ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ನೆಚ್ಚದಿರು ಸಂಸಾರ ಕಾಡಗಿಚ್ಚಿನಂದದಿ ದಹಿಸುವದತಿ ಘೋರ ಪ ಕ್ಷುದ್ರ ಜನರ ಸಂಗತ್ಯಜಿಸೊ | ಸದಾ ಮಧ್ವಸುಶಾಸ್ತ್ರ ಕೇಳಿ ನೀ ಗ್ರಹಿಸೊ ಸದ್ಗುರುಗಳ ಪಾದಾಶ್ರೈಸೊ | ನೀನೆ ಉದ್ಧಾರಕನೆಂದು ಹರಿಯನ್ನೆ ಬಯಸೊ 1 ನಾನೆಂಬೊ ಅಹಂಕಾರಸಲ್ಲ | ನಿನ್ನ ಮಾನಿನಿ ಸುತರು ಸಂಗಡ ಬಾಹೋರಿಲ್ಲ ಈ ನುಡಿ ದಿಟ ಸಟಿಯಲ್ಲ | ಹೀಗೆ | ನೀನಾಚರಿಸಲು ಒಲಿವ ಶ್ರೀನಲ್ಲ2 ಆಶಾಕ್ರೋಧಂಗಳ ಕೀಳೊ | ಹರಿ | ದಾಸರ ದಾಸರ ದಾಸನೆಂದ್ಹೇಳೊ || ದೋಷಕ್ಕೆ ಅಂಜಿ ನೀ ಬಾಳೊ | ಎಲ್ಲ | ಈಶನಾಧೀಶವೆಂಬುದೆ ಮುಕ್ತಿ | ಕೇಳೋ 3 ಹರಿವಾಸರುಪವಾಸ ಮಾಡೊ | ಇರುಳು ಜಾಗರ ಮರಿಬ್ಯಾಡೊ ಮರುದಿನ ನಿದ್ರೆಯ ದೂಡೊ | ಇಂತು ಪರಿಯಲ್ಲಿ ನಡೆದರೆ ನಿನಗಿಲ್ಲ | ಕೇಡು 4 ಇಂದ್ರಿಯಗಳ ನಿಗ್ರಹಿಸೊ | ಮನಿಗೆ | ಬಂದ ಭೂಸುರರಿಗೆ ವಂದಿಸಿ | ಉಣಿಸೊ ಕುಂದು ನಿಂದೆಗಳೆಲ್ಲ ಸಹಿಸೊ | ಶಾಮ ಸುಂದರ ವಿಠಲನ್ನ ನೀ ಪೊಂದಿ ಸುಖಿಸೊ 5
--------------
ಶಾಮಸುಂದರ ವಿಠಲ