ಪಾಲಿಸೋಯನ್ನ ಪರಾತ್ಪರಾ ಹರಿ ಪ
ಪಾಲಿಸೊ ಬುಧಹಿತ ಫಾಲನಯನನುತ
ಲೀಲಾನಟನಫಣಿ ಶೈಲ ನಿಳಯ-ಹರಿ ಅ.ಪ.
ವೇದಾಪಹಾರಿಯಕಂಡು
ಜಲಚರ ರೂಪಿನಿಂದಾ ಖಳನ ಸಂಹರಗೈದು
ಜಲಜಸಂಭವನಿಗೆ ಒಲಿದ ಮತ್ಸ್ಯಾವತಾರ 1
ಕರುಣಾವಿಹೀನದಿ ಬಲು
ನೊಂದು ಕಂಗೆಡುತಲಿರೆ ಸಿಂಧುಮಥನಗೈದು
ಕೂರ್ಮ 2
ದುರುಳ ಹಿರಣ್ಯಾಕ್ಷನೆಂಬುವ-ದೈತ್ಯ-ಧರಣಿಯನ
ಪಹಾರಗೈಯಲು ಬೇಗ
ಪರಮೇಷ್ಟಿಗೊಲಿದು ಸೂಕರನ ರೂಪವ ತಾಳಿ
ಧರಣೀಚೋರನ ಕೊಂದ ಸರಸೀರುಹಾಂಬಕ 3
ಗೈಸಿದ ಬಲು
ದುರುಳ ಹಿರಣ್ಯಕನುರವ ನಖದಿಂದ ಸೀಳಿ
ಕರುಳಮಾಲೆಯನಿಟ್ಟ ಧುರಧೀರ ನರಹರಿ4
ಅಳೆದು ಈರಡಿಮೂಡಿಲೋಕವ ಮತ್ತೆ
ಉಳಿದೊಂದು ಪಾದದಿ ಬಲಿಯ ತಲೆಯನು ಮೆಟ್ಟಿ
ನಲಿದು ಗಂಗೆಯಪೆತ್ತ ಚಲುವ ವಾಮನ ರೂಪ 5
ಚಕ್ರದೊಡನೆದುಷ್ಟಭೂಪರಅತಿ
ಅಕ್ರಮವನು ಕಂಡು ವಿಕ್ರಮಾನ್ವಿತ ನೃಪ
ಚಕ್ರವ ಮುರಿದ ಮುನಿಚಕ್ರರಕ್ಷಕ ರಾಮ 6
ತ್ರಿದಿವೇಶರದೊಡ್ಡ
ದೂರಕೇಳುತ ಮನುಜಾಕಾರವ ಧರಿಸಿ ದೈತ್ಯ
ವೀರರ ಮಡುಹಿದ ಶ್ರೀ ರಾಮ ಮೂರುತಿ 7
ನೇಗಿಲುಗಳನು ಹಸ್ತದಿಪಿಡಿದು
ಬಲವಂತರಾದ ದೈತ್ಯಕುಲವತರಿದು ದಿವಿಜ
ಕುಲವ ಸಂರಕ್ಷಿಸಿದ ಜಲಧರ ನಿಭಚೇಲ 8
ಭಾರ ತಾಳದೆ-ಧರಣೀ-ಸೃಷ್ಟೀಶನಲ್ಲಿದೂರಿಡೆ
ವೈರಿ ಪುಟ್ಟಿಸಿ
ಭೂಭಾರ ಮಟ್ಟುಮಾಡಿದ ಕೃಷ್ಣ9
ವ್ಯಾಪಿಸೆಲೋಕವು ಆಗ
ಲಲಿತತೇಜಿಯನೇರಿ ಕಲುಷಾತ್ಮಕರಕೊಂದು
ವಿಲಸಿತ ಧರ್ಮವನ್ನು ಸಲಹಿದ ಕಲ್ಕಿರೂಪ 10
ಮುನಿಗೈದಲುಬೇಗ
ವರವ್ಯಾಘ್ರಗಿರೀಶನೆ ಶರಣೆಂದಮುನಿಪಗೆ
ವರವಿತ್ತು ಸಲಹಿದ ವರದ ವಿಠಲ ಹರಿ11