ವಾರಿಜಗಣ ನಿಲಯೇ ಕಮನೀಯೆ
ತಾಯೇ ಕಾಯೇ ನರಹರಿ ಜಾಯೇ ಪ
ಸಾರಸಭವಮುಖ ಸುರ ಮಹನೀಯೆ
ಚಾರುವದನೆ ಜಾಂಬೂನದ ಛಾಯೆ ಅ.ಪ
ನಿನ್ನ ಕಟಾಕ್ಷ ಮಹಾಸುರಧೇನು
ನಿನ್ನ ಮನವು ಚಿಂತಾಮಣಿಯು
ನಿನ್ನಯ ಕರಗಳು ಸುರತರುವೆನಗೆ
ಇಂದಿರೆ 1
ಹೃನ್ಮಂದಿರದಲಿ ಜ್ಞಾನವನು
ಮನ್ಮಂದಿರದಲಿ ಭಾಗ್ಯವನು
ಅಮ್ಮ ಬೆಳಸೆ ಕಮಲೆ ಸುವಿಮಲೆ
ಇಂದಿರೆ 2
ಈಶನಂಘ್ರಿಯಲಿ ಭಕ್ತಿಯನು ಹರಿ
ದಾಸದಾಸ್ಯದಲಿ ಶಕ್ತಿಯನು
ಮೋಸಕೆ ಸಿಗದ ವಿರಕ್ತಿಯನು
ಕರುಣದಲಿ ನೀಡೆ ಪ್ರಸನ್ನೆ3