ಒಟ್ಟು 4 ಕಡೆಗಳಲ್ಲಿ , 1 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಇಂದು ಭಾಸ್ಕರ ಪುಣ್ಯ ಪ್ರಭೆಯ ಕೂಡಿ ಧ್ರುವ ಪುಣ್ಯ ಎದುರಿಟ್ಟು ಬಂದು ಮುಂದೆ ಕಣ್ಣಾರೆ ಕಂಡು ತ್ರಾಹಿ ಎಂದೆ ಸಣ್ಣ ದೊಡ್ಡದರೊಳು ವಸ್ತು ಒಂದೆ ಬಣ್ಣ ಬಣ್ಣಾ ಗೀಹ್ಯದರಿಂದೆ 1 ಹೇಳಬಾರದಯ್ಯ ನಿಜವರ್ಮ ಕೇಳಿ ಶ್ರೀಸದ್ಗುರು ಪಾದಧರ್ಮ ಅಳಿಯಿತು ನೋಡಿ ಪೂರ್ವ ಕರ್ಮ ಹೊಳಿಯಿತೆನ್ನೊಳು ಘನ ಬ್ರಹ್ಮ 2 ಸೋಹ್ಯ ದೋರಿ ಕೊಟ್ಟೆನಗಿಂದು ಮಹಿಪತಿಸ್ವಾಮಿ ತಾನೆ ಬಂದು ಈಹ್ಯಪರ ಪೂರ್ಣ ಕೃಪಾಸಿಂಧು ಸಾಹ್ಯ ಮಾಡುತೀಹ್ಯ ದೀನ ಬಂಧು 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಕಾಯೋ ಕರುಣ ಕೃಪೆಯಿಂದ ಹರಿ ಮುಕುಂದ ಧ್ರುವ ಕರುಣಾನಂದದ ಸಾಗರ ಕರಿವರ ಶರಣಾಗತಜನರ ಮಂದಾರ ಪರಮ ಉದ್ಧಾರ ಸುರ ಸಂಸಾರಾಯದಾಗರ ಪರಾತ್ಪರ ತರಣೋಪಾಯದಾಧಾರ 1 ಅನಾಥ ಜನರಾಶ್ರಯ ನೀನೆ ನಿಶ್ಚಯ ಅನುಭವಾನಂದಾ ಹೃದಯ ಘನಮಯ ದಿನಕರಕೋಟಿ ಪ್ರಭೆಯೆ ಜನವನಲಿಹ್ಯ ಮುನಿಜನರ ಹೃದಯ ಅನುದಿನದಲಕ್ಷಯ 2 ವಿಹಿತವಿಚಾರದ ವಿವರ ಈಹ್ಯಶ್ರೀಧರ ಸ್ವಹಿತ ಸುಖದ ಸುಸಾರ ಬಾಹ್ಯಾಂತರ ಮಹಿಮೆ ನಿನ್ನದು ಅಪಾರ ಮಹೇಶ್ವರ ಇಹ್ಯ ಪರದ ದಾತಾರ ಮಹಿಪತಿ ಸಹಕಾರ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಕೇಳಿರೋ ಈ ಮಾತ ಈ ಮಾತ ತಿಳಿದು ಕೋಳ್ಳಿರೊ ಸ್ವಹಿತ ಹೇಳುತಿಹ್ಯದು ವೇದಾಂತ ವೇದಾಂತ ಇಳಿಯೋಳಿದುವೆ ಸಿದ್ಧಾಂತ ಸಿದ್ಧಾಂತ 1 ಹಿಡಿಯಬ್ಯಾಡಿರೊ ಕಾಮ ಕ್ರೋಧ ಕ್ರೋಧ ಮಾಡಬ್ಯಾಡಿರೋ ಭೇದ ಭೇದಾ ಭೇದ ಈ ಡ್ಯಾಡಿರೊ ವಿವೇದ ವಿವೇದ ಬೋಧ ಸುಬೋಧ 2 ದೋರುತದೆ ತಾ ಸುಪಥ ತಾ ಸುಪಥ ಸುರ ಜನರ ಸನ್ಮತ ಸನ್ಮತ ದೋರುತಿಹ್ಯ ಗುರುನಾಥ ಶ್ರೀ ಗುರುನಾಥ ಪರಮಾನಂದ ಭರಿತ ಭರಿತ 3 ನೋಡಿರೊ ಈ ಖೂನ ಈ ಖೂನ ಮಾಡಿ ಸದ್ಗತಿ ಸಾಧನ ಸಾಧನ ಗುಹ್ಯ ನಿಜಧನ ನಿಜಧನ ದೃಢ ಭಕ್ತರ ಜೀವನ ಜೀವನ 4 ಈಹ್ಯ ಪರಿಪೂರ್ಣ ಪರಿಪೂರ್ಣ ಮಹಾಗುರು ಶ್ರೀ ಚರಣ ಶ್ರೀ ಚರಣ ಸಾಹ್ಯದೋರುವ ಸುಗುಣ ಸುಗುಣಮಹಿಪತಿ ಜೀವ ಪ್ರಾಣ ಸುಪ್ರಾಣ 5
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ವೇದದ ಮೂಲ ಆದಿ ಅನುಕೂಲ ಸಾಧು ಜನರ ಸದ್ಛನ ಲೋಲ ಧ್ರುವ ಕೀಲ ಬುಧರಕನುಕೂಲ ಇದೇ ನಿಜ ನೋಡಿರೊ ಸಾಧಿಸಿ ಘನಸುಖಗೂಡಿರೊ 1 ಜ್ಞಾನದಾಸರ ಧ್ಯಾನದಂತರ ಖೂನದಾ ವಿವರ ಅನುಭವಾಧಾರ ಕಣ್ಣಾರ ಎನ್ನ ಮನೋಹರ 2 ಗುಹ್ಯ ಗೌಪ್ಯಸ್ಥ ಮಹಾಪ್ರಶಸ್ತ ಈಹ್ಯ ಸೌಭ್ಯಸ್ಥ ಮಹಿಮರ ತಸ್ತ ಸುವಸ್ತ ಶ್ರೀಗುರು ಸಮರ್ಥ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು