ ಉಂಡೆವು ಸ್ಥಿರವಾರ ಊಟವ ಏಕವ ಕಂಡು ಬಹರೆ ಹೋಗುವ ದಯವಾಗುವ 2 ಕಟ್ಟಿದ ಕಾಣಿಕೆ ಇಟ್ಟು ಚರಣದಲ್ಲಿ ಸಾಷ್ಟಾಂಗವು ಎರಗಿದರೆ ದೃಷ್ಟಿಯಿಂದಲೆ ನೋಡಿ ದಯಮಾಡಿ ಕಳುಹುವ ವರಾಹ ನಮ್ಮಪ್ಪ ತಿಮ್ಮಪ್ಪನು 3
--------------
ವರಹತಿಮ್ಮಪ್ಪ
ದುಃಖವನೆಷ್ಟೆಂದು ಹೇಳಲಿ ಸಂಸಾರ ಶರಧಿಯಿದುದುಃಖದ ಶರಧಿಯಿಂದ ಪರಮಾತ್ಮನ ಸ್ಮರಣೆಗೆ ವಿಘ್ನವಹುದು ಪ ಮಗ ಬುದ್ಧಿವಂತನಾಗಲಿಲ್ಲವೆಂದೆಂಬಮಗಳಿಗೊದಗಲಿಲ್ಲ ಅಳಿಯ ಎಂದೆಂಬಹಗರಣವಾಯಿತು ಮನೆಯೀಗ ಎಂದೆಂಬ ದುಃಖವೊಂದುಜಗಳಗಂಟಿಯು ಎನ್ನ ಹಿರಿಯ ಸೊಸೆ ಎಂದೆಂಬ ದುಃಖವೊಂದು1 ಹೆಂಡತಿ ವ್ಯಭಿಚಾರಿಯಾದಳು ಎಂದೆಂಬ ದುಃಖವೊಂದುಉಂಡೆನೆಂದರೆ ಅನ್ನವಿಲ್ಲ ಎಂದೆಂಬ ದುಃಖವೊಂದುಕಂಡಕಡೆಗೆ ಹೋಗೆ ಕೈ ಹತ್ತದೆಂದೆಂಬ ದುಃಖವೊಂದುಮುಂಡೆಯಾದಳು ಎನ್ನ ಮೊಮ್ಮಗಳು ಎಂದೆಂಬ ದುಃಖವೊಂದು 2 ನೆಂಟರಿಗೆ ಮಾಡಲೆನ್ನೊಳಿಲ್ಲವೆಂದೆಂಬ ದುಃಖವೊಂದುಒಂಟಿ ಬಯಲಿನ ಹೊಲವು ಬೆಳೆಯದು ಎಂದೆಂಬ ದುಃಖವೊಂದುಕಂಟಕಿ ನಾದಿನಿ ಹಡೆಯಲಾರಳು ಎಂದೆಂಬ ದುಃಖವೊಂದುಎಂಟು ವರಹ ಎಮ್ಮೆ ಸತ್ತಿತು ಎಂದೆಂಬ ದುಃಖವೊಂದು3 ಎದೆ ಮೇಲೆ ಕುಳಿತಿಹರು ದಾಯಾದಿಗಳೆಂದೆಂಬ ದುಃಖವೊಂದುಮುದುಕಿಗೆ ಗೆಲುವು ತಾನಿಲ್ಲವೆಂದೆಂಬ ದುಃಖವೊಂದು ಮದುವೆಗೆ ಹಾದಿಲ್ಲ ಹಾವಳಿ ಎಂದೆಂಬ ದುಃಖವೊಂದುಸದನ ಒಳ್ಳೇದಲ್ಲ ಏಳು ಮಕ್ಕಳ ತಾಯಿ ಎಂಬ ದುಃಖವೊಂದು 4 ಜೋಡಿಪೆ ಧೈರ್ಯವೆಂದರೆ ನಿಶ್ಚಯಾಗಲಿಕೆ ಕೊಡದು ಒಂದುನೋಡುವೆ ಚಿಂತಿಸಿ ಎನೆ ಚಿಂತೆ ಹರಿಯಲು ಕೊಡದು ಒಂದುಮಾಡುವೆ ಮಂತ್ರ ಪೂಜನ ಪೂಜೆ ಮಾಡಲು ಕೊಡದು ಒಂದುಕೊಡುವೆ ಗುರು ಚಿದಾನಂದನೆನೆ ಕೂಡಗೊಡದು ಎಂದು 5
--------------
ಚಿದಾನಂದ ಅವಧೂತರು
ನಾ ಕೆಟ್ಟ ಕೇಡ ಹೇಳುವೆನು ಎಲ್ಲ ಲೋಕದಂತೆನ್ನಬದುಕು ಆಗಲಿಲ್ಲ ಪ ಹೆಂಡರಿಚ್ಛೆಯಿಲ್ಲ ಹೀನವೆಂಬುದಿಲ್ಲಪಂಡಿತತ್ವದ ಪರಮಾರ್ಥಕಿಲ್ಲಉಂಡೆ ಉಟ್ಟೆನೆಂಬ ಊಹೆ ಮೊದಲಿಗಿಲ್ಲಕಂಡ ಕಂಡಂತೆ ಚರಿಸುವಂತಾಯಿತೆ 1 ಅರಿವು ಮರೆವು ಇಲ್ಲ ಆಸೆಗಳೇನಿಲ್ಲಇರುಳು ಹಗಲು ಎಂಬುದೆರಡಿಲ್ಲವೋಶರೀರ ಸ್ಮರಣೆಯಿಲ್ಲ ಶ್ರೇಷ್ಠ ಭಾವಗಳಿಲ್ಲಮರುಳು ಮರುಳು ಆಗಿ ತಿರುಗುವಂತಾಯಿತು 2 ಚಿದಾನಂದ ಗುರುವಿನ ಚಿತ್ತದಿ ಪಿಡಿದರೆಒದವಿದ ಬ್ರಹ್ಮಾನಂದವ ಸವಿದುವಿಧವಿಧವಾದ ಬೆಳಕಿನೊಳಾನಡಗಿರೆಇದರಿಂದಲಿ ಇಂತಾದುದಿದೆಲ್ಲವು3
--------------
ಚಿದಾನಂದ ಅವಧೂತರು
ಪರಾಕು ಪ ಕಾಮಿತ ಫಲವೀವ ಕರುಣಾಂಬುಧಿ ಎಂದು ನಾ ಮೊರೆಹೊಕ್ಕೆನಲ್ಲೋ ರಾಮರಾಮಾ ಪ್ರಫುಲ್ಲ ಅ.ಪ. ಎಡವಿದ್ದ ಮಾತ್ರದಿ ಪೆಣ್ಣಾದ ಗೌತಮಮಡದಿಯು ನಿನ್ನವಳೇನೋಕಡುಪ್ರೀತಿಯಿಂದ ಕಾಯಿದಿ ಕರಿರಾಜನು ನಿನ್ನಒಡಲಲ್ಲಿ ಜನಿಸಿದನೇನೋನಡುಗುತ ಮಗನ ನಾರಗನೆನ್ನಲುನುಡಿ ಕೇಳಿ ಪೊರೆದೆಲ್ಲೊ ರಾಮರಾಮಾ1 ಹಿಂದ್ವೈರಿ ದೆಸೆಯಿಂದ ಬಂದ ವಿಭೀಷಣನುತಂದೆಯ ಕಡೆಯವನೇನೋಕಂದು ಕುಂದೆಣಿಸದೆ ಕಾಯಿದಿ ಘಂಟಾಕರ್ಣಾಎಂದಾ ಮಾತಿನ ಬಗೆಯೇನೋಬಂದು ಕಂಬದಿ ಶಿಶುವ ಬಾಧೆಯ ಬಿಡಿಸಿದಿ ಆಪದ್ಬಾಂಧವ ನೀನಲ್ಲೋ ರಾಮರಾಮಾ 2 ಉಲ್ಲಾಸದಿಂದ ಶಬರಿ ಉಂಡೆಂಜಲಿಗೊಡ್ಡಿದವಲ್ಲಭ ನೀನಲ್ಲವೇನೋಎಲ್ಲಿಯ ಬಲ್ಲಿದ ಪಿಡಿಯವಲಕ್ಕಿಗೆ ನೀ ಪೋಗಿವಲ್ಲ್ಯೊಡ್ಡಿದ್ದು ಮರೆತ್ಯೇನೋಎಲ್ಲಿಯ ಮಾತಿದು ಪೇಳಲಂಜುವೆ ರಂಗ ವಿ-ಠಲ ನೀನಲ್ಲೋ ರಾಮರಾಮಾ 3
--------------
ಶ್ರೀಪಾದರಾಜರು
ಪಾಹಿ ಪಾಂಡವ ಪರಿಪಾಲ ನೀನೇ ನಿತ್ಯ ಮಹದಾದಿವಂದ್ಯಾ ಸುಶೀಲಾ ಪ ದೈಹಿಕ ಮೊದಲಾದ ಕರ್ಮವ ಮಾಡಿಸಿ ಮೋಹಕ ಪಾಶವ ಓಡಿಸು ಕೇಶವಾಅ.ಪ ಇಂದ್ರತನಯಾ ಮಾನಭಂಗ ಮಾಡಿದೆ ನೀನು ಇಂದು ಉಂಡೆನೋ ಸಿರಿರಂಗಾ ಮಂದರೋದ್ಧರ ಕೋಮಲಾಂಗಾ ಕೇಳೊ ಪೊಂದಿಸು ಸುಜನರ ಸಂಗಾ ಕಂದರ್ಪಜನಕ ಆನಂದ ವಿಗ್ರಹ ಪೂರ್ಣ ಮಾತನು ಸುಂದರ ನಿಜ ಭಕ್ತ ವೃಂದ ಮಹೋದಧೇ 1 ಕಾಲಕರ್ಮ ಗುಣದಿಂದಾ ವೃಥಾಯು ವೇಳೆಯ ಕಳದೆ ಮುಕುಂದಾ ಪೇಳಾ ಲೇಸೊ ಪ್ರತಿ ಬಂಧಾ ಇನ್ನು ನಾನು ತಾಳಲಾರೆ ದು:ಖದಿಂದಾ ಆಲಸ ತಾಳದೆ ಆಲಿಸು ಮಾತನು ಆಳುಗಳೊಳಗಿಹ ಆಳಾನೆಂದು 2 ಅನಾದಿಯಿಂದಲಿ ನಿನ್ನ ಪದಗಳ ಧ್ಯಾನವ ಮಾಡುವೆ ಚನ್ನಾ ನಾನಾ ಬಗೆಯಿಂದ ಯೆನ್ನಾ ಸಾಕುತಲಿಪ್ಪ ನೀನೆ ಮುಖ್ಯನೊ ಪ್ರಸನ್ನ ಅನಂತಶಯನ ಭೋ ವಿಜಯವಿಠ್ಠಲರೇಯ ಮಾನದಲಿ ನಿಂದು ಪ್ರಾಣಪ್ರೇರಕನಾಗೊ 3
--------------
ವಿಜಯದಾಸ
ಬಲ್ಲಿದರ ತಿಳಿವಾ ಬಲ್ಲವರ್ಗೆ ವಲಿವಾ ಬಲ್ಲಿದರ ಆಪತ್ತಿಳಿದು ನಿಲ್ಲದೆ ತಾ ಬರುವಾ ಪ ಪಾಂಡುಸುತನ ಕಾಯ್ದ ಪುಂಡರ ತಾನ್ಹೊಯ್ದು ಉಂಡೆನೆಂಬೊ ಗೆಳೆಯಗೆ ಉಂಡು ಉಣ್ಣಿಸಿದಾ 1 ಗಜವರ ಕರೆದಾ ಅಜಮಿಳ ನೆನೆದಾ ಭಜಕರ ಕಾಮಧೇನು ನಿಜಕರ ತೋರ್ದಾ 2 ಸಲ್ಲಲಿತ ಮನವಾ ನಿಲ್ಲದೆ ತಾನೀವಾ ಬಲ್ಲಿದ ನರಸಿಂಹ ವಿಠಲ ಸಲ್ಲುವರ ಪೊರೆವಾ 3
--------------
ನರಸಿಂಹವಿಠಲರು
ಮುಕುಂದನ ಮುದ್ದು ರೂಪವ ಕಳೆದೆ ಸಂತಾಪವ ಪ ಬೀರುತಾ ವೊಡನಿಪ್ಪ ಮಾರುತಾ 1 ಝಗಝಗಿಪ ಪದಯುಗಳ ಬಿಗಿದಪ್ಪಿ ದಾಡಿದೆ ಸಂತರ ಸಂಗ ಬೇಡಿದೆ 2 ಧನ್ಯನಾದೆನೊ ದಾನವಾರಿಯ ಘನ್ನ ವೈಭೋಗ ಕಂಡೆ ನಾ ಪುಣ್ಯವನು ಕೈಕೊಂಡೆ ನಾ ನಾಮಾಮೃತ ಉಂಡೆ ನಾ 3 ಮರೆವದು ಸುರಗಣ ಪೊರೆವುದು 4 ವಾಸನಾಗುಣ ಮಂದಹಾಸನಾ5
--------------
ವಿಜಯದಾಸ
ಹಿಂದಿನ ದಿನದಂತಿದಲ್ಲಣ್ಣ ಈಗ ಬಂದಿಹ ದಿನವತಿ ಹೊಸದಣ್ಣ ಪ ಹೆಂಡಿರು ಮಕ್ಕಳ ಕರೆದರೆ ಒಳಗೆ ತಂಡುಲವಿಲ್ಲ ಗಂಜಿಗೆಶರೆ ಉಂಡೆವೆನುತ ಬಾಯ ಬಿಡುತಾರೆ ಇದ ಕಂಡು ನಾಕ್ಷಣವು ಜೀವಿಸಲಾರೆ 1 ಕಡಕಟ್ಟು ಹುಟ್ಟಿತೆಂಬುದು ಹುಸಿಯಿನ್ನು ಕೊಡುವರು ಕೊಡುವುದಿಲ್ಲವೋ ರೋಸಿ ಉಡಲು ತೊಡಲಿಕ್ಕಿಲ್ಲ ಕೈ ಬೀಸಿ ಎದೆ ನಡುಗಿ ಸಾವೆನು ನಾನು ಪರದೇಶಿ 2 ಅತಿಥಿಗಿಕ್ಕಲಿಕೆ ತನಗೇ ಇಲ್ಲ ಪ್ರತಿಮೆ ಲಿಂಗ ಪೂಜೆಗಳು ಜನ್ಮದೊಳಿಲ್ಲ ವ್ರತನೇಮ ದಾನ ಧರ್ಮಗಳಿಲ್ಲ ಪರ ಗತಿಗೇನು ಮುಂದೆ ಸಾಧನವಿಲ್ಲ 3 ಸಂಸಾರದೊಳಗೇನು ಸುಖವಿಲ್ಲ ಪರಮ ಹಂಸನಾಗಲು ಮುಂದೆ ಪಥವಿಲ್ಲ ಕಂಸಾರಿ ಸ್ಮರಣೆ ಎಂದಿಗೂ ಇಲ್ಲ ತಮ ಧ್ವಂಸಿ ಯಣುಗನ ಕೈವಶರೆಲ್ಲ 4 ಕಾಲಗತಿಯು ಬಲು ಬಿರುಸಣ್ಣ ಜನ ಬಾಳುವ ಪರಿಯಿನ್ನು ಹೆಂಗಣ್ಣ ಕೂಳಿಗೆ ಬಗೆಯಿಲ್ಲದಾಯ್ತಣ್ಣ ಲಕ್ಷ್ಮೀ ಲೋಲನ ಮೇಲೆ ಭಕ್ತಿಯಿಲ್ಲಣ್ಣ 5
--------------
ಕವಿ ಪರಮದೇವದಾಸರು
ನೀನೆ ಗತಿಯೆಂದು ನಂಬಿದೆ ಕಾಯಯ್ಯ ಶ್ರೀನಿವಾಸ ಎನ್ನಹೀನಗುಣಗಳೆಣಿಸಲಿ ಬ್ಯಾಡ ದಯಮಾಡೊ ಶ್ರೀನಿವಾಸ 1ನಾನಾ ದುಷ್ಕøತಫಲವ ಉಂಡೆ ಇನ್ನಾರೆ ಶ್ರೀನಿವಾಸಎಂದೂ ದುರ್ವಿಷಯಕೆಮನ ಎರಗದಂತೆ ಮಾಡೊ ಶ್ರೀನಿವಾಸ 2ಸತ್ಕಥಾ ಶ್ರವಣ ಭಾಗ್ಯವ ಕೊಡುಅನುದಿನಶ್ರೀನಿವಾಸ ಎನ್ನಹೃತ್ಕಮಲದಿ ವ್ಯಕ್ತನಾಗಯ್ಯ ಶ್ರೀನಿವಾಸ 3ಪುತ್ರಕಳತ್ರಮಿತ್ರರು ನಿನ್ನ ದಾಸರೊ ಶ್ರೀನಿವಾಸ ತ್ವದ್ಭøತ್ಯಭೃತ್ಯರ ಪರಿಚಾರಕ ನಾನು ಶ್ರೀನಿವಾಸ 4ಅನಂತ ಜನ್ಮದ ಸತ್ಕರ್ಮ ನಿನಗೇವೆ ಶ್ರೀನಿವಾಸನಿತ್ಯದೀನೋದ್ಧಾರÀ ಪ್ರಸನ್ನವೆಂಕಟ ಮುಕುಂದ ಶ್ರೀನಿವಾಸ 5
--------------
ಪ್ರಸನ್ನವೆಂಕಟದಾಸರು
ಹ್ಯಾಂಗಾದರು ದಾಟಿಸೊ ಭವಾಬ್ಧಿಯಹ್ಯಾಂಗಾದರು ದಾಟಿಸೊ ಪ.ಗಂಗಾಜನಕನಾ ನಿನ್ನವನೆಂದುಹ್ಯಾಂಗಾದರು ದಾಟಿಸೊ ಅ.ಪ.ನಗುತ್ತಾದರು ಉಂಡೆ ಅಳುತ್ತಾದರು ಉಂಡೆಬಗೆ ಬಗೆ ದುರ್ಜನ್ಮ ಸುಖದು:ಖವತಗೆ ಬಗೆ ನಿರಯದಿ ಹೊರಳ್ಯಾಡುವನ ತಂದುಮಿಗಿಲಾದ ದೇಹವನಿತ್ತೆ ಇನ್ನೆಲೆ ಕೃಷ್ಣ 1ತಿಳಿದಾದರು ಮಾಡಿ ತಿಳಿಯದಾದರು ಮಾಡಿಹಲವು ದೋಷದ ರಾಶಿ ಒದಗಿಸಿದೆಬಲುತಪ್ಪು ನೋಡದೆ ನಾಮಾಮೃತವನಿತ್ತುಸಲಹುವ ಮನಬಲ್ಲ ಎಲ ಎಲೋ ಮುಕುಂದ 2ಮಂದಮತಿಯುಗ್ರಾಹ ಅಂಧ ಕೂಪದಿ ಬಿದ್ದುಎಂದಿಗುಭೋಗಭೋಗಿಸಲಾಪೆನೆತಂದೆ ಪ್ರಸನ್ನವೆಂಕಟಪತಿಗೊಲಿದುನಿಂದೆನ್ನ ಛಿದ್ರವನೆಣಿಸುವರೆ ರಂಗ 3
--------------
ಪ್ರಸನ್ನವೆಂಕಟದಾಸರು