ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಮಂಗಳಾಂಗನ ಭಜಿಸೆ ಹಿಂಗಿಸುವ ಭವವ ಎನ್ನಂಗದೊಳಡಗಿಹನೊ ಶ್ರಿಂಗಾರ ಮೂರುತೀ ಪ. ಧ್ಯಾನಕೆ ತಂದು ನಿಧಾನದಲಿ ಯೋಚಿಸು ಜ್ಞಾನಿಗಳರಸನ ಮಾನಸದೊಳಗೆ ಕಾನನದೊಳು ವೃದ್ಧ ಶಬರಿಯೆಂಜಲನುಂಡು ದಾನಶೀಲನು ರಾಮ ಕೈವಲ್ಯವನಿತ್ತಾ 1 ದುಷ್ಟ ಕಂಸನ ಹರಿಸಲು ಉತ್ಕøಷ್ಟ ಕೃಷ್ಣ ಬರೆ ಸೃಷ್ಟಿಗೊಡೆಯಗೆ ಗಂಧವಿತ್ತಳಾ ಕುಬ್ಜಿ ದಿಟ್ಟ ರೂಪವ ಉಂಗುಷ್ಠದಿಂದೊತ್ತುತ್ತ ಭಕ್ತ ರಿಷ್ಟವನು ಸಲಿಸಲು ಕಷ್ಟವೇ ಹರಿಗೆ 2 ಯಾವಾಗ ಸ್ತುತಿಸಿದರು ಮತ್ತಾವಲ್ಲಿ ಕರೆದರೂ ಧಾವತಿಗೊಂಡು ಬಹ ಶ್ರೀ ಶ್ರೀನಿವಾಸ ಹಾವಭಾವದ ತೆರದಿ ದೇವ ಬಂದೊದಗುವ ಮತ್ತಾವ ದೇವರ ಕಾಣೆ ಶ್ರೀವರನಲದೇ 3
--------------
ಸರಸ್ವತಿ ಬಾಯಿ