ಭಾವಭಕ್ತಿಗೊಲಿವ ತಾಂ ಶ್ರೀಹರಿ
ಕಾವ ಕರುಣದಲಿ ಪರೋಪರಿ ಧ್ರುವ
ಕಂದ ಪ್ರಹ್ಲಾದನ ಸದ್ಭಾವಕಾಗಿ
ಸಂಧಿಸೊದಗಿ ಬಂದ ನರಸಿಂಹನಾಗಿ
ತಂದೆ ತಾಯಿ ಬಂಧು ಸಮಸ್ತವಾಗಿ
ಬಂದು ರಕ್ಷಿಸಿದ ಪ್ರತ್ಯಕ್ಷವಾಗಿ 1
ಭಾವದಿಂದ ದ್ರೌಪದಿಗಾಗ್ಯಧ್ಯಕ್ಷ
ಠಾವಠಾವಿಲಿ ಕಾಯಿದೆ ಪ್ರತ್ಯಕ್ಷ
ಭುವನದೊಳಾಗಿ ಪಾಂಡವಪಕ್ಷ
ಜೀವ ಪ್ರಾಣಾಗಿ ಮಾಡಿದ ಸಂರಕ್ಷ 2
ಭಾವದಿಂದಾಗುವ ಭಕ್ತರಾಧೀನ
ದೇವೋತ್ತಮದ ಬಿಟ್ಟು ಹಿರಿಯತನ
ದಾವದೊಂದೇಕಾಗಿ ತಾಂ ಸಾವಧಾನ
ಈವ್ಹಾಭಕ್ತರ ಮನಿಲ್ಯನುದಿನ 3
ಭಾವದಿಂದುದಿಸುವ ಸ್ವಯಂಭಾನು
ಭಾವಿಕರಿಗಾಗುವ ಶ್ರಯಧೇನು
ಭಾವದಿಂದಾಗುವ ಸಫಲ ತಾನು
ಭಾವದಿಂದ ಭಾವ ಪೂರಿಸಿದನು 4
ಭಾವವೆಂಬಂಜನ ಕಣ್ಣಿಲೂಡಿ
ಭಾವದಲುಂಬುದನು ಒಡಮೂಡಿ
ಭಾವದಿಂದ ಮಹಿಪತಿ ಕೈಯಗೂಡಿ
ಜೀವ ಪಾವನ್ನಗೈಸÀುತಿಹ್ಯ ನೋಡಿ 5