ಜ್ಞಾನಿಗಳು ತಪ್ಪುವರೆ ಕೊಟ್ಟ ವಚನ
ಪ್ರಾಣಹೋದರೂ ಭಾಷೆ ಕೊನೆಗಾಣೋತನಕ ಪ
ಖ್ಯಾತಿವಂತ ನಳರಾಜ ಸೋತ ರಾಜ್ಯಾಕೆಂದು
ಮಾತಿಗಾಗಿಯೆ ತಾಂ ಪೋದ ವನವಾಸ
ಮಾತುಳುಹಿಕೊಳ್ಳಲ್ಕೆ ಸತ್ಯವಂತ್ಹರಿಶ್ಚಂದ್ರ
ನೀತಿಯಿಂ ತಾ ಕಾಯ್ದ ಸುಡುಗಾಡವ 1
ವಾಮನಮೂರುತಿಗೆ ಭೂಮಿ ಮೂರಡಿಯಂ
ಭೂಮಿಪ ಬಲಿಚಕ್ರಿ ಪ್ರೇಮದಿಂದಿತ್ತಿರಲು
ಸ್ವಾಮಿ ತಾಂ ಪರಿಕಿಸಲಿ ಭೂಮಿ ಈರಡಿಗೈಯೆ
ಸ್ವಾಮಿ ಮಿಕ್ಕಾದಡಿಗೆ ಪ್ರೇಮದಿತ್ತ ಶಿರವ 2
ನಾರಿಗೆ ಪಿತನ್ವೊಚನ ಮೀರಲಾಗದುಯೆನುತ
ನಾರಿಅನುಜರಿಂದ್ವಿಪಿನ ಸೇರಿದೆಯೊ ಶ್ರೀರಾಮ
ಆರುಳಿಯ ಬಲ್ಲರೈ ಮೀರಿ ನಿಮ್ಮಾಜ್ಞೆಯನು
ಭೂರಿ ಕರುಣದಿ ನೀನೆ ಪಾರುಮಾಡೆನ್ನ 3