ಶ್ರೀಹರಿ ಸಂಕೀರ್ತನೆ
ಈಶ ಬಂದನೊ ಸರ್ವೇಶ ಬಂದನೊ
ಈಶ ಬಂದ ನೋಡಿ ಪಿಕನಾಶಿನೊಳಗೆ
ಸುಳಿದಾಡುತ ವಾಸುದೇವನಾದ ಮೂರ್ತಿ
ಶ್ರೀಶ ಭಕ್ತ ವಿಲಾಸರಾಮಾ ಪ
ಅಂಡಜವಾಹನ ಭೂಮಂಡಲೇಂದ್ರರು ನುತಿಸುವಂಥ
ಪುಂಡಲೀಕವರದ ಕೋದಂಡಧರ ದಶರಥ ನಂದನ
ಎಸೆವ ಮುತ್ತಿನ ಹಾರ 1
ಎಸೆವ ಮುತ್ತಿನಹಾರ ಕೊರಳಾ ಹಸಿರು ಉಂಗುರಬೆರಳ
ತುದಿಬೆರಳಿನಿಂದ ತೋರಿಕರೆವ ಸುರುತಿ ಪಾಲಕನಾದ 2
ಮುಗುಳು ನಗುವು ನಗುತ ನೀನು ಬಗೆ ಬಗೆಯ
ಭಾಗ್ಯಗಳಾ ತೋರುತ ಸರರಾತ್ರಿಯ ಒಳಗೆ ಒಳ್ಳೆ
ಸೊಗಸುವುಳ್ಳ ರೂಪದಿಂದಾ 3
ತಂದೆ ತಾಯಿ ತಾನೇ ಆಗಿ ಬಂಧು ಬಳಗಾ ಭಾಗ್ಯವಾಗಿ
ಹರಿ ಗೋವಿಂದಾ 4
'ಹೊನ್ನವಿಠ್ಠಲ' ರಾಯಾ
ಇಂದು ಮುಕುಂದಾ 5