ಬಲ್ಲೆನೋ ನಿನ್ನ ಗುಣವ
ಸಲ್ಲಿಸೋ ಎನ್ನ ಋಣವ ಪ
ಎಲ್ಲ ತೊರೆದು ಭಜಿಸುತಿಹೆನೋ
ಒಲ್ಲೆನೊ ಸಣ್ಣ ಫಲವ ಅ.ಪ
ನಲ್ಲ ಬ್ರಹ್ಮಚಾರಿ ರೂಪದಿ ಚಿಲ್ಲರೆ ದಾನವನು ಮೋಸದಿ
ಸಲ್ಲಿಸೆಂದು ಬಲಿಯ ಶಿರದಲಿ ಪಾದವಿಟ್ಟು ತುಳಿದ 1
ಉಂಡಮನೆಗೆ ಎರಡು ಬಗೆದು ಖಂಡಿಸಿರುವೆ ಪೂತನಿಯನು
ಕಂಡ ಜನರ ಮನೆಗಳಲ್ಲಿ ಚಂಡು ಬೆಣ್ಣೆ ಕದ್ದು ತಿಂದ 2
ಸಣ್ಣ ನರ ನಾನಾದರೂ ಪ್ರಸನ್ನವದನ ವಾಸುದೇವ
ನಿನ್ನ ಗುಣವ ಪೇಳಿ ನಿನ್ನ ಚರಣ ಕಟ್ಟುವೆನೊ 3