ಒಟ್ಟು 4 ಕಡೆಗಳಲ್ಲಿ , 3 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಏನೆಂದೆ ಏನೆಂದೆ ಪ ನಾನೇನೆಂದೆನೆ ಗಾನಲೋಲಗವ ಮಾನದ ಮಾತಿಂಥ ಜೀನನ ಕಾಣೆನೆಂದೆ ಅ.ಪ ಕಾಲು ಇಲ್ಲದ ಹೆಳವನೆಂದೆ ತಲೆಯ ಕಾಣದ ಕುರೂಪಿಯೆಂದೆ ಚೆಲುವಿಕಿಲ್ಲದ ಕಾಡು ಹೀನಮೃಗವೆಂದೆ ಬಲಿಯ ಬಾಗಿಲ ಕಾಯ್ವ ಕೂಲಿಕಾರನೆಂದೆ1 ನಾಲಗೆ ಚಾಚಿ ರಕ್ತ ಕುಡಿದನೆಂದೆ ತಿಳಿದು ಜನನಿತಲೆ ಕಡಿದವನೆಂದೆ ಲಲನೆಯೊಡನೆ ವನವಾಸಕೆ ಪೋಗಿ ಬಳಲಿ ಬಳಲಿ ಬಾಯಾರಿದನೆಂದೆ 2 ಗೊಲ್ಲರ ಕುಲದಲಿ ಹುಟ್ಟಿದನೆಂದೆ ಗುಳ್ಳೆ ಗುಳ್ಳೆ ಬೆಣ್ಣೆ ಕದ್ದವನೆಂದೆ ಗೊಲ್ಲರ ಅಕಳ ಕಾಯುವ ಚರನೆಂದೆ ಫುಲ್ಲನಲನೆಯರ ವಸ್ತ್ರಗಳ್ಳನೆಂದೆ 3 ಬತ್ತಲೆ ಕುಣಿಕುಣಿದಾಡಿದನೆಂದೆ ಸತ್ಯಭ್ರಷ್ಟ ಮಹಕಲಿಯು ಈತನೆಂದೆ ಮತ್ತೆ ವೈಕುಂಠದಿ ಒದೆಸಿಕೊಂಡು ಇವ ವಿತ್ತದಾಸೆಗೆ ಮತ್ರ್ಯಲೋಕಕಿಳಿದವನೆಂದೆ 4 ಕುದುರೆ ನಡೆಸಿ ಒಬ್ಬನುಳಿಸಿದನೆಂದೆ ಕದನದ್ವೊಂಚಿಸಿ ಒಬ್ಬನಳಿದವನೆಂದೆ ಕುದುರೆ ಕಟ್ಟಿದ ವೀರ ತಾಮ್ರಧ್ವಜಗೆ ಸೋತು ಮುದುಕನಾಗಿ ಭಿಕ್ಷದಶ್ವ ತಂದವನೆಂದೆ 5 ಸೋದರಮಾವನ ಕೊಂದವನೆಂದೆ ಸೋದರಳಿಯರ ಜೀವ ಹೊಡೆಸಿದನೆಂದೆ ಭೇದದಿಂದ ಸಾಧು ಹನುಮನ ಸೋಲಿಸಿ ಸಾಧಿಸ್ವರೂಪಕ್ಕೆ ಪತಾಕೆನಿಸಿದನೆಂದೆ 6 ಜಾರ ಸಿರಿ ಸೊರೆಗೊಂಡವನೆಂದೆ ಮೀರಿದಂಥ ಮಹಮಾಯದ ಹೆಣ್ಣೆಂದೆ ಈರೇಳುಲೋಕದ ಕಪಟನಾಟಕನೆಂದೆ 7 ಮೊಚ್ಚೆಗಾರ ಕೈಯೊಳುಂಡವನೆಂದೆ ಉಚ್ಚಿಷ್ಟನಾಗಿ ಬಹಿಷ್ಕಾರ್ಹೊಂದಿದನೆಂದೆ ವೆಚ್ಚಮಾಡಿ ಮತ್ತು ಕುಲದಿ ಬಿದ್ದವನೆಂದೆ ನಿಶ್ಚಲ ಭಕ್ತರಿಗ್ಹುಚ್ಚ್ಹಿಡಿಸಿದನೆಂದೆ 8 ಪುಲ್ಲನಯನ ಸಿರಿರಾಮನ ಮುಂದೆ ಅಲ್ಲದ ಮಾತುಗಳ್ನಾನೇನೆಂದೆ ಬಲ್ಲಿದ ಹದಿನಾಲ್ಕು ಲೋಕ ಪೊತ್ತವನೆಂದೆ ಉಲ್ಲಾಸದಿ ನಿಮ್ಮ ಬಿರುದು ಸಾರುತ ಬಂದೆ 9
--------------
ರಾಮದಾಸರು
ನಿನ್ನ ಸಂಭ್ರಮದೊಳಗೆ ನೀನೆ ಇರುತಿರುವಿ ಎನ್ನಯ್ಯ ಮರೆದೇನು ಮುನ್ನಾದ ಬವಣೆ ಪ ಅನ್ನವನು ಕಾಣದೆ ಅನ್ನದಿಕ್ಕಿಲ್ಲದೆ ಉನ್ನತೋನ್ನತವಾದ ಚಿನ್ನದರಮನೆಯಲ್ಲಿ ಬಿನ್ನವಿಲ್ಲದೆ ಸಿರಿಯರನ್ನಬಡಿಪ ಮದವೋ 1 ಮಡದಿಯನು ಕಳಕೊಂಡು ಎಡೆಬಿಡದೆ ಅಡವ್ಯಡವಿ ಹುಡುಹುಡುಕಿ ಬೇಸತ್ತು ಕಡುಬಾಯ ಬಿಡುವಗೆ ಮೃಡಮಹಾದೇವತೇರು ಸಡಗರದಿ ನಿನ್ನಡಿಯ ದೃಢದಿ ಪೂಜಿಪರೆಂಬ ಕಡುಗರವದಿರವೇ 2 ನೀರೊಳ್ಜೀವಿಸಿ ಬಲು ನಾರುತಲಿರುವವಗೆ ಹಾರ ಹೀರಾವಳಿ ಗಂಧ ಕಸ್ತುರಿಯ ಮದವೋ ಸಾರಿ ಮನು ಮುನಿಗಳು ಸೇರಿ ನಿಮ್ಮಯ ಚರಣ ವಾರಿಜ ಭಜಿಪ ಮದ ಮೀರಿಹ್ಯದೋ ನಿನಗೆ 3 ತಿರುಕನು ತಾನಾಗಿ ಧರೆಯ ದಾನವ ಬೇಡಿ ಧರೆವರನ ಬಾಗಿಲವ ನಿರುತ ಕಾಯ್ದವಗೆ ಸುರರು ಗಂಧರ್ವ ತುಂಬುರರು ಸಂಗೀತದಿಂ ಹರುಷಗೊಳಿಪುದಕೆ ನೀ ನೇತ್ರ ಮುಚ್ಚಿರುವ್ಯೋ 4 ಭಾರಬೆನ್ನಲಿ ಪೊತ್ತು ಘೋರ ಬಡುತಿರುವವಗೆ ಈರೇಳುಲೋಕದ ದೊರೆಯೆಂಬಹಂಕಾರವೋ ಮಾರಪಿತ ಗತಿಯೆಂದು ಸೇರಿ ಭಜಿಸುವ ದಾಸರರಿಕೆ ಪೂರೈಸದಿದು ತರವೆ ಶ್ರೀರಾಮ 5
--------------
ರಾಮದಾಸರು
ಫಣಿವೇಣಿ ಶುಕಪಾಣಿ ವನಜಾಕ್ಷಿ ರುಕ್ಮಿಣಿಪ. ಈರೇಳುಲೋಕದ ಮಾತೆ ಭೂಲೋಲಭೀಷ್ಮ ಕಜಾತೆ ಗುಣಶೀಲೆ ಗುಣಾತೀತೆ ತ್ರಿದಶಾಲಿಸನ್ನುತೆ1 ಶ್ರೀವಾಸುದೇವನ ರಾಣಿ ಲೋಕೇಶಮುಖ್ಯರ ಜನನಿ ಸುಪ್ರಕಾಶಿನಿ ಕಲ್ಯಾಣಿ ಕಲಹಂಸಗಾಮಿನಿ2 ಸುವಿಲಕ್ಷಣೈಕನಿಧಾನಿ ಮೀನಾಕ್ಷಿ ಪಲ್ಲವಪಾಣಿ ಸುಕ್ಷೇಮಸುಖದಾಯಿನಿ ಲಕ್ಷ್ಮೀನಾರಾಯಣಿ3
--------------
ತುಪಾಕಿ ವೆಂಕಟರಮಣಾಚಾರ್ಯ
ಫಣಿವೇಣಿ ಶುಕಪಾಣಿ ವನಜಾಕ್ಷಿ ರುಕ್ಮಿಣಿ ಪ.ಈರೇಳುಲೋಕದ ಮಾತೆ ಭೂಲೋಲಭೀಷ್ಮ ಕಜಾತೆಗುಣಶೀಲೆ ಗುಣಾತೀತೆ ತ್ರಿದಶಾಲಿಸನ್ನುತೆ 1ಶ್ರೀವಾಸುದೇವನ ರಾಣಿ ಲೋಕೇಶಮುಖ್ಯರಜನನಿಸುಪ್ರಕಾಶಿನಿ ಕಲ್ಯಾಣಿ ಕಲಹಂಸಗಾಮಿನಿ 2ಸುವಿಲಕ್ಷಣೈಕನಿಧಾನಿ ಮೀನಾಕ್ಷಿ ಪಲ್ಲವಪಾಣಿಸುಕ್ಷೇಮಸುಖದಾಯಿನಿ ಲಕ್ಷ್ಮೀನಾರಾಯಣಿ 3
--------------
ಪಾವಂಜೆ ಲಕ್ಷ್ಮೀನಾರ್ಣಪ್ಪಯ್ಯ