ಹನುಮ ಶ್ರೀರಾಮ ದೇವರ
ಅತಿ ತ್ವರದಲಿ ಬಾ ಹನುಮ ಪ
ದಿನವೊಂದು ಯುಗವಾಗಿ ದೈತ್ಯರಬಾಧೆಗೆ
ಪರಿ ತಲ್ಲಣುಸುತಲಿದೆ ಅ.ಫ
ಚಂಡ ಪ್ರಚಂಡನಾದ ದೇವಾ ಸದ್ಗುಣಭಾವಾ
ಶೌರಿ ಹರೇ ಜಗದೋದ್ಧಾರಿ
ಹಿಂಡು ಬಲದಿ ಬಂದೀ ದೈತ್ಯರನೆಲ್ಲ
ಛಂಡಿಸಿ ಬಿಡುವಾ ಶರ್ತು ಬಿರುದು ನಿಂದ್ಹನುಮಾ 1
ಹತ್ತು ಮಾಸವು ಆಯಿತ್ಹನುಮಾ
ಭಕ್ತರ ಪ್ರೇಮಾ ಒತ್ತಿಸೈನ್ಯದಿಂದ
ವಾರಿಧಿ ಬಂಧಿಸಿ ಮತ್ತಿನ ದೈತ್ಯರ
ಮರ್ದನ ಮಾಡೆಂದ್ಹೇಳ್ಹನುಮಾ 2
ರಾಜಾಧಿ ರಾಜನಾದಂಥಾ ರಾಮನಂತಾ
ಭೋಜ ಮಹಿಮ ಬಲವಂತ
ವಿಜಯನಂತ ಈನಗರ ರಕ್ಷಕ
'ಹೊನ್ನವಿಠ್ಠಲ' ರಾಜೀವಾಕ್ಷಗೆ ರೋಷವು ಇದ್ದರೆ 3