ಪಂಪಾತೀರದ ಲಿಂಗಾ ಭವಭಸಿತಾಂಗಾ
ಸಂಪುಲ್ಲಾಕ್ಷನ ತೋರೋ ಭಕ್ತ ಕೃಪಾಂಗ ಪ
ನೀನೆ ಗತಿಯೆಂದು ನಿದಾನದಿಂದ
ಧ್ಯಾನವ ಮಾಡಲು ದೈನ್ಯದಲಿಂದ
ಮಾನಾಭಿಮಾನದೊಡಿಯನೆ ಆನಂದ 1
ಗಜಚರ್ಮಾಂಬರ ಗಂಗಾಧರ ಪುರವೈರಿ
ಭಜಿಸಿದೆನೊ ನಿನ್ನ ಭಕ್ತಿಯಲಿ ಸಾಕಿರೆ
ಕುಜನರೊಳಿಡದೆ ಉತ್ತಮವಾದ ದಾರಿ
ನಿಜವಾಗಿ ತೋರಯ್ಯ ದೀನರುಪಕಾರಿ2
ಹೇಮಗಿರಿಯ ವಾಸಾ ಈಶನಿರೀಶಾ
ಸೋಮಶೇಖರನೆ ಪಾರ್ವತಿಯ ವಿಲಾಸಾ
ರಾಮ ಶ್ರೀ ವಿಜಯವಿಠ್ಠಲನೆ ನಿರ್ದೋಷಾ
ಸ್ವಾಮಿಯ ನೆನೆವಂತೆ ಕೊಡು ಎನಗೆ ಮನಸಾ3