ನಿತ್ಯ ಚಿದಾತ್ಮಕ ಸತ್ಯ ರುಕ್ಮಿಣಿಯರು ಜೊತ್ತಿಲಾಡುತ ತಮ್ಮ ಪತಿಯ
ಉತ್ತಮಗುಣಗಣ ವರ್ಣಿಸುವದಕನುವೃತ್ತರಾಗುತ ವಾದಿಸಿದರು ಪ.
ಅಕ್ಕ ಕೇಳರಿಗಳ ವಶರಾಗಿ ಸೆರೆಯೊಳು
ಸಿಕ್ಕಿದವರ ಮಗನಿವನು
ಚಿಕ್ಕತನದಿ ಗೋವ ವಕ್ಕಲಿಗರು ಬಾಯೊ-
ಳಿಕ್ಕಿದನ್ನವನುಂಡದೇನು 1
ನಿರಪರಾಧಿಯನೀತ ತರಿದನೆಂಬಕೀರ್ತಿ
ಬರದಂತೆ ಸೆರೆಯೊಳುದಿಸಿದ
ಸುರರೆಲ್ಲ ಗೋಪರಾಗಿರುವುದರಿತು ಸೇವ-
ಕರಿಗೊಲಿವುತ್ತಲಿ ಮೆರೆವ 2
ಪಾಂಡುಕುಮಾರನ ಭಂಡಿ ಹೊಡಲು ಪಾಲ
ನುಂಡನು ವಿದುರನ ಗೃಹದಿ
ಗಂಡರಾಳುವ ಗರತೇರ ನೆರೆದವನ
ಹೆಂಡರಾಗಿರುವದಿನ್ನೆಂತು 3
ಭಕ್ತವತ್ಸಲನೆಂಬ ಬಿರುದ ತೋರುವದತಿ
ಶಕ್ತಿ ಹರಿಗೆ ಶೋಭಾಕರವು
ತೊತ್ತಿನ ಮಗನಿಂದಲಿತ್ತ ಕೌರವನೆಂಬ
ತತ್ವ ತೋರಿದನಲ್ಲವೇನೆ 4
ಧರೆಯನಾಳದೆ ತನ್ನ ಪರಿವಾರ ಸಹಿತಾಗಿ
ಶರಧಿಯೊಳಗೆ ವಾಸವಾಗಿ
ದುರುಳ ಜರಾಸಂಧ ಬರುವ ಭೀತಿಯ ತಾಳಿ
ಲ್ಲಿರುವ ಕಾರಣವೇನೆ ಜಾಣೆ 5
ಈರೆಂಟು ಮತ್ತೊಂದು ಭಾರಿ ಸಮರದಲ್ಲಿ
ಬಾರುಹದ್ರಥನನ್ನು ಗೆಲಿದ
ಧೀರನೀತನು ಭಕ್ತ ಮಾರುತಿಯಲಿ ಜಯ
ತೋರಲಂತಿರುವನು ಕಾಣೆ 6
ಜಾರ ಚೋರರಿಗೆಲ್ಲ ಗುರು ನಿಮ್ಮ ಪತಿಯೆಂದು
ವೂರನಾರಿಯರೆಲ್ಲ ನುಡಿವ
ಕ್ರೂರ ಮಾತನು ಕೇಳಲಾರೆನಕ್ಕಯ್ಯ ಯಿ
ನ್ಯಾರಿಗೆಂದುತ್ತರ ಕೊಡುವೆ 7
ಘತಿತ ಪಾವನ ಪದ್ಮಜಾತಜನಕ ಶ್ರೀ
ಪತಿ ಸುಜನಾನಂದದಾಯಿ
ವಿತತ ವಿಡಂಬನ ತೋರುವ ವೆಂಕಟ
ಪತಿ ದೋಷಹರ ಶೇಷಶಾಯಿ 8
ಹಸೆಗೆ ಕರೆವ ಮತ್ತು ಆರತಿಯ ಹಾಡುಗಳು