ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಹರಿಹರಿ ಹರಿಯೆನ್ನಿ ಮಂದರಧರನೆ ಗತಿಯೆನ್ನಿ ದೀನ ದಯಾಕರನು ದಿವಿಭುವಿ ಪ. ಮಾನ ಭರಾಕರನು ನೀನೆಂದೊರವರನು ದುರಿತ- ಹೀನರ ಮಾಡುವನು 1 ತರಳನ ಮೊರೆ ಕೇಳಿ ವರ ನರ ಹರಿಯ ರೂಪವ ತಾಳಿ ದುರುಳ ಹಿರಣ್ಯಕನಾ ಕರುಳನು ಕೊರಳೊಳು ಧರಿಸಿದನಾ 2 ಗಜರಾಜನ ಕಾಯ್ದಾ ಬಾಣನ ಭುಂಜ ಪುಂಜವ ಕೊಯ್ದಾ ಗಜಪುರವರಗೊಲಿದಾ ಚರಣಾಂ- ಬುಜವೀವುತ ನಲಿದಾ 3 ನೆನೆದಲ್ಲಿಗೆ ಬರುವಾ ನಂಬಿದ ಜನರ ಸಂಗಡವಿರುವಾ ಅನುಗಾಲವು ಪೊರೆವಾ ಮನಸಿಜ ಜನನಿಯನಪ್ಪಿರುವಾ 4 ದಾಸರ ಸಲಹುವದು ಶೇಷ ಗಿ- ರೀಶನ ಮಹಾ ಬಿರುದು ದೋಷಗಳನು ತರಿದು ಈರೆರ- ಡಾಸೆ ಪೂರಿಪ ನೆರೆದೂ 5
--------------
ತುಪಾಕಿ ವೆಂಕಟರಮಣಾಚಾರ್ಯ