ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಹಸಿದು ನಾ ಬಳಲಲೇಕೋ ಈಸಮಯದಲ್ಲಿ ಬಿಸಿಯೂಟ ಮಾಡುವೆನು ಪ ಹಸನಾದ ಶೇಷಶಯನ ನಾಮದಡುಗೆಯು ವಸುಮತೀಧವ ನಾಮರಸಾಯನವಿರೆ ಅ.ಪ ಹರಿ ಹರಿ ಪರಮಾನ್ನವು ದುರಿತಾರಿ ಶೌರಿ ಕರಿಗಡುಬು ಗರುಗೊಬ್ಬಟ್ಟು ನರಸಿಂಹ ವಾಮನ ಅಂಬೊಡೆ ಹೂರಿಗೆಗಳು ಕರಿವರದ ರವೆಯುಂಡೆ ಸಜ್ಜಿಗೆಯಿರಲು 1 ದುಷ್ಟಮರ್ದನನೆನ್ನುವ ಇಷ್ಟವಾದ ಹುಳಿಸಾರು ಮೊಸರುಗಳು ವಾಸುದೇವ ಸಣ್ಣಕ್ಕಿಯನ್ನವು ಮಾಧವ ಬೆಣ್ಣೆಕಾಯ್ಸಿದ ತುಪ್ಪವಿದೆ 2 ನಾರಾಯಣನೆನ್ನುವ ಸಾರವಾದ ಹುಳಿಯನ್ನ ಮೊಸರನ್ನವು ಸಾರಸಾಕ್ಷ ಶ್ರೀಶ ಕ್ಷೀರ ಸಕ್ಕರೆಯಿದ್ದು ಮಾರಜನಕನೆಂಬ ಹಪ್ಳಳುಪ್ಪಿನಕಾಯಿರೆ3 ಪರಿಪರಿಯನ್ನಗಳು ಸರಿಯಾಗಿ ಭಕ್ಷ್ಯ ಕರಿದೆಡೆ ಮಾಡಿರಲು ಅರಿತು ಸವಿಯನೋಡಿ ಮರೆಯದೆ ಭುಂಜಿಸಿ ನಿರುತ ನಿಜಾನಂದ ಪಡೆಯದೆ ಬರಿದೆ 4 ಗೋಪಾಲನೆಂದೆಂಬೊ ಸೀಪಿನ ಎಳನೀರು ಸೀ ಪಾನಕವಿಹುವು ತಾಪತ್ರಯಹರ ಹೆಜ್ಜಾಜಿಕೇಶವ ಆಪದುದ್ಧಾರಕನೆಂಬಮೃತವುಣದೆ 5
--------------
ಶಾಮಶರ್ಮರು