ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಚಿತ್ತಾಭಿಮಾನಿ ಬಾರೆ ತ್ವಚ್ಚರಣಕಮಲ ತೋರೆ ಪ ಭೃತ್ಯಾರ್ಥಕಾರಿಣೆ ನೀರೆ ಭುವನೈಕ ಸುಗುಣಧಾರೆ ಅ.ಪ ನಿರ್ಜರವರದೆ ಸಂಪನ್ನೆ ನಿಗಮಾಭಿಮಾನಿ ಪ್ರಸನ್ನೆ 1 ಬುದ್ಧ್ಯಾದಿ ತತ್ವದೊಡೆಯರು ಭೃತ್ಯರು ನಿನಗೆನಿಸುವರು ಬದ್ಧರು ನಿಮ್ಮನ್ನು ಬಿಟ್ಟು ದುರ್ಭವದಿ ಬೀಳ್ವರು ಕೆಟ್ಟು 2 ಜಾನಕಿ ನೀನೆ ಮಹಾಮಾಯೆ ಮನ್ಮಾನಸದೊಳಿರು ತಾಯೆ 3 ಐಶ್ವರ್ಯಮದದಿ ಕೆÀಲರು ಈಶ್ವರಿ ನಿನ್ನನು ಮರೆಯುವರು ಪಶ್ವಾದಿಗಳ ಸಮವವರೂ ನಿಸ್ವರಾಗಿಗತಿ ದೂರರಹರು 4 ಸ್ವಾಮಿ ಜೀವೇಶ ತವ ಭರ್ತ ಕಾಮಿತ ಪ್ರದಾಯಕ ಪಾರ್ಥ- ಸೂತನ ನಾಮ ಸ್ಮರಣೆ ಸ್ವಾರ್ಥ ಗುರುರಾಮ ವಿಠಲ ಕರ್ತ 5
--------------
ಗುರುರಾಮವಿಠಲ