ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ನೀನೇ ಅನಾಥ ನಾನೇ ಸನಾಥ ಪ ಜ್ಞಾನಿಗಳಾಡುವರು ಯೀಪರಿ ಮಾತಾ ಅ.ಪ ನಂಬಿರುವುದೆ ಸುಳ್ಳು ನಂಬಿದಿರುವದೆ ನಿಜ ಹಂಬಲಿಸಿದರೇನು ತುಂಬುವುದಿಲ್ಲ 1 ಇಲ್ಲಾ ಎಂಬೋದುಂಟು ಉಂಟೂ ಎಂಬೋದಿಲ್ಲ ಬಲ್ಲರು ಸರ್ವರು ಬಾಯಿಮಾತಲ್ಲ 2 ಮಾನಾಭಿಮಾನ ನಿನ್ನಧೀನವು ಹರಿಯೇ 3 ಕಾಣೋದು ಕೇಳೋದು ಮಾಣಾದೆ ಮಾಡೋದು ನೀನೆ ಯನ್ನೊಳಗಿದ್ದು ನಡೆಸುತ್ತಲಿರುವೆ 4 ಎನಗೇ ನೀನೆ ತಂದೆ ನಿನಗೇ ತಂದೆ ಕಾಣೆ ಸಿರಿನಲ್ಲ 5 ನಿನ್ನೊಳಗೆ ಜಗವು ಜಗದೊಳಗೆ ನೀನೆ ಪನ್ನಗ ಶಯನಾ ಪಾವನ ಚರಿತನೆ 6 ಸರುವಾರೊಳಗೂ ಗುರುರಾಮ ವಿಠ್ಠಲ ಪರಿಪೂರ್ಣನೆಂಬೋದು ಪ್ರಹ್ಲಾದ ಬಲ್ಲ7
--------------
ಗುರುರಾಮವಿಠಲ