ಮಾಯ ಮೋಹಿಗಳಿಗೆಲ್ಲ ಭವಬಂಧಳಿಯುವುದೇ
ಕಾಯ ಶುದ್ಧಲ್ಲದವಗೆ ಕರ್ಮಬಂಧ್ಹರಿಯುವುದೇ ಪ
ಮುಣುಗು ಕಲಿತಿರುವನು ದಣಿವಿನಿಂ ಮುಕ್ತಹನೆ
ಕುಣಿತಕಲಿತಿರುವವ ಮನದಿ ನಾಚುವನೆ
ಒನಪು ಕಲಿತಿರುವಗೆ ಮನಸಿಜ ದೂರನೆ
ಮನೆಮನೆ ತಿರುಗುವನು ಘನತೆಗೆ ಬಹನೆ 1
ಪಾದ ತಾಡಣೆಯು ತಪ್ಪುವುದೆ
ಕೇಡುಗಾರಿಗೆ ಸುಖದ ಜಾಡು ತಿಳಿಯುವುದೆ
ಕಾಡಡವಿಲಿರುವವಗೆ ರೂಢಿಯ ಸುದ್ದಿಹುದೆ
ನಾಡ ಮಾತಾಡುವಗೆ ಕೇಡು ತಪ್ಪುವುದೆ 2
ನಿಂದಕಗೆ ಮುಂದಿನ್ನು ಹಂದಿಜನ್ಮ ತಪ್ಪುವುದೆ
ಛಂದಸ್ಸರಿಯದವಗೆ ಕವಿತದಂದ ತಿಳಿಯುವುದೆ
ಮಂದಿಗೋಷ್ಠಿಗ್ಹೋಗುವಗೆ ಕುಂದೊದಗದಿರುತಿಹ್ಯದೆ
ತಂದೆತಾಯನ್ಹಳಿಯುವಗೆ ಬಂಧ ತಪ್ಪುವುದೆ 3
ಮೋಸಕಾರಿಗೆಮಶಾಪವು ತಪ್ಪುವುದೆ
ಆಶಕಾರಿಗೆ ಮಹನಾಶ ಬಿಡುತಿಹ್ಯದೆ
ದೇಶದೇಶ ತಿರುಗುವಗೆ ಘಾಸಿಯು ತಪ್ಪುವುದೆ
ದಾಸಜನ ದೂಷಕಗೆ ಈಶನೊಲಿಮಿಹ್ಯದೆ 4
ಸುಗುಡಿಗೆ ಪತಿಸರಸ ಸೊಗಸಾಗಿ ಕಾಣುವುದೆ
ಜಗಳಗಂಟಿಗೆ ವ್ರತದ ಬಗೆಯುಶೋಭಿಪುದೆ
ಸುಗುಣೆಯರೊಡನಾಟ ಷಂಡನಿಗೆ ಸಲ್ಲುವುದೆ
ಸುಗುಣ ಸಂಗಿಲ್ಲದೆ ನರಕ ಭುಗಿಲು ತಪ್ಪುವುದೆ 5
ಕಪಟತ್ವ ನೀಗದೆ ತಪವೃದ್ದಿಯಾಗುವುದೆ
ಕೃಪಣತ್ವ ಬಿಡದವಗೆ ತಾಪತ್ರಳಿಯುವುದೆ
ಜಪವಿಲ್ಲದೆ ವಿನಾ ಸುಫಲದೊರಕುವುದೆ
ಗುಪಿತವನು ತಿಳಿಯದವಗಪರೋಕ್ಷವಿಹ್ಯದೆ 6
ಮಾನವನ ಗುಣರಿಯದೆ ಜ್ಞಾನ ಸ್ಥಿರವಾಹುದೆ
ಜ್ಞಾನವಿಲ್ಲದೆ ಬೇರೆ ಧ್ಯಾನ ಸಿದ್ದಿಪುದೆ
ದೀನನಾಥ ಮಮ ಪ್ರಾಣೇಶ ಶ್ರೀರಾಮನಡಿ
ಖೂನವರಿಯದೆ ಮುಕ್ತಿ ಜಾಣೆ ಸುಖಬಹುದೆ 7