ಒಟ್ಟು 5 ಕಡೆಗಳಲ್ಲಿ , 5 ದಾಸರು , 5 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಗೋಪಿ ಎನ್ನ ಕೊಲ್ಲಬೇಕೆಂಬ ಬಗೆಯ ಪ ಹರವಿಯ ಹಾಲು ಕುಡಿಯಲು ಎನ್ನ ಹೊಟ್ಟೆಕೆರೆಯೇನೆ ಹೇಳಮ್ಮಯ್ಯಕರೆದು ಅಣ್ಣನ ಕೇಳಮ್ಮ ಉಂಟಾದರೆಒರಳಿಗೆ ಕಟ್ಟಮ್ಮಯ್ಯ 1 ಮೀಸಲು ಬೆಣ್ಣೆಯನು ಮೆಲುವುದು ಎನಗೆದೋಷವಲ್ಲವೇನಮ್ಮಯ್ಯಆಸೆ ಮಾಡಿದರೆ ದೇವರು ಕಣ್ಣಮೋಸದಿ ಕುಕ್ಕೋನಮ್ಮಯ್ಯ 2 ಅಟ್ಟವನ್ನೇರಿ ಹಿಡಿವುದು ಅದು ಎನಗೆಕಷ್ಟವಲ್ಲವೆ ಹೇಳಮ್ಮಯ್ಯ ನೀಕೊಟ್ಟ ಹಾಲು ಕುಡಿಯಲಾರದೆ ನಾನುಬಟ್ಟಲೊಳಗಿಟ್ಟು ಪೋದೆನೆ 3 ಪುಂಡುತನವ ಮಾಡಲು ನಾನು ದೊಡ್ಡಗಂಡಸೇನೆ ಪೇಳಮ್ಮಯ್ಯ ಎನ್ನಕಂಡವರು ದೂರುತಾರೆ ಗೋಪಮ್ಮ ನಾ ನಿನ್ನಕಂದನಲ್ಲವೇನೆ ಅಮ್ಮಯ್ಯ 4 ಉಂಗುರದ ಕರದಿಂದ ಗೋಪಮ್ಮ ತನ್ನಶೃಂಗಾರದ ಮಗನೆತ್ತಿರಂಗವಿಠಲನ ಪಾಡಿ ಉಡುಪಿಯ ಉ-ತ್ತುಂಗ ಕೃಷ್ಣನ ತೂಗಿದಳು 5
--------------
ಶ್ರೀಪಾದರಾಜರು
ನೋಡಿದೆನೊ ಮನದಣಿಯ ನಳಿನಭವಾದ್ಯರ ಕ್ರೀಡಾಮೃಗವನೆ ಮಾಡಿ ಆಡಿಸುವ ವಿಚಿತ್ರ ಮಹಿಮ ಗೋಪಾಲಗ ಈಡುಗಾಣೆನೊ ಎಲ್ಲೆಲ್ಲಿ ಆವಲ್ಲಿ ಪ ಕಾಲಲಂದಿಗೆ ಗೆಜ್ಜೆ ಸರಪಳಿ ಉಡುದಾರ ಮೇಲು ಕಿರಿಗೆಜ್ಜೆ ಘಂಟೆ ತೋಳು ರಕ್ಷಾಮಣಿ ನಾಗ ಮುರಿಗೆ ಬಂದಿ ಸಾಲು ತಾಯಿತ ಕಟ್ಟಿರೆ ವಜ್ರ ಉಂಗುರದ ಬೆರಳು ಸು ಫಾಲದಲಿಯಿಟ್ಟ ತಿಲಕಾ ಲಾಲಿಸುವ ಬಾಲಕರೂಪದಿಂದಲಿ ಪ್ರಾತಃ ಇಂದು 1 ಮುಂಗೈ ಮುರಾರಿ ಪವಳದ ಬುಲಿಗೆಜ್ಜೆ ಬಂಗಾರ ಕೊರಳಲ್ಲಿ ಹಾ ರಂಗಳನು ಶೋಭಿಸುವ ಮಾಗಾಯಿ ಕರ್ಣದಲಿ ಉರ ಕೌಸ್ತಭ ಕಂಗೊಳಿಪ ಎಣೆನೂಲು ಹುಲಿಯುಗುರು ತಾಳಿಸರ ಹಿಂಗದಲೆ ಪಚ್ಚೆ ಪದಕಾ ಶೃಂಗಾರದರಳೆಲೆ ಶಿರದಿ ಜಾವಳ ಜಡೆ ಇಂದು 2 ಮಕರ ಕಡಗೋಲ ನೇಣನ್ನೆ ಕರದಲಿ ಪಿಡಿದು ಉರ ಪಾಣಿಗಳು ಬೆಣ್ಣೆ ಮೊಸರಿಲಿ ತೋದಿರೆ ಚನ್ನನಾಸಾ ಮಣಿತೂಗೆ ಅದರ ಭಾಗ್ಯ ಬಣ್ಣಿಪಲರಿದು ತಿಳಿದು ಚಿನ್ಮಯ ವಿಜಯವಿಠ್ಠಲ ವಿಶ್ವರೂಪ ಪಾ ಇಂದು 3
--------------
ವಿಜಯದಾಸ
ಮಧ್ವಾಂತರ್ಯಾಮಿ ಶ್ರೀ ಗುರು ಬಿಂಬ ಕಾಯೊ ಪ. ಹೃದ್ವನಜದಲಿ ನೆಲಸಿ ಆಜ್ಞಾನ ಹರಿಸಿ ಅ. ಸಾಟಿ ರಹಿತನೆ ನಿನ್ನ ಮುಖ ದರ್ಶನಾ ಹಾಟಕೋದರ ಮುಖರು ಅರಿಯದಂತವನನ್ನು ಕೋಟಲೆಯಭವ ಜನರು ಅರಿವದೆಂತಯ್ಯಾ 1 ತ್ರಿವಿಧ ಜೀವರ ತೆಗೆದು ಜನ್ಮದಲಿ ತೊಡಕಿಸೀ ಕರ್ಮ ಬಲೆ ಬೀಸಿ ಪವನನೈಯ್ಯನೆ ನಿನ್ನ ಮಾಯ ಮೋಡವ ಕವಿಸಿ ಭವಣಪಡಿಸಲು ಇನ್ನು ಬಿಡುಗಡೆಯದೆಂತೋ 2 ನೀನಾಗೆ ವಲಿದು ನಿನ್ನ ಭಕ್ತರನು ಕಾಯುತಿಯೊ ಮಾನಾಭಿಮಾನದೊಡೆಯನೆ ಆರ್ತಪಾಲ ಗಾನಲೋಲನೆ ನಿನ್ನ ಧ್ಯಾನ ಮೌನವನಿತ್ತು ಮಾನಸದಿ ನಿನ್ನ ತೋರೊ ದೀನ ರಕ್ಷಕನೇ3 ಅಂಗುಟದಿ ಗಂಗೆಯನು ಪೆತ್ತ ಪಾವನಪಾದ ಶೃಂಗಾರ ವಸನ ವಡ್ಯಾಣ್ಯನಡುವೂ ಅಂಗನೆಯು ವಕ್ಷದಲಿ ಹಾರಪದಕಗಳುಲಿಯೆ ಉಂಗುರದ ಬೆರಳು ಕಂಕಣ ಕಡಗ ಪಾಣೀ 4 ಕರ್ಣಕುಂಡಲ ಕಾಂತಿ ಮುಗುಳುನಗೆ ಕುಡಿನೋಟ ರನ್ನ ತಿಲಕದ ಫಣಿಯ ಮುಂಗುರುಳ ಸೊಬಗೊ ಸ್ವರ್ಣಕಾಂತಿಯ ತೇಜ ಕಡಗೋಲ ಕೈ ಸೊಬಗು ಚನ್ನಗೊಪಾಲಕೃಷ್ಣವಿಠಲ ಉಡುಪೀಶಾ 5
--------------
ಅಂಬಾಬಾಯಿ
ರಂಗ ಬಾರನ್ಹ್ಯಾಗೆ ಮಾಡಲಂಬುಜಾಕ್ಷಿಯೆ ರಂಗ ಬಾರನ್ಹ್ಯಾಗೆ ಮಾಡಲೆ ಪ ತಾಪ ಹೋಗದು ಶೀತ ಕಳೆವೊ ಸೂರ್ಯನಂತೆ ದ್ವಾರಾವತಿಯ ನಿಲಯನಮ್ಮ 1 ಅಕ್ಕ ರುಕ್ಮಿಣಿಯಲ್ಲಿ ನಕ್ಷತ್ರಮಧ್ಯಚಂದ್ರನಂತೆ ಪೊಕ್ಕಳಿಂದಲಜನ ಪಡೆದ ಚಕ್ರಧಾರಿ ಅಕ್ಕರ ಪಡುವೊ 2 ಕರೆದುತಾಹೋರೊಬ್ಬರಿಲ್ಲ ಕರುಣಾನಿಧಿಯೆಂಬುವುದು ಸಲ್ಲ ತರುಣಿ ಸತ್ಯಭಾಮೆಗಧಿಕ ತಿಳಿದು ತನ್ನ ರುಕ್ಮಿಣಿಯಲ್ಲಿರುವ 3 ಉಂಗುರದ ಹರಳಿನಂತೆ ಹೊಂದಿಕೊಂಡು ರುಕ್ಮಿಣಿಯನ್ನು ಇಂದಿರೇಶ ಬಿಟ್ಟಿನ್ನೊಬ್ಬರ ಮಂದಿರಕ್ಕೆ ಬಂದಿಹನ್ಹ್ಯಾಗೆ 4 ಮಂದಮತಿಯು ಆದನೇನೆ ತಂದೆಯಾದ ಸತ್ರಾಜಿತನು ತಂದುಕೊಟ್ಟನೆನ್ನ ಈ ಸುಂದರಳಾದ ಸೌ(ಸವ?) ತಿ ಕೆಳಗೆ 5 ಅಕ್ರೂರಜಮಿಳಂಬರೀಷ ಚಿಕ್ಕಧ್ರುವ ಪ್ರಹ್ಲಾದ ಗಜನು ಭಕ್ತಿಯಿಂದ ಕರೆಯೆ ಕಣ್ಣೆತ್ತಿ ನೋಡನವರನೀಕಾಲಕ್ಕೆ 6 ಗಾಯನದಿ ಗಂಧರ್ವ ಬಂದು ನಾರದ ಸುದಾಮ ಬಂದು ಬೇಡಿಕೊಂಡು ಕರೆಯಲವರ ನೋಡಿ ಮುಂದಕೆ ಬರುವನಲ್ಲ 7 ಸೋಳ ಸಾವಿರ ಸತಿಯರೆಲ್ಲ ಭಾಳ ಚಿತ್ರಭೂಷಿತರಾಗಿ ಏಳು ಕೃಷ್ಣೇಳೆಂದು ನಾಲ್ಕು ತೋಳು ಪಿಡಿದು ಕರೆವೋಣೇನೆ 8 ನೀಲ ಜಾಂಬವಂತಿ ಹಚ್ಚಿದ್ಹಗಲು ಬತ್ತಿಯಂತೆ ಸುತ್ತುಗಟ್ಟಿ ಕರೆವೋಣೇನೇ 9 ಪುತ್ಥಳ್ಯಂತ ರುಕ್ಮಿಣಿ ತೊಡೆಯಲಿಟ್ಟು ಕುಳಿತನಿಂದಿರೇಶ ಬಿಟ್ಟರಾಕೆ ನಮ್ಮನು ಕಣ್ಣೆತ್ತಿ ನೋಡೋದಷ್ಟೆ ಹೊರತು 10 ಗೊಲ್ಲ ಸತಿಯರೆಲ್ಲ ತಮ್ಮಲ್ಲಿ ದಧಿಬೆಣ್ಣೆಗಳ ತಂದು ಮೆಲ್ಲು ಕೃಷ್ಣಯೆಂದು ಕರೆಯೆ ಫುಲ್ಲನೇತ್ರ ತೆಗೆದುಕೊಂಡ11 ಕುಬ್ಜೆ ಕರದಿ ಗಂಧ ಹಚ್ಚೇನೆಂದು ಕರೆಯೆ ಬೆನ್ಹತ್ತಿ ಬರುವನೇನೆ ಕೃಷ್ಣ 12 ಸಾಸಿರ್ಹೆಡೆಯ ಮಂಚವಿಳಿದು ಸರಸವಾದ ವಚನದಿಂದ ಭೀಷ್ಮೆ ಭಿಡಿಯವೇನೆ ಭೀಮೇಶಕೃಷ್ಣನ ಕರೆವೋದಕ್ಕೆ13
--------------
ಹರಪನಹಳ್ಳಿಭೀಮವ್ವ
ಶ್ರೀಹರಿ ಸ್ತವನ ಅರ್ಜುನಗಾನಂದಾ ಮಾಡಿದ ಗೋವಿಂದಾ ಪ ರಥದಿ ಮಂಡಿಸಿ ಚತುರತನದಲಿಂದಾ ಚತುರ ಹಸ್ತದಿಂ ವಾಜಿಯಂ ಪಿಡಿದು ರಥಕನ ಬೆನ್ಹಿಂದಿಟ್ಟುಕೊಂಡು ಸಾ- ರಥಿಯು ತಾನೆ ಅಶ್ವವ ನಡಿಸುತಲಿ ರತಿಪತಿಪಿತನತಿಚಮತ್ಕಾರದಿಂ ಪೃಥಿವಿಯ ಮೇಲೆ ನರನಟನ ತೋರುತಲಿ ಪತಿತ ಪಾವನನು ಫಲ್ಗುಣ ಸಖನು ನುತಿಸಿದವರ ನೆರೆ ಪಾಲಿಸುತಿಹನು ಅತುಳ ಶಂಖದಿಂ ಭೌಂ ಭೌಂ ಎನಿಸುತ ರಥದ ಗಾಲಿ ಛಿಟ್ ಛಿಟ್ ಛಿಟಿಲೆನುತ ಕುದುರೆ ಖುರಪುಟಧ್ವನಿ ಫಳ್ ಫಳ್ ಫಳ್ಳೆ ಗೋವಿಂದನು ರಭಸದಿ ಭಕ್ತನೂಳಿಗಾ1 ಮಂದಜಭವ ಮುಖ್ಯಾಮರ ವೃಂದವು ನಂದತನುಜನಾರಂದಲೀಲೆಯಂ ಛಂದದಿ ನೋಡುತ ನಭೋಮಾರ್ಗದೊಳ್ ಬಂದು ಕುಸುಮಗಳ ವೃಷ್ಟಿಯ ಸುರಿದು ಸಿಂಧುಶಯನ ನಾಮಾಮೃತ ಸುರಿದು ಬೃಂದಾರಕ ನಿಕರವು ಕೈಯೆತ್ತಿ ಇಂದುಕಲಾಧಿಪ ಪ್ರಾರ್ಥನೆ ಸೈ ಸೈ ಎಂದು ದೇವದುಂದುಭಿ ಧೋಂ ಧೋಂ ಕಂಸಾ- ಳದರವ ಖಿಣಿಖಿಣಿ ಖಿಣಿ ಭೇರಿ ನಾದ ಖಡ್ ಖಡ್ ಖಡಲ್ ಭಾರಿ ತಾ- ಹತಜಂತರಿಧೂಂ ನರ್ತನಗೈವುತ ತೆರಳುತ 2 ಮಂಗಳ ರವದಿಂ ಜಯಜಯ ಎನಿಸುತ ಮಂಗಳಾಂಗಿ ರುಕ್ಮಿಣಿ ವಲ್ಲಭನು ರಂಗಿನಿಂದ ರಥವಿಳಿದು ಗೆಳೆಯನ ಮುಂಗೈಯನೆ ಪಿಡಿದು ಅಂಗಜನಯ್ಯ ರಂಗುಮಣಿಯ ಉಂಗುರದಿ ಒಪ್ಪುತಲಿ ಭಂಗಾರಕೆ ಮಿಗಿಲೆನಿಪ ದುಕೂಲದಿ ಶೃಂಗರದಲ್ಲಿ ಉತ್ತುಂಗ ಪರಾಕ್ರಮ ಅಂಗಳದೋಳ್ ನಲಿದಾಡುತ ರಂಗನು ತಿಂಗಳ ಕುಲದೀಪನ್ನ ನೋಡುತಲಿ ರಂಗ ಕದರುಂಡಲಗೀಶನ ಒಡೆಯನು ತಾ 3
--------------
ಕದರುಂಡಲಗೀಶರು