ಸ್ವಾಮಿಯು ನೀನಲ್ಲವೊ ಪಾಮರನೆ ಪ
ಸ್ವಾಮಿಯು ನೀನಾಗೆ ಭೃತ್ಯಾನು ನಿನಗ್ಯಾರು
ಈ ಮಾತಿಗೇನೆಂಬೆಯೊ ಸೋಮಾರಿ ಮನುಜನೆ ಅ.ಪ.
ನಿತ್ಯತೃಪ್ತನು ದೇವದೇವೋತ್ತಮನವನು
ಸತ್ಯ ಸಂಕಲ್ಪನು ಸಕಲ ಜಗವರಿಯೆ
ಹೊತ್ತು ಹೊತ್ತಿಗೆ ಗ್ರಾಸಕಿಲ್ಲದವ ಗೃಹಪಾಲ
ಸತ್ಯದನುಭವವಿಲ್ಲವೊ ನಿನಗೆ 1
ಸ್ವಾಮಿ ಭೃತ್ಯರಿಗೆ ಬೇಧವಿಲ್ಲೆಂಬುವ ನಿನ್ನ
ಭೃತ್ಯ ತಾ ಬರಲು
ಕಾಮಾರಿಯಂತೆ ಕೋಪವ ತಾಳುವೆ ನಮ್ಮ
ಸ್ವಾಮಿಗೆ ತಾಮಸ ಗುಣವೆಲ್ಲಿಹುದೊ 2
ಕಾಸು ಕೊಟ್ಟರೆ ನೀನು ಹೇಸಿಕ್ಯಾದರು ಬಳಿವೆ
ದಾಸ ನೀನಲ್ಲದೆ ಈಶನೆಂತಾದೆಯೊ
ವಾಸುದೇವ ನೀನೆಂದು ಘಾಸಿಯಾಗಲು ಬೇಡ ರಂ-
ಗೇಶವಿಠಲನ ದಾಸರ ದಾಸ ನೀನಾಗೊ 3