ಅಮ್ಮನಿಮ್ಮ ಮನೆಗಳಲ್ಲಿ ನಮ್ಮ ಕಂದನ ಕಾಣರೇನೆ ಪ
ಸುಮ್ಮನೆ ಮಲಗಿರುಯೆಂದು ಗಮ್ಮನೆ ನಾ ನೀರಿಗೋದೆ
ಈಮಹೀಪಾಲ ಶ್ರೀರಂಗಾ ಗಮ್ಯವಾಗಿ ಹೋದ ಕಣೇ 1
ನಿದ್ರೆಯ ಮಾಡುತ್ತಲಿದ್ದೂ ಕದ್ದು ಪೋದಾ ನಮ್ಮ ರಂಗಾ
ಇದ್ದ ಮಾತಂತಿರಲಿ ಎನ್ನ ಮುದ್ದು ಕಂದಾ ಪೋದಾಕಾಣೆ 2
ಕದ್ದು ಬೆಣ್ಣೆ ಮೆದ್ದನೆಂದು ಸುದ್ದಿಯತಂದಾನು ಗುರುವೂ
ಗೆದ್ದು ತುಲಶಿರಾಮಾದಾಸಾರಿದ್ದು ಪೋದಾರಂತೆ ಕಣೇ 3