ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ತದಿಗೆಯ ದಿವಸ (ಶೇಷ ದೇವರನ್ನು ಕುರಿತು) ರಂಭೆ : ನಾರೀಮಣೀ ನೀ ಕೇಳೆ ಈತ- ನ್ಯಾರೆಂಬುದನೆನಗೆ ಪೇಳೆ ಕ್ರೂರತನದಿ ತಾ ತೋರುವನೀಗ ಮ- ಹೋರಗನೆನ್ನುತ ಕೋರಿಕೆ ಬರುವದು1 ಒಂದೆರಡು ಶಿರವಲ್ಲ ಬಹು ಹೊಂದಿಹವು ಸಟೆಯಲ್ಲ ಕಂಧರದಲಿ ಕಪ್ಪಂದದಿ ತೋರ್ಪವು ಚಂದಿರಮುಖಿ ಯಾರೆಂದೆನಗರುಹೆಲೆ 2 ಊರ್ವಶಿ : ಕೋಮಲಗಾತ್ರೆ ಮಹಾಮಹಿಮನು ಇವನ- ಸಾಮಾನ್ಯನೆ ಕಾಣೆ ಭೂಮಿಯ ಪೊತ್ತ ನಿರಾಮಯನಾದ ಸುಧೀಮನಿವನು ಜಾಣೆ 1 ವಾಸುದೇವಗೆ ಈತ ಹಾಸಿಗೆಯವ ನಿ- ರ್ದೋಷನಿವನು ಜಾಣೆ ಸಾಸಿರಮುಖದ ವಿಲಾಸನಾಗಿಹ ಮಹಾ- ಶೇಷನಿವನು ಕಾಣೆ 2 ಅದರಿಂದಲಿ ಕೇಳ್ ತದಿಗೆಯ ದಿವಸದಿ ಮಧುಸೂದನನಿವನ ಅಧಿಕಾನಂದದಿ ಒದಗಿಸಿ ಬರುವನು ಇದೆಯಿಂದಿನ ಹದನ 3 ಎಂದಿನಂತೆ ಪುರಂದರವಂದ್ಯ ಮು ಕುಂದ ಸಾನಂದದಲಿ ಅಂದಣವೇರಿ ಗೋವಿಂದ ಬರುವನೊಲ- ವಿಂದತಿ ಚಂದದಲಿ4 ಕಂಟಕಗಳು ಎಲ್ಲುಂಟೆಂಬಂತೆ ನೃಪ- ಕಂಠೀರವಗೈದ ಘಂಟಾನಾದದಿ ಮಂಟಪದೊಳು ವೈ- ಕುಂಠನು ಮಂಡಿಸಿದಾ 5 ಕಾಂತಾಮಣಿ ಕೇಳಿಂತೀಪರಿ ಶ್ರೀ- ಕಾಂತ ನತತಂಡ ಸಂತವಿಸುತ ಮಹಾಂತಮಹಿಮನೇ- ಕಾಂತಸೇವೆಯಗೊಂಡ 6 * * * ಪರಶಿವನನ್ನು ಕುರಿತು ರಂಭೆ :ಯಾರಮ್ಮಾ ಮಹಾವೀರನಂತಿರುವನು ಯಾರಮ್ಮಾ ಇವನ್ಯಾವ ಶೂರ ಯಾವ ಊರಿಂದ ಬಂದ ಪ್ರವೀರ ಆಹಾ ಮಾರಜನಕನ ವಿಸ್ತಾರಪೂಜೆಯ ವೇಳ್ಯ ಧೀರನಂದದಿ ತಾ ವಿಚಾರ ಮಾಡುವನೀತ1 ಕರದಿ ತ್ರಿಶೂಲವ ಧರಿಸಿ ಮತ್ತೆ ವರ ಕೃಷ್ಣಾಜಿನವನುಕರಿಸಿ ಹರಿ ಚರಣಸನ್ನಿಧಿಗೆ ಸತ್ಕರಿಸಿ ಆಹಾ ಜರಿಯ ದುಕೂಲವ ನಿರಿದುಟ್ಟುಕೊಂಡು ವಿ- ಸ್ತರವಾದ ತೋಷದಿ ಮೆರದು ನಲಿವ ಕಾಣೆ 2 ಊರ್ವಶಿ : ಈತನೀಗ ಕಾಲಭೈರವ ಕೇಳೆಲೆಗೆ ನೀರ ಪ. ಈತನೀಗ ಪೂರ್ವದೊಳಗೆ ಭೂತನಾಥ ಸೇವೆಯೊಲಿದ ಓತು ವಿಷ್ಣುಭಕ್ತಿಯಿಂದ ಪೂತನಾದ ಪುಣ್ಯಪುರುಷಅ.ಪ. ತೀರವಾಯ್ತು ವೇಣು ತಾ ವಿ- ಉದಾರತನದಿ ರಾಮೇಶ್ವರಕೆ ಸಾರಗ್ರಹಿತ ಮುಕ್ತಿ ಪಥವನು ಕರುಣದಿಂದ ತೋರಿಸುವನು ವಿಷ್ಣುವೆಂದೆನುತ ಗಿರಿಯ ಪದಾರವಿಂದಸೇವೆಗೈದು ನಲಿವ ಚಾರುಚರಿತ 1 ಬರುವ ಕಾಲದಲ್ಲಿ ಚರಣವನ್ನು ಬಿಡದೆ ಯಿಲ್ಲಿರುವನೈ ಮಹಾತ್ಮನೀತ ಸ್ಫುರಿತತೇಜೋಮೂರ್ತಿ ಈತನು ಲೋಕದೊಳಗೆ ಚರಿಸುವ ತ್ರಿಕಾಲಪ್ರಜ್ಞನು ಇವನ ಗುಣವ- ಮಹತ್‍ಕಾರಣೀಕ ಕರುಣವುಳ್ಳ ವಿಷ್ಣುಭಕ್ತ 2 ಪ್ರಧಾನಿಯೆಂದು ನಡೆಸಿಕೊಡುವ ತೋಷಪಟ್ಟು ಇರುವ ಕಾಣಿಕೆಗಳ ತರಿಸಿ ಇರಿಸುವ ಬೇತಾಳಪ್ರೇತ ನಾನಾ ಉಪದ್ರವಗಳ ಬಿಡಿಸುವ ಧನಿಯ ಆಜ್ಞೆ ಬಂದು ಪೇಳಿ ಜನರ ಕ್ಷೋಣಿಯೊಳಗೆ ಕೀರ್ತಿಪಟ್ಟ 3
--------------
ತುಪಾಕಿ ವೆಂಕಟರಮಣಾಚಾರ್ಯ