ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಉತ್ತಮೋತ್ತಮ ದೈವ ನಿತ್ಯನೀನಾಗಿರಲಿಕ್ಕೆ ಮತ್ತೆ ಅನ್ಯ ದೈವನಾರಿಸಲ್ಯಾತಕೆ ಧ್ರುವ ಸತ್ಯಸನಾತನನೆಂದು ಶ್ರುತಿಸಾರುತಿರಲಿಕ್ಕೆ ಎತ್ತ ನೋಡಿದರತ್ತ ಪ್ರತ್ಯಕ್ಷ ನೀ ದೋರಲಿಕ್ಕೆ ಮತ್ತೆ ಆವ್ಹಾನ ವಿಸರ್ಜನವ್ಯಾತಕೆ 1 ವಾಸವಾಗಿ ಎನ್ನಾತ್ಮದೊಳು ನೀನೆ ಇರಲಿಕ್ಕೆ ವಾಸುವೇವನೆ ನೀನೆ ಎನ್ನ ಈಶನಾಗಿರಲಿಕ್ಕೆ ಸೋಶಿಲೆ ಅನೇಕ ವೇಷ ದೋರುವದ್ಯಾತಕೆ 2 ಭಾನುಕೋಟಿತೇಜ ಎನ್ನೊಡಿಯನಾಗಿರಲಿಕ್ಕೆ ಬಿನುಗುದೈವದ್ಹಂಗು ತಾಇನ್ನೊಂದು ಯಾತಕೆ ಮನದ ಮಂಗಳಾಗಿ ನೀ ಮಹಿಪತಿಗೆ ಭಾಸುತಿರಲಿಕ್ಕೆ ಅನುಭವಕ್ಕನುಮಾನ ಮಾಡುವುದ್ಯಾತಕೆ3
--------------
ಕಾಖಂಡಕಿ ಶ್ರೀ ಮಹಿಪತಿರಾಯರು