ವಾಸುದೇವಯನ್ನ ಸಲಹೋ ವಾರಿಜಾಸನ
ಈಶವಾಸವಾರ್ಚಿತ ಚರಣ ವನಜೋದರ
ಭಾಸುರಾಂಗ ಕೋಟಿ ಪ್ರಭಾಕರ ಪ್ರಕಾಶ
ಮಂದಹಾಸ ಕಮಲಾಚಲನಿವಾಸ ಶ್ರೀ ಜಗದೀಶ ಪ
ತಾಪಸೋತ್ತಮ ಸತಿಗೆ ಕೋಪದಿಂದ ಪಾಷಾಣರೂಪವಾಗಿ
ಬಿಟ್ಡೆನುತ ಶಾಪಕೊಡಲು
ಕೋಪನಾಮಣಿ ಬಲು ಪ್ರಲಾಪಿಸುತ ಮನದಿ
ನಿಷ್ಪಾಪರರ ನುಡಿಯಂತೆ ಧರಿಯಲಿಬಿದ್ದಿರಲು
ಪಾದ ಸ್ಪರ್ಶಿಸಲಾಕ್ಷಣ
ಸೀತಾಪತಿಯ ಸೇವೆಯಿಂದ ಸುಂದರಿಯಾದಳು ತ್ವರದಿ 1
ಪಾಪಗಳು ಮಾಡಿದವನಂತ್ಯ ಕಾಲದಲಿ ಸುತನ
ನಾರಗೆಂದು ಕರಿಯೇ ಗತಿ ತೋರಿದಿ ಹಿತದ
ಲಾಮರಾಮರೆಂಬ ನಿನ್ನ ಹರುಷದಲಿ ಪೊರೆದೆ ಕ್ಷಿತಿ
ನಾಥ ಹರಿ ಮಹೋನ್ನತ ಚರಿತನೆ ಪತಿತ
ಪಾವನ ಬಿರುದು ಪರಮಾತ್ಮ ನಿನಗಿರಲು ಸ್ತುತಿಸುವೆನು
ಗೋವಿಂದ ಶುಭಕರ ಶ್ರೀ ಮುಕುಂದ 2
ಶರಧಿ ಗಂಭೀರ
ಹಾಟಕಾಂಬರ ಶೋಭಿತ
ಪುರುಷೋತ್ತಮಾನಂತ ಮುರವೈರಿ
ಮುರಲೀರವ ವಿನೋದ ಗರುಡಗಮನ
`ವರ ಹೆನ್ನೆಪುರನಿಲಯ' ಪರಮಪಾವನ ನೃಹರೆ
ಉರಗೇಂದ್ರಶಯನ ಮಂದರಧರ ಕೃಪಾಂಬುಧೆ3