ಎನಗಳವೆ ನಿನ್ನ ಮಹಿಮೆಯನು ಪೊಗಳಲು
ಹೀನಮತಿ ನಾ ಪನ್ನಂಗಶಯನ ಪ
ನೀಲಶಾಮನೆ ನಿಮ್ಮ ಲೀಲೆ ಪೊಗಳಲ್ಕೆ ಬ್ರಹ್ಮ
ಸಾಲವು ನಾಲ್ಕುವೇದವೆಂದು
ನಾಲಿಗೆಯೋಳ್ವಾಣಿನಿಟ್ಟಿರುವನಂತೆ 1
ಸಾಸಿರ ಜಿಹ್ವೆಗಳಿಂದ್ಹೊಗಳಲ್
ಈಶಭಜನೆ ತೀರದೆಂದು
ಶೇಷ ಇನ್ನು ಸಾಸಿರಜಿಹ್ವೆ ಆಶಿಸಿ ಬೇಡುವನಂತೆ2
ಪ್ರಾರ್ಥಿಸಲು ನಿಮ್ಮ ಚರಿತ ಶಕ್ತಿ ಸಾಲದಂಥವರಿಗೆ
ಭಕ್ತಿಯಿಂ ಪೊಗಳುವೆನಿಷ್ಟೆ
ಮುಕ್ತಿದಾಯಕ ಶ್ರೀರಾಮಯೆನುತ 3