ಒಟ್ಟು 4 ಕಡೆಗಳಲ್ಲಿ , 4 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ನಂಬಿದೆನೊ ನೀರೇರು ಹಾಕ್ಷ ನಿನ್ನ ನಂಬಿದೆನೊ ನಿನ್ನ ನಂಬಿದೆ ಯನ್ನ ಸಲಹುವದಿನ್ನು ಮನ್ನಿಸೊ ಹೆನ್ನೆ ವಿಠ್ಠಲ ಪ ಸಿಂಧು ಗಂಭೀರ ಶ್ರೀ ವೇಣುನಾದ ಮಂದರಾದ್ರಿಧರ ನಂದನಂದನ ಕುಂದರದನ ಗೋವಿಂದ ಪರಮಾ- ನಂದ ವಿಗ್ರಹ 1 ಜಾನಕೀರಮಣ ಸರ್ವೇಶ ಈಶವಿನುತ ಚರಣ ದೀನಬಾಂಧವ ದೇವರದೇವ ಪುರಾಣಪುರುಷ ಮಹಾನುಭಾವ ಹರಿ 2 ಬಾಲಗೋಪಾಲ ಭಾಸುರ ಗುಣಶೀಲ ಶ್ರೀಲೋಲ ನೀಲವರ್ಣ ಹೆನ್ನೆಪುರೀಶ ಕುಚೇಲವರದ ಮಾಧವ 3
--------------
ಹೆನ್ನೆರಂಗದಾಸರು
ಬಾರೆಂದು ಹಸೆಗೆ ಕರೆವೆÀನು ಕ್ಷೀರಾಬ್ಧಿಶಯನನೆ ಸಾರಸನಯನನೇ ಪ. ಕ್ಷೀರಾಬ್ಧಿಜಾವರ ಮೇರುಗಂಭೀರನೆ ನೀರಜಭವಪಿತ ಮಾರಹರಾರ್ಚಿತ ಚಾರುನೀರದಗಾತ್ರ ಪರಮ ಪವಿತ್ರ ಅ.ಪ ಧರಣೀಸುರರ ಮೊರೆಗಳನಾಲಿಸಿ ಧರೆಯೊಳಗವತರಿಸಿ ನರರೂಪಧರಿಸಿ ಧರಣಿಪ ದಶರಥತರಳನೆಂದೆನಿಸಿ ಧರೆಯ ಭಾರವನಿಳಿಸಿ ಕರುಣಿಸು ಮನವೆರಸಿ 1 ಅಸುರೆ ತಾಟಕಿಯ ಅಸುವನಳಿದು ದುಷ್ಟ ನಿಶಿಚರರನು ಸದೆದು ಅನುಜನೊಡಗೊಂಡು ಕುಶಿಕನಂದನನ ಕ್ರತುವನು ತಾ ಕಾಯ್ದು ಅಸಮ ಶೂರನೆನಿಸಿ ಅಮರರ ಮನತಣಿಸಿ 2 ಶಿಲೆಯ ಶಾಪವಕಳೆದು ಲಲನೆಯ ಪೂಜೆಗೊಲಿದು ಬಲುಹಿನಿಂದಲೆ ಬಂದು ಹರಧನು ಮುರಿದು ಲಲನೆ ಜಾನಕಿಯ ನಲವಿನಿಂ ಕೈಪಿಡಿದು ಬಲುಗರ್ವಿತ ಭಾರ್ಗವ ಮದಮುರಿದೆ ಸಲಹೆನ್ನ 3 ಈಶವಿನುತ ಶ್ರೀ ಶೇಷಾಚಲ ನಿಲಯನೆ ದಾಸರಮನದೊಳು ವಾಸವಾಗಿಹನೇ ವಾಸವಾದ್ಯಮರ ಪೋಷಕನೆನಿಸಿಹನೆ ಭಾಸುರವದನನೆ ಶ್ರೀಸತೀಸದನನೆ ನೀಂ ನಲಿದು 4
--------------
ನಂಜನಗೂಡು ತಿರುಮಲಾಂಬಾ
ವಂದ್ಯನೆ ಲಾಲಿಸೋ ವರದನೇ ಪಾಲಿಸೋ ಪ ಪಯೋನಿಧಿ ಪಾರದನೆ ವಾರಿಧಿಮದಹರ ವಾರಿಧಿನಿಭಶಾರೀರವಿಹಾರ ವಿಶಾರದನೆ 1 ಶ್ರೀಶನಿಖಿಲ ಲೊಕೇಶಜನಕಭವ ಪಾಶವಿಮೋಚನ ಪಟುಚರಿತ ಈಶವಿನುತ ಸರ್ವೇಶ ಪರಾತ್ಪರ ಕೇಶವ ಸದ್ಗುಣ ಗಣಭರಿತ 2 ಶರಣರ ಸಲಹುವ ಶ್ರೀಧರನೆ ಚಕ್ರಧರ ವರನೆ 3
--------------
ಸರಗೂರು ವೆಂಕಟವರದಾರ್ಯರು
ಸರಸಿಜನಾಭನೆ ಸೆರಗೊಡ್ಡಿ ಬೇಡುವೆ,ದುರಿತಗಳೆಲ್ಲ ತರಿದು ವರವಿತ್ತು ಕರುಣಿಸೊ ಪ ಕರುಣಾಸಾಗರ ನಿನ್ನ ಚರಣವ ನಂಬಿದೆಪರಮ ಪಾವನ ನಿನ್ನ ಶರಣನ ಪೊರೆಯೆಂದು 1 ಈಶವಿನುತ ನಿನ್ನ ವಾಸಿಯ ಪೊಗಳುವೆದಾಸ ಎಂದೆನ್ನನು ಗಾಸಿಮಾಡದೆ ಕಾಯೊ 2 ಬಾರಿಬಾರಿಗೆ ಬರುವ ದಾರಿದ್ರ್ಯ ದುಃಖದದೂರಗೈಸುವಂಥ ದಾರಿ ತೋರಿಸೆಂದು 3 ಕಂತುಪಿತನೆ ಎನ್ನ ಅಂತರಂಗದಿ ನಿನ್ನಸಂತತÀ ನೆನೆವಂತೆ ಚಿಂತನೆ ನಿಲಿಸೆಂದು 4 ಮಂಗಳಾತ್ಮಕನೆ ಶ್ರೀರಂಗವಿಠ್ಠಲ ಭು-ಜಂಗಶಯನ ನಿನ್ನ ಹಿಂಗದೆ ಭಜಿಪೆನು5
--------------
ಶ್ರೀಪಾದರಾಜರು