ಶ್ರೀ ರಾಘವೇಂದ್ರರು
ನೋಡಿದೆ ನಾ ಗುರುವರನ ಈರೂಢಿಗಧಿಕ ರಾಘವೇಂದ್ರರಾಯನ ಪ
ವೃಂದಾವನ ರೂಪನ ಭಕ್ತ ವೃಂದಕಾನಂದ ಕೊಡುವ ಕಲ್ಪದ್ರುಮನಕಂದರ್ಪನ ಗೆಲಿದವನಅಂದಣದಲಿ ನಾಲವಿಂದ ಮೆರೆವರ 1
ಕಮಲಾಕ್ಷಿಮಾಲಾ ಕಂಧರನ ಈ ಕ್ಷಿತಿಯೊಳು ಮಧ್ವಮತಾಬ್ಧಿ ಚಂದಿರನತಮವೈರಿಸಮತೇಜದವನ ಸಾಧುಸುಮನ ಪ್ರಿಯ ಸುಧೀಂದ್ರ ಕರಜನ2
ಶೃಂಗಾರಾಭರಣಭೂಷಣ ದಿವ್ಯಅಂಗ ಪುಣ್ಯದಿ ಲೋಕ ಪವಿತ್ರ ಗೈಯುವನತುಂಗಾತಟ ಮಂದಿರನ ಮಹಮಂಗಲಪ್ರದ ಮಂತ್ರಾನಿಲಯದೊಲ್ಲಭನ 3
ಲೇಸಾದ ಭಿಕ್ಷು ಎನಿಪನ ತನ್ನದಾಸರಾ ಸ್ತುತಿಗೆ ಸರ್ವಾರ್ಥದಾಯಕನಭಾಸುರಾಗಮ್ಯ ಮಹಿಮನ ಜಗಧೀರ ನರಹರಿದೂತ ದೇವಸ್ವಭಾವನ 4
ಪರವಾದಿ ಹೃದಯದಲ್ಲಣನ ದ್ವೈತಸ್ಥಿರವೆಂದು ಜಗದಿ ಭೇರಿಯ ಹೊಡಿಸಿದನಪರಿಮಳಾದಿ ಗ್ರಂಥ ಬೀರಿದನ ಕರಿವರದ ಐಹೊಳೆ ವೆಂಕಟನ ಕಿಂಕರನ 5