ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ನಿತ್ಯನಿರ್ಮಲನಿಗೆ ಜಯಮಂಗಳಂ ಶುಭ ಮಂಗಳಂ ಪ ಸತ್ಯಪರಾಕ್ರಮ ಸತ್ಯಚರಿತ್ರಗೆ ಸತ್ಯಕಾಮ ಪುರುಷೋತ್ತಮ ಹರಿಗೆ ಅ.ಪ ಮೂರುರೂಪದಲಿ ವಾರಿಯೊಳಿದ್ದಗೆ ಘೋರವದನ ಬ್ರಹ್ಮಚಾರಿಯಾದವಗೆ ವೀರರ ಕೊಂದಗೆ ಹನುಮವಿನುತಗೆ ಮಾರಜನಕ ಸುಕುಮಾರ ಹಯೇಶಗೆ 1 ವೇದಾಚಲ ಭೂಧರ ನರಹರಿಗೆ ಮೇದಿನಿಯಳೆದಗೆ ಮುನಿಸುತಗೆ ಕೋದಂಡೋತ್ಸುಕ ನಾದಪ್ರಿಯನಿಗೆ ಭೇದವ ಕಲ್ಪಿಸಿದಶ್ವವಾಹನಗೆ 2 ಮಂಗಳರೂಪಗೆ ಈರೈದವತಾರಗೆ ಅಂಗಜತಾತ ಶುಭಾಂಗನಿಗೆ ಮಾಂಗಿರಿಶೃಂಗನಿವಾಸ ರಥಾಂಗಗೆ ಗಂಗೆಯಪೆತ್ತ ಪನ್ನಂಗಶಯನಗೆ 3
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್