ಒಟ್ಟು 4 ಕಡೆಗಳಲ್ಲಿ , 4 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಅಂಗವ ಶಿಂಗರಿಸೊ ಶ್ರೀ ರಾಮಗೆ ಪ. ರಥವೆಂದು ಮಂಗಳ ಮಹಿಮನ ಉಂಗುಟದಿಂದ ಬಂದ ಗಂಗೆಯ ಸ್ನಾನದಿ ಹಿಂಗಿಸು ಭವವೆಂದು ಅ.ಪ. ಗಂಗಾಜನಕನ ಸ್ಮರಿಸುತ ನಿನ್ನ ಅಂಗವನುಜ್ಜಿ ಕಲಿಮಲ ತೊಳೆದು ಭಂಗ ತರದ ಪರಿ ರಂಗುರಂಗುಗಳ್ವಸ್ತ್ರ ರಂಗಗೆ ಪೀತಾಂಬರವೆಂದು 1 ಗೋಪೀ ಚಂದನ ಲೇಪಿಸುತಂಗಕೆ ಶ್ರೀಪ ವಲಿವನೆಂದ್ಹರುಷದೊಳು ಧೂಪಾರತಿ ಅಂಗಾರದಕ್ಷತೆ ಸೊಬಗ ಶ್ರೀಪತಿ ನೋಟಕೆ ಭೂಪನಾಗಿಹೆನೆಂಧು 2 ಮಂಗಳದನ್ನ ವೀಳ್ಯವ ಮೆದ್ದು ತನ್ನ ಅಂಗನೆಯೊಳು ಅನಂಗಜನಕನ ರಂಗನಲೀಲೆಯಂದದಿ ಹರುಷಿಸೀ ಇಂಥಾ 3
--------------
ಸರಸ್ವತಿ ಬಾಯಿ
ಮೂರ್ತಿಧ್ಯಾನ ಕಮಲಜ ಹೃತ್ಸರೋವರ ಕಂಜವೆಂಸಾ ಮನುಜ ಹೃದ್ವ್ಯೋಮದಿ ಮಿಂಚಿನಂತೆಸೆವಾ ಧ್ವಜವಜ್ರ ಪದುಮ ಪತಾಕಾಂಕುಶ ವಹ ನಿಜಕಾಂತಿಯಲರುಣಾಬ್ಜದಂತೆಸೆವಾ ಪದತಳದ ಮೇಲೆ ಥಳಥಳಿಸುತಲಿಹ ಪದುಮಭವಾಂಡ ಭೇದನದಕ್ಷವೆನಿಸುವಾ ಸುರವಾಹಿನಿಗೆ ತೌರುಮನೆ ತಾನಹ ದುರುಳ ಶಕಟತನುಚೂರ್ಣೀಕೃತವಹ ಪಾರ್ಥಶರೀರ ರಕ್ಷಣಕರ್ತೃತಾನಹ ಪಾತಕ ಪರಿಹರವಹ ಉಂಗುಟದಿಂ ಭುವನಗಳತಿಗಳ ಹಿಂಗಿಪ ನಖಪಂಕ್ತಿಗಳ ಕಿರಣಗಳಾ ವೀರಮುದ್ರಿಕೆಯ ಮಂಟಿಕೆಯಕಾಂತಿಗಳಾ ವೋರಂತೆ ಪೆರ್ಚಿಹ ಪಾದಾಂಗುಲಿಗಳಾ ತೊಳಪ ಕಡೆಯ ಪೆಂಡೆಯದ ತೊಡವು ಗಳ ವೈಕುಂಠಗಿರಿ ವೇಂಕಟೇಶ ನಿನ್ನಾ | ಚರಣಸೇವೆಯನೇ ಕರುಣಿಸಯ್ಯಾ
--------------
ಬೇಲೂರು ವೈಕುಂಠದಾಸರು
ನಿನ್ನ ಮಹಿಮೆಗಳೆಲ್ಲ ನೀನೆ ಬಲ್ಲೈಯ್ಯ ವರದಚಿನ್ಮಯ ಗರುಡಗಿರಿಯ ಮಾನ್ಯ ತಿಮ್ಮ್ಮಯ್ಯ ಪ.ನಿಜರಾಣಿಗಂಘ್ರಿನಖನಿಜವು ತಿಳಿಯದ ಮಹಿಮೆವ್ರಜದಿ ವದನದಿ ತಾಯ್ಗೆತ್ರಿಜಗತೋರಿದ ಮಹಿಮೆಅಜಫಣಿಗಳುಗ್ಘಡಿಪ ಮಹಿಮೆಮಂದಅಜಮಿಳ ಬೆದರ್ಯೊದರೆ ಭಜಕನಾದ ಮಹಿಮೆ 1ನಿಲ್ಲದಾ ಮುನಿಮನದಿ ಚೆಲ್ವ ಚರಣದ ಮಹಿಮೆಬಲ್ವಿಂದ ಉಂಗುಟದಿ ತಳ್ವೆಂಗದ ಮಹಿಮೆದುರ್ಲಭ ಮಮರಿಗೆ ನೋಟ ಮಹಿಮೆ ಆಗೊಲ್ವೆಂಗಳೇರ ನೋಡಿ ಭುಲ್ಲೈಪ ಮಹಿಮೆ 2ವೈಕುಂಠ ಮಂದಿರದಿ ಮುಕುತರೊಂದಿತ ಮಹಿಮೆಗೋಕುಲದಿ ಗೊಲ್ಲರೊಳು ಆಕಳ ಕಾಯುವ ಮಹಿಮೆ ಅನೇಕಜಾಂಡದಿ ಪೂರ್ಣ ಮಹಿಮೆ ಪ್ರಸನ್ವೆಂಕಟಾದ್ರಿಯ ಮೇಲೆ ಏಕೈಕ ಮಹಿಮೆ 3
--------------
ಪ್ರಸನ್ನವೆಂಕಟದಾಸರು
ರಾಮಕೃಷ್ಣರು ಮನೆಗೆ ಬಂದರು ಬಾಗಿಲ ತೆರೆಯಿರೊ |ಕಾಮಧೇನು ಬಂದಂತಾಯಿತು ಸುಖವ ಸುರಿಯಿರೊ ಪಮಕರಕುಂಡಲನೀಲಮುತ್ತಿನ ಚೌಕಳಿ ಇಡುತಲಿ |ಸುಕುಮಾರ ಸುಂದರವಾದ ಉಡುಗೆಯುಡತಲಿ ||ಮುಖದಕಮಲಮುಗುಳನಗೆಯ ಸುಖವ ಕೊಡುತಲಿ |ಕಂಕಣ ಹಾರ ತೋಳಬಂದಿ ತೊಡಿಗೆ ತೊಡುತಲಿ 1ಚೆಂಡು-ಬೊಗರಿ-ಚಿಣ್ಣಿಕೋಲು-ಗಜುಗವಾಡುತ |ದುಂಡುಮಲ್ಲಿಗೆತುಂಬಿಕೊಳಲನೂದಿ ಪಾಡುತ ||ಮಿಂಡೆವೆಂಗಳ ಮುದ್ದು ಮೊಗದ ಸೊಗವ ನೋಡುತ |ಭಂಡುಮಾಡಿ ಭಾಮೆಯರೊಡನೆ ಸರಸವಾಡುತ 2ಪೊಕ್ಕುಳಲ್ಲಿ ಅಜನ ಪಡೆದ ದೇವದೇವನು |ಚಿಕ್ಕ ಉಂಗುಟದಿ ಗಂಗೆಯ ಪಡೆದನಾತನು ||ಮಕ್ಕಳ ಮಾಣಿಕ್ಯ ಪುರಂದರವಿಠಲ ರಾಯನು |ಭಕ್ತ ಜನರಿಗೊಲಿದ ನೀನು ಮುಕ್ತಿದಾತನು 3
--------------
ಪುರಂದರದಾಸರು