ಓಂ ನಮೋ ರಾಘವೇಂದ್ರಾಪ
ಓಂ ನಮೋ ರಾಘವೇಂದ್ರಾ ಘನದಯ ದಾಸಾಂದ್ರಾ
ವಾರಿಧಿ ಪೂರ್ಣಚಂದ್ರಾ1
ಶ್ರೀರಾಮ ಜಯರಾಮ ಸ್ವಾಮಿ ಜಯಜಯ ರಾಮಾ
ಈರೀತಿ ಸ್ಮøತಿಸಲಿಕೆ ಕೊಡುವಿ ವೈಕುಂಠ ಧಾಮಾ2
ಉಗ್ರ ವೃತ ತಪದಿಂದಾ ಜಪ ಅನುಷ್ಠಾನದಿಂದಾ
ಶ್ರೀಘ್ರದಿಂದ ಪಡಕೊಂಬಾ ಫಲಕಾಮ ಸನ್ನಿಧಾ3
ಹನುಮಬಲ್ಲಾ ಹರಬಲ್ಲಾ ಋಷಿನಾರದ ಬಲ್ಲಾ
ನೆನವನಾಮ ಸವಿಯಲೋ ಹೇಳಲಿಕೆ ಅಳವಲ್ಲಾ 4
ಮರಳು ಮಾನವರಂತಾ ಎನ್ನ ನೋಡಬ್ಯಾಡ ಡೊಂಕಾ
ಗುರುಮಹಿಪತಿ ಸ್ವಾಮಿ ನಾಮ ವೆನೆವ ನಿ:ಶಂಕಾ 5