ಒಟ್ಟು 9 ಕಡೆಗಳಲ್ಲಿ , 6 ದಾಸರು , 9 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಬಾಲಕೃಷ್ಣ ಸುಮ್ಮನೆ ಹಟವ್ಯಾತಕಮ್ಮಾ ನಿನಗೆಮೊಮ್ಮುಣಿಸುವೆ ನಾನು ಕೇಳೊ ಕೃಷ್ಣಯ್ಯ ಪ. ಹಶಿವಿಯಾಗಿಹುದೇನೊ ನಿನಗೆ ಸಣ್ಣಹಸುಳರಂಜಿಪ ಬಾವಾ ಬಂದಾನೊ ಹೊರಗೆಮೊಸರಕಡೆದು ನಾ ಬೇಗ ಅಟ್ಟಿಹೊಸ ಬೆಣ್ಣೆ ಕೊಡುವೆನೊ ಕಂದಯ್ಯ ನಿನಗೆ 1 ಹಾಲು ಕುಡಿಸುವೆನೊ ನಾ ಒಬ್ಬಕೀಳು ತಿರುಕ ಬಾಗಿಲಲ್ಲಿ ಬಂದಿಹನೊಬಾಲಯ್ಯ ಅಳದೀರೊ ನೀನು ತನ್ನಜೋಳಗೆಯಲಿ ನಿನ್ನ ಕೊಂಡೊಯುವನು 2 ಅರಳೆಲೆ ಅಂದಿಗಿ ಇಡಿಸಿ ನಿನ್ನಪೆರನೂಸಲಲಿ ಕಸ್ತೂರಿಯ ಧರಿಸಿಪರಿಪರಿಯಲಿ ಸಿಂಗರಿಸಿ ಗೊಲ್ಲತರಳರೊಡನ ಆಡಕಳುವೆನೋ ಕರಸಿ 3 ಉಂಗುರು ಸರಪಳಿಯಿಟ್ಟು ಬಣ್ಣದಂಗಿಯ ತೊಡಿಸುವೆ ಕೇಳೋ ನಿ ಇಷ್ಟುರಂಗಯ್ಯ ಬಂತ್ಯಾಕೊ ಸಿಟ್ಟು ನಿನಗೆಮಂಗಳಾತ್ಮಕ ಏನೂ ಬೇಕೊ ಹೇಳಿಷ್ಟು 4 ಸಿರಿ ವೆಂಕಟರಾಯಾನಿನ್ನಾಟವಬಲೇಶ ನಿಚಯಾ ನೋಡಿಕರಂಣಿನೊಳಗಿಟ್ಟು ಹೀರುವರಯ್ಯಾ 5 ಪಾಪ ಕರ್ಮವ ಮಾಡಬ್ಯಾಡಾ ನರಕಕೂಪದೊಳಗೆ ಬಿದ್ದು ಹೊರಳಾಡಬ್ಯಾಡಕಾಕಪುರುಷರ ಸಂಗ ಕೇಡಾ ನಮ್ಮಶ್ರೀಪತಿಯ ಸ್ಮರಣೆ ಮಾಡದೆ ಬಿಡಬ್ಯಾಡಾ 6 ವಿಹೀತ ಕರ್ಮಗಳನ್ನು ಮಾಡೋ ನೀನುಅಹಿತಲ್ಪನೊಲಿಸಿ ಸದ್ಗತಿಯನ್ನು ಬೇಡೊಅಹಿತ ವಿಷಯ ಸುಖ ದೂಡೋ ಲೋಕ ದಹಿತನ ಸೇವೆಗೆಯುತಲಿ ಕೊಂಡಾಡೊ 7 ಸತ್ಯವಚನದಿಂದ ಬಾಳೊ ಬಲುಭಕ್ತಿಪೂರ್ವಕದಿ ಸಚ್ಛಾಸ್ತ್ರ ಕೇಳೊಚಿತ್ತದಿ ಶಾಂತಿಯ ತಾಳೊ ದುಷ್ಟ_ರುಕ್ತಿ ಕೇಳದೆ ನಿನ್ನ ಕಿವಿ ಮುಚ್ಚಿಕೊಳ್ಳೊ 8 ಪಂಚಭೇದ ಪ್ರಪಂಚವು ನಿಜವೆನ್ನೊ ಮೂಢಾ 9 ಜೀವೇಶಾರೊಂದೆಂಬೊ ಹೊಲಿಯಾ ಪರಿಭಾವಿಸೂ ದ್ವಾಸುಪರ್ಣವೆಂಬೊ ಶ್ರುತಿಯಾಕಾವನಯ್ಯನೆ ಜಗದೊಡೆಯಾ ನಮ್ಮಜೀವಾತ್ಮ ಭೃತ್ಯನೊ ಖರಿಯಾ 10 ಅದ್ವೈತರೊಡನಾಟ ಬ್ಯಾಡ ನಮ್ಮಮಧ್ವಮತದ ಪದ್ಧತಿ ಬಿಡಬ್ಯಾಡಾಖದ್ಯೋತಸುತಗಂಜಬ್ಯಾಡಾ ನೀನುಪೊಂದು ಐಹೊಳಿಯ ವೆಂಕಟನಂಘ್ರಿಗಾಢಾ 11
--------------
ಐಹೊಳೆ ವೆಂಕಟೇಶ
ಮುದ್ದು ಕೃಷ್ಣನ್ನ ನೋಡ ಬನ್ನಿರೆಲ್ಲ ನಮ್ಮ ಸಿರಿ ಭೂಮಿ ನಲ್ಲ ಪ. ಪಂಚ ಪಂಚ ಉಷಃ ಕಾಲದಲಿ ಎದ್ದು ಯತಿವರರು ಪಂಚಬಾಣನ ಪಿತಗೆ ನಿರ್ಮಾಲ್ಯ ತೆಗೆದು ಪಂಚ ಗಂಗೋದಕದಿ ಸ್ನಾನಗೈಸುತ ಹರಿಗೆ ಪಂಚವಿಧ ಪಕ್ವಾನ್ನ ಉಣಿಸಿ ದಣಿಸಿಹರು 1 ಕಾಲ್ಕಡಗ ಗೆಜ್ಜೆ ಪೈಜಣ ಘಲ್ಲು ಘಲ್ಲೆನುತ ಮೇಲೆ ಉಡುದಾರ ಉಡುಗೆಜ್ಜೆ ನಡುವಿನಲಿ ಬಾಲಕೃಷ್ಣಗೆ ಅಸಲಿ ಹುಲಿ ಉಗುರು ಹೊನ್ನು ಸರ ತೋಳ ಬಾಪುರಿಗಡಗ ಉಂಗುರಗಳ್ಹೊಳೆಯೆ 2 ಮುದ್ದು ಮುಖಕೊಂದು ಮೂಗುತಿ ಕರ್ಣಕುಂಡಲವು ಕದ್ದು ಬೆಣ್ಣೆಯನು ಕಡಗೋಲ ಪಿಡಿದಿಹನು ತಿದ್ದಿದ ತಿಲುಕ ಮುಂಗುರುಳೂ ಮುತ್ತಿನ ಸಾಲು ಶುದ್ಧ ಚಿನ್ನದ ರತ್ನ ಮಕುಟ ಶಿರದಲ್ಲಿ 3 ರಮ್ಯವಾಗಿಪ್ಪ ವೈಕುಂಠಪುರಿಯನೆ ಬಿಟ್ಟು ಜನ್ಮಸ್ಥಳವಾದ ಗೋಕುಲವ ತ್ಯಜಿಸಿ ತಮ್ಮವರಿಗಾಗಿ ಕಟ್ಟಿದ ದ್ವಾರಕಿಯ ಕಳೆದು ಬ್ರಹ್ಮಾದಿ ವಂದ್ಯ ತಾನಿಲ್ಲಿ ನೆಲೆಸಿಹನು 4 ಅಪಾರ ಮಹಿಮನು ಆನಂದ ತೀರ್ಥರಿಗೊಲಿದು ಪಾಪಿ ಜನರುಗಳ ಉದ್ಧರಿಸಬೇಕೆಂದು ಶ್ರೀಪತಿಯು ತಾ ಪುಟ್ಟ ರೂಪಧಾರಕನಾಗಿ ಗೋಪಾಲಕೃಷ್ಣವಿಠ್ಠಲನಿಲ್ಲಿ ನಿಂತ 5
--------------
ಅಂಬಾಬಾಯಿ
ವನಜ ಮುಖಿಯರ ಮನದಿಷ್ಟಾರ್ಥವನೀವನ - ಶ್ರೀ ಕೃಷ್ಣ ಎನ್ನಿರೊಮನು ಮುನಿಜನರನು ಅನುದಿನದೊಳು ಪೊರೆವನ - ಶ್ರೀ ಕೃಷ್ಣ ಎನ್ನಿರೊ ಪ ಪಣ್ಣ ಕೊಯ್ದನನುಜಗೆ ಸಹಾಯನಾದನ _ ಶ್ರೀ ಕೃಷ್ಣ ಎನ್ನಿರೊಸಣ್ಣ ಸೀರೆಯ ನಲ್ವೆಣ್ಣು ರೂಪಾದನ _ ಶ್ರೀ ಕೃಷ್ಣ ಎನ್ನಿರೊಅಣ್ಣನ ವೈರಿಯ ಮಗನ ಕೊಂದಾತನ _ ಶ್ರೀ ಕೃಷ್ಣ ಎನ್ನಿರೊಬಣ್ಣಿಸಲರಿಯೆ ನಾನಿವನ ಮಹಿಮೆಯ _ ಶ್ರೀ ಕೃಷ್ಣ ಎನ್ನಿರೊ 1 ಮುತ್ತಯ್ಯನಿರೆ ಮೊಮ್ಮಗಗೆ ಪಟ್ಟಗಟ್ಟಿದನ _ ಶ್ರೀ ಕೃಷ್ಣ ಎನ್ನಿರೊಹೆತ್ತವಳಿರೆ ತಾಯ ಬೇರೆ ಪಡೆದಾತನ _ ಶ್ರೀ ಕೃಷ್ಣ ಎನ್ನಿರೊಮತ್ತೇಭಗಾಮಿನಿಗಾಗಿ ವನವಾಸ ಪೋದನ _ ಶ್ರೀ ಕೃಷ್ಣ ಎನ್ನಿರೊಮತ್ತೆ ಹಿರಣ್ಯಕಗೆ ಕಂಬದಲಿ ತೋರ್ದನ - ಶ್ರೀ ಕೃಷ್ಣ ಎನ್ನಿರೊ 2 ಉಗುರು ಕೊನೆಗಳಿಂದ ನಗವನೆತ್ತಿದನ _ ಶ್ರೀ ಕೃಷ್ಣ ಎನ್ನಿರೊಬೊಗಸೆಗಂಗಳ ಬಾಲೆಯರ ತಂದಾತನ _ ಶ್ರೀ ಕೃಷ್ಣ ಎನ್ನಿರೊಮಗಳ ಗಂಡನ ಶಿರವನೆ ಛೇದಿಸಿದನ _ ಶ್ರೀ ಕೃಷ್ಣ ಎನ್ನಿರೊಸುಗುಣ ತನ್ನ ಕಾಗಿನೆಲೆಯಾದಿಕೇಶವನ _ ಶ್ರೀ ಕೃಷ್ಣ ಎನ್ನಿರೊ 3
--------------
ಕನಕದಾಸ
ವನಜನಯನನ ಮನವ ಮಧುಪ ನಂಬುವರೆಮನದೆಗೆದ ಮದನಪಿತ ವಿಠಲರೇಯಾ ಪ ಅರಿಯದ ಬಾಲೇರಿಗೆ ತನ್ನ ಪರಿಯನರುಹಿಸಿ ಮುನ್ನನೆರೆದು ರತಿಪತಿಯ ಸುಖ ನೆರೆದೋರಿದತೊರೆದು ಬದುಕುವೆವೆಂತೋ ರತಿಪತಿಯ ಪಿತನಗಲಿವಿರಹದುರಿ ತಾನಳವಡರಿ ಸುಡುತಿಹುದು 1 ನಡೆ ನಗೆಯ ತುದಿನೋಟ ಬಲೆಯನೆಮ್ಮೊಳು ಬೀಸಿಬಿಡದೆ ಯೆಮ್ಮನು ತನ್ನ ವಶಮಾಡಿದಪಡಿಯಿಲ್ಲದನುಭವದ ಸುಖದ ಸವಿಯನೆ ತೋರಿಮಡದಿ ತಡೆದಳೊ ಮಧುರೆಯಲಿ ನಲ್ಲನ2 ಎಂದೆಂದು ನಿಮ್ಮ ವಶದಲ್ಲಿಹೆನೆಂದಭಯವಿತ್ತುಇಂದುಮುಖಿ ನಾರಿಯರ ನೆರೆ ನಂಬಿಸಿನಂದನಂದನ ನಮ್ಮ ಕಾನನದೊಳೀಡ್ಯಾಡಿಇಂದು ಮಧುರೆಯ ನಾರಿಯರ ನೆಚ್ಚಿದ 3 ಕಪಟ ತಿಳಿಯಲರಿಯದೆ ನಾವುನವ ಹರಿಣಿಯಂತೆ ಮರುಳಾಗಿ ಕೇಳಿವಿವರವರಿಯದೆ ನಾವು ಕಡು ನೊಂದೆವೆಲೊ ಮಧುಪಇವನ ಗುಣವರಿಯದೆ ಕಡುಕರುಣಿ ಎಂಬುವರು 4 ಭವ ಬಂಧನಗಳೆಲ್ಲ ಈಡ್ಯಾಡಿಗತಿ ನಮಗೆ ಅವನೆಂದು ಮನಸೋತೆವೋಕೃತಕವರಿಯದೆ ನಮ್ಮ ವನದೊಳು ನಿಲ್ಲಿಸಿ ಪೋದಪತಿಯೊಡನೆ ಸಂಧಾನವೆಂತೊ ಎಲೊ ಮಧುಪ 5 ಮರುಳುಗಳು ನಾವು ಶ್ರೀಪತಿಯ ಕೂಟವ ಬಯಸಿಇರುಳು ಹಗಲು ಜರಿಜರಿದಳಲುವೆವುಸಿರಿಯವನ ಉಂಗುಟದ ಉಗುರು ಗುಣ ಕಾಣಳೆಲೋಹರಿ ನಮ್ಮ ನೆನೆವುದಚ್ಚರಿಯಲ್ಲವೆ6 ಭೃಂಗ ಮಧುರೆಗೆ ಪೋಗಿರಂಗವಿಠಲನ ತಂದೆಮ್ಮನುಳುಹುವುದೋ 7
--------------
ಶ್ರೀಪಾದರಾಜರು
ಸಮೀರಜ ಹನುಮ ಎನ್ನ ಪ್ರಾಣಾಪದಕಾ ಪ ಶಿರಿಚರಣದಲಿ ಮಸ್ತಕವನಿಟ್ಟ ಹೊಂತಕಾರಿ ಸುರಪನಂದನನ ಕೊಲ್ಲಿಸಿದ ನಿರುತ ಉದಾರಿ ಪರಮ ನಿನ್ನಂಘ್ರಿಯವಾರಿ ಸತತ ಶಿರದಲಿ ಧರಿಸುವೆನು ರಿಪುನಿಕರ ಮಾರೀ1 ಉಂಗುರುವ ಕೊಂಡು ಸರ್ರನೆ ಸಾಗರ ಹಾರಿ ತುಂಗ ಮಹಿಮಳಿಗೆ ವಂದಿಸಿ ಗುರುತನೆ ತೋರಿ ಸಂಗಡಲೆ ಯಿತ್ತು ನಂದನ ಕಿತ್ತೆ ಬಲು ಮೀರಿ ಸಂಗರಕೆ ಬಂದ ವಿಕಾರಿಗಳ ನೋಡಿ ಭಂಗಬಡಿಸಿದೆ ಅವರ ಬಲವೆಲ್ಲ ತೂರಿ 2 ನಭಚರರು ಕೊಂಡಾಡೆ ಪುರವೆಲ್ಲ ದಹಿಸಿದೆ ಅಭಿವಂದಿಸಿ ಕುರುಹವರಿಯನ ಮುಂದುವರಿಸಿದೆ ಅಬುಧಿಯನು ವೇಗ ಬಂಧಿಸಿದೆ ಪರ್ವತವ ರಭಸ ಮಿಗೆ ತಂದು ಕಪಿಬಲವನೆಬ್ಬಿಸದೆ 3 ದಾತನಿಗೆ ರಥವಾಗಿ ಚಲ್ಲಿರಿದು ಬೊಬ್ಬಿರಿದೆ ಭೂತಳಕೆ ನೆಗ್ಗೊತ್ತಿ ಎದುರಾದವರ ತರಿದೆ ನೀ ತಡೆಯದೆ ಪೋಗಿ ಮೈರಾವಣನ ಮುರಿದೆ ಕೋತಿಗಳೊಳಗೆ ನೀ ಮೆರೆದೆ ವೇದ ವಿಖ್ಯಾತನೆ ರಾಮ ಸಹಭೋಜದಲಿ ನೆರೆದೆ 4 ಬಲವನು ಬೆಳಿಸಿ ವಾರಿಧಿಯ ಆಚೆಗೆ ಬಲವ ಆಲಸÀಗೈಸದಲೆ ದಾಟಿಸಿದೆ ಬಲು ಛಲವಾ ವಾಲಯದಲಿ ಮಾಡಿ ವೈರಿದಳವನು ಗೆಲುವಾ ಕಾಳಗದೊಳು ನಿನ್ನ ಬಲವ ಕೊಂಡಾಡಿದವರು ಮೂಲೋಕದೊಳಗೆ ಸವಿಯದು ಬಲು ಚೆಲುವಾ 5 ಶತಮೌಳಿಯನು ಕೊಲಿಸಿ ಸತ್ಕೀರ್ತಿಯನು ಪಡೆದೆ ಪ್ರತಿಕಕ್ಷಿ ನಿನಗಿಲ್ಲವೆಂದು ಸತ್ಯವ ನುಡಿದೆ ಸತತದಲಿ ಕಾಪಾಡು ಎನುತ ಪಾದವ ಪಿಡಿದೆ ಮತಿಯಲಿಡು ಎಂದು ಬೇಡಿದೆ ಅಭಯವ ಚತುರ ಫಲದಾಯಕನೆ ದಯಮಾಡು ಬಿಡದೆ 6 ಕಿಂಪುರುಷ ಖಂಡದಲಿ ನಿಜಮೂರುತಿಯ ಧ್ಯಾನ ಇಂಪಾಗಿ ಮಾಡುವ ಅಂಜನೆಯನಂದನಾ ಲಂಪಟವೆ ಸಾಕು ನಿನ್ನಯ ಸುರದ್ರುಮ ಚರಣ ಸಂಪಿನಲಿ ಪೊಂದಿಸನುದಿನ ಎನ್ನ ಗುರುಸಂಪತ್ತು ವಿಜಯವಿಠ್ಠಲನಲ್ಲಿ ಪ್ರಾಣಾ7
--------------
ವಿಜಯದಾಸ
ಸರಸಿಜನಾಭಾ ದಕ್ಷಿಣ ಶರಧಿನಿವಾಸಾ ಪ ಹಿರಣ್ಯಕಶ್ಯಪು ತಾ ಪ್ರಹ್ಲಾದನಾ ಬಾಧಿಸಲು ಪರಿಯ ದೈವವೆ ಮೊರೆಯೋಗಲೂ ಹಿರಿದಾಗಿ ಕೇಳಿ ಹಿತದಲಿ ಬಂದು ಬೊಬ್ಬಿಡಲು ಹಿರಣ್ಯಗರ್ಭಾದಿಗಳು ಹಿರಿದು ಚಿಂತಿಸಲೂ 1 ಭುಗಿಲೆನೆ ಧಿಗಿಲೆನೆ ದಿಕ್ಕಿನೆಲಿ ಪ್ರತಿ ಶಬ್ದ ಪುಟ್ಟಿತಿರೆ ಝಗಝಗಿಪ ಬೆಳಗು ಕವಿದದು ಮೂರು ಲೋಕಕ್ಕೆ ಉಗುರು ಕೊನೆ ಪೊಗಳಿ ವೇದಗಳು ಬೆರಗಾಗಿ 2 ರಕ್ಕಸ ನೋಡಲು ಬಗೆದು ಕರುಳು ಕೊರಳಿಗೆ ಮಾಲೆ ಇಕ್ಕಿ ಭಕ್ತಗೆ ಮೆಚ್ಚಿ ವರವನಿತ್ತಾ ಕಕ್ಕಸದ ದೈವ ಅನಂತ ಪದುಮನಾಭ ಮುಕ್ತಿದಾಯಕ ವಿಜಯವಿಠ್ಠಲ ಮಹದಾ3
--------------
ವಿಜಯದಾಸ
ಆನೆ ಬಂತಾನೆ ಬಂತಾನೆ ಬಂತಮ್ಮದಾನವಕದಳಿಯಕಾನನಮುರಿವ ಮದ್ದಾನೆ ಬಂತಮ್ಮಪ.ಉಂಗುರುಗುರುಳು ನೀಲಾಂಗ ಚೆಲ್ವಾನೆಕಂಗಳುಹೊಳೆವೊ ವ್ಯಾಘ್ರಾಂಗುಲಿಯಾನೆಬಂಗಾರದಣುಗಂಟೆ ಶೃಂಗಾರದಾನೆಮಂಗಳತಿಲಕದ ರಂಗನೆಂಬಾನೆ 1ಅಲೆದೊಲೆದಾಡುವ ಎಳೆಮರಿಯಾನೆಕೆಳದಿ ಗೋಪಿಯರೊಳು ಗೆಳೆತನದಾನೆಘಳಿಲು ಫಳಿಲು ರವದಿ ಸುಳಿದಾಡುವಾನೆಮಲೆತವರೆದೆ ತುಳಿದಾಡುವಾನೆ 2ನಳಿನಭವರಿಗೆ ತಾ ನಿಲುಕದ ಆನೆಹಲವು ಕವಿಗಳಿಗೆ ಸಿಲುಕದೀ ಆನೆನಲವಿಂದ ಭಕ್ತರ ಸಲಹುವ ಆನೆಸಲೆ ಪ್ರಸನ್ವೆಂಕಟನಿಲಯನೆಂಬಾನೆ 3
--------------
ಪ್ರಸನ್ನವೆಂಕಟದಾಸರು
ಚಿಣ್ಣರೊಡನಾಡನಡೆದ ಮುದ್ದುರಂಗ ಮುದ್ದು ಕೃಷ್ಣ ಪ.ಇಟ್ಟು ಹಣೆಯೊಳು ಉಗುರು ನಾಮವ ಗೋವಗಟ್ಟಿಗೆಯನು ಕರದೊಳು ಪಿಡಿದುಪುಟ್ಟ ಕಂಬಳಿ ಹೊದ್ದು ಪದಕೆ ಪಾದುಕೆಮೆಟ್ಟಿ ಅಣ್ಣ ಬಲರಾಮ ನಡೆಯೆಂದು 1ಆಡಲೊಲ್ಲೆನೆಂಬ ಮಕ್ಕಳ ಮನ್ನಿಸಿಕೂಡಿಕೊಂಡು ಅಣ್ಣ ತಮ್ಮನೆಂದುಹಾಡುತ ಕುಣಿದು ಚಪ್ಪಾಳೆ ಹೊಯಿದಾಡುತಓಡ್ಯಾಡಿ ಅಮ್ಮನ ಮಾತ ಕೇಳದೆ ಕೃಷ್ಣ 2ಚಿಣ್ಣಿ ಪೊಂಬಗರ್ಚೆಂಡು ಗುಮ್ಮ ಗುಸಕು ಹಬ್ಬೆಅಣ್ಣೆಕಲ್ಲು ಹÀಲ್ಲೆ ಗಜಗ ಗೋಲಿಕಣ್ಣುಮುಚ್ಚಾಲೆ ಮರನೇರಾಟ ನೀರಾಟಸಣ್ಣರೊಳಾಡಿ ಸೋಲಿಪೆನೆಂಬ ತವಕದಿ 3ರಾಜಿಪ ರಾಜಬೀದಿಲಿನಿಂದುನೋಡುವರಾಜಮುಖಿಯರೊಳು ಸೆಣಸ್ಯಾಡುತರಾಜಕುಲಾಗ್ರಣಿ ಸರ್ವಭೂಷಣದಿ ವಿರಾಜಿತನಾಗಿ ಗೋಳಿಡುತ ಮುರಾರಿ 4ಜಗವ ಪುಟ್ಟಿಸಿ ನಲಿದಾಡುವಾಟವು ತನಗೆ ಸಾಲದೆಂದು ಆವಹಳ್ಳಿಲಿಬಗೆ ಬಗೆ ಲೀಲೆಯ ತೋರಿ ಗೋಗಾವರ್ಗೆಸುಗತಿನೀವೆನೆಂದು ಪ್ರಸನ್ವೆಂಕಟ ಕೃಷ್ಣ 5
--------------
ಪ್ರಸನ್ನವೆಂಕಟದಾಸರು
ಬಾಲನ ನೋಡಿರೆನಿವಾಳಿಸಿಆಡಿರೆಕಾಲಅಂದುಗೆಕೈ ಕುಣಿಸದೆ ಸವಿಮಾತಾಲಿಪನ ನಮ್ಮಪ್ಪನ ಪ.ಬಾಲಕರನ್ನನ ಉಂಗುರುಗುರುಳಿನ ಸುಳಿಯೊಭೃಂಗಾವಳಿಯೊ ಶ್ರೀಲೋಲನ ವಿಸ್ತರ ಬಾಳವು ಕಳೆಗೇಡಿಯೊಪೊಂಗನ್ನಡಿಯೊಪಾಲ್ಗಡಲ ಪ್ರಭುವಿನೀ ಬಟ್ಟಗಲ್ಲಗಳೊಮರಿಯಾವಿಗಳೊಶೂಲಿಯ ಮುತ್ತಿದ ತಿದ್ದಿದ ಹುಬ್ಬಿನ ಹೊಳವೊನಿಂಬ ಸುದಳವೊ 1ಯದುಕುಲ ತಿಲಕನ ಢಾಳಿಪ ಕಂಗಳ ಠಾವೊತಾವರೆ ಹೂವೊಮದನನಯ್ಯನ ಮೀಟಿದ ಮೂಗಿನ ಕೊನೆಯೊಸಂಪಿಗೆ ನನೆಯೊಸದಮಲ ಲೀಲನ ಸೊಬಗಿನ ನಾಸಾಪುಟವೊಮುತ್ತಿನ ಬಟುವೊವಿಧುವಂಶೇಂದ್ರನ ವೃತ್ತ ಮನೋಹರ ವದನೊಮೋಹದ ಸದನೊ 2ಸುರರುಪಕಾರಿಯ ಎಳೆದುಟಿಯ ಕೆಂಬೊಳವೊಬಿಂಬದ ಫಲವೊಗರುಡಾರೂಢನ ಮೊಳೆವಲ್ಲುಗಳ ಬಿಳುಪೊಕುಂದಕುಟ್ಮಳವೊಕರುಣಾಂಬುಧಿಯ ಕಿವಿ ಶುಕ್ತಿಯೊ ಗದ್ದೊಮುದ್ದಿನ ಮುದ್ದೊಶರಣರ ಪ್ರಿಯನ ತ್ರಿರೇಖೆಯ ಕಂದರವೊ ಸುಂದರದರವೊ 3ದೇವಕಿತನಯನ ಪುಷ್ಟಯುಗಳದೋರ್ದಂಡೊಕಲಭದ ಶುಂಡೊದೇವವರೇಣ್ಯನ ಕರತಳದಂಗುಲಿ ಸರಳೊಕೆಮ್ಮಾಂದಳಿಲೊಭಾವಿಕ ಜನಜೀವನ ಪೀನೋನ್ನತ ಉರವೊವಜ್ರದ ಭರವೊಸೇವಕಪಕ್ಷನ ಉದರದವಲ್ಲಿತ್ರಿವಳಿಯೊ ಅಮರರಹೊಳಿಯೊ 4ಅಜನಯ್ಯನ ಅಚ್ಯುತನ ನಾಭಿಯ ಸುಳಿಯೊಅಮೃತದೊಕ್ಕುಳಿಯೊತ್ರಿಜಗದ ಗರ್ಭ ವಿನೋದಿಗಳರಸನ ಮಣಿಯೊಪಚ್ಚದ ಮಣಿಯೊಸುಜನರ ಮಾನಿಯ ಬಟ್ಟದೊಡೆಯ ಸಂರಂಭೋಎಳೆವಾಳೆಯ ಕಂಭೋಗಜವರದನ ಗೋವಿಂದನ ಜಾನುಗಳ ಪೊಗರ್ವೊಹರಿಮಣಿಯ ಪೊಗರ್ವೊ 5ತ್ರಿಗುಣಾತೀತನಂತನ ಜಂಘಗಳಿಳಿಕ್ಯೊ ಶರಬತ್ತಳಿಕ್ಯೊನಿಗಮಾಗಮ್ಯನ ಚರಣಯುಗಂಗಳ ನಿಜವೊಅರುಣಾಂಬುಜವೊಮೃಗನರರೂಪನ ಅನುಪಮ ನಖಗಣ ಮಣಿಯೊಬಾಲಖಮಣಿಯೊಸುಗಮನ ಪದತಳದಂಕುಶ ಧ್ವಜಾಂಬುರೇಖೆÉ್ಯೂೀವಿದ್ಯುರ್ಲೇಖೆÉ್ಯೂ 6ಆಭರಣಗಳಿಗೆ ಆಭರಣವೆ ಎಳೆಗರುವೆ ಕಲ್ಪತರುವೆಸೌಭಾಗ್ಯದ ಶುಭಖಣಿಯೆ ನಂದಾಗ್ರಣಿಯೆ ಚಿಂತಾಮಣಿಯೆ ನಿನ್ನ ಬಿಗಿದಪ್ಪುವ ಭಾಗ್ಯವಿನ್ನೆಂತೊಉಮ್ಮುಕೊಡು ನಮ್ಮಮ್ಮಶ್ರೀಭೃತ ಪ್ರಸನ್ವೆಂಕಟ ಕೃಷ್ಣ ತಮ್ಮ ಬಾ ಪರಬೊಮ್ಮ 7
--------------
ಪ್ರಸನ್ನವೆಂಕಟದಾಸರು