ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಭವ ಪಾರಗಾಣಿಸಲು ಭಾರತಿ ರಮಣ ಸಮೀರನಲ್ಲದೆ ಬೇರೆ ಪ ವೀರ ಹನುಮ ರಘು ವೀರ ಭಕುತ ಬ್ರಹ್ಮ ಚಾರಿಯಾಗಿ ಜೀವ ಸಾರವೆನಿಸಿದೆ ಅ.ಪ ಶೇಷ ಗರುಡ ಶಿವ ಮುಖಸುರರೊಬ್ಬರೂ ದೋಷದೂರಲ್ಲವೊ ಪವಮಾನ ಈಶದಜ್ಞಾನ ಸಂಶಯ ಭ್ರಮೆ ಪೊಂದದೆ ಶ್ರೀಶನ ಪರಮ ಸಂತೋಷಕೆ ಪಾತ್ರನು 1 ವೀರರಧಿಕರೆಲ್ಲರು ನಿನ್ನೆದುರಲಿ ಸಾರಮೇಯದಂತಾದರೊ ಭೀಮ ನಾರಾಯಣನಿಗೊಬ್ಬನಿಗಲ್ಲದೆ ಶಿರಬಾಗದೆ ಮರೆದೆಯೊ ಧೀರ ಕಂಠೀರವ 2 ಶಾಂತನು ನೀ ಬಲುದಾಂತನು ನೀನೆ ಸ್ವಾಂತದಿ ಹರಿಯು ಪ್ರಸನ್ನನು ಸತತವು ಅಂತಿಮಭಾಷ್ಯಾದಿಗಳ ರಚಿಸಿ ವೇ ದಾಂತ ಸಾಮ್ರಾಜ್ಯದಿ ಸಾರ್ವಭೌಮ ಯತಿ3
--------------
ವಿದ್ಯಾಪ್ರಸನ್ನತೀರ್ಥರು