ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಧೂಪವಿಡುವನ ಬಳಿಗೇ ದೀಪವಿಡುವ ಆ ಪರಮ ಕರುಣಾಳು ಶ್ರೀಪತಿಯ ನೆನೆನೆನೆದು ಪ ವಸುಮತಿಯನಿತ್ತವನ ಹೊಸಲಬಳಿಯಾಳಾದ ಬಸಿವಲೆಯನಿತ್ತಳಿಗೆ ವಸನಗಳನಿತ್ತ ಬಿಸಜವೊಂದಿತ್ತವನ ಹೊಸಖೇಚರನಗೈದು ಬಿಸವುಂಡ ಬಾಲಕನ ಜಸವ ಚಿರಗೈದ 1 ಅವಲಕ್ಕಿ ಇತ್ತವಗೆ ನಿಧಿಯನೇ ಅರ್ಪಿಸಿದ ಸವಿಗಂಧವಿತ್ತವಳ | ಸುಂದರಿಯ ಗೈದ ನವನೀತವಿತ್ತವರನೆಲ್ಲ ತನ್ನೊಳೆ ಹುಗಿದ ಭವವ ಪರಿಹರಿಸಲ್ಕೆ ಬೇಸರಿಹುದೇ ಹರಿಗೆ 2 ಅವನ ಜಾನಿಪ ಜನರ ಮರೆಯನಾ ನೀಲಾಂಗ ಅವನ ಪೂಜಿಪ ನರರ ಮುನ್ನಿಲುವನಾಗಾಗ ಅವನ ಕಥೆ ಕೇಳ್ವರ್ಗೆ ಉಂಟವನ ಸತ್ಸಂಗ ಅವನೆ ಗತಿಯೆಂದವನಿಗೊಲಿವ ಮಾಂಗಿರಿರಂಗ 3
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್