ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಆದಿಯಲಿ ಮಧುಕೈಟಬರನು ಸಂಹರಿಸಿದಂಥ ಶೂರನೆ ವೇದವನು ಕದ್ದೊಯ್ದ ದಾನವನೊಳು ಕಾದಿಗೆದ್ದ ಧೀರನೆ 1 ಹದಿನಾರು ಸಾವಿರ ಗೋಪಿಯನಾಳಿದಾಮಿತ ಬಲವಂತನೆ ಕದನಕೊದಗಿದಸುರರನ್ನು ಸದೆ ಬಡಿದ ಪ್ರಖ್ಯಾತನೆ 2 ಸಾಧು ಸಜ್ಜನರ ಸಂತಾಪ ಕಳೆದಾಮೋದ ತೀರ್ಥಾರಾಧ್ಯನೆ ಆದಿದೈವಿಕಾದಿ ಈತಿ ಬಾಧೆ ಕಳೆಯೊ ರಂಗೇಶವಿಠಲನೆ 3
--------------
ರಂಗೇಶವಿಠಲದಾಸರು
ಪಾದದರ್ಶನವೀಯೈ ಜಾನಕೀನಾಥ ಪ ವೇದ ವೇದಾಂತಗಳ ಓದಿದವ ನಾನಲ್ಲ ವಾದ ವಾಕ್ಯಾರ್ಥಗಳ ಭೇದ ಎನಗಿಲ್ಲ ಅ.ಪ ಪಾತಕಂಗಳ ಗೈದು ಭೀತನಾಗಿಹೆನಯ್ಯ ನೀತಿನಿಯಮಗಳಿಂದ ದೂರ ನಾನು ಈತಿ ಬಾಧೆಗಳಿಂದ ನಾ ತಪಿಸುತಿಹೆನಯ್ಯ ಮಾತುಮಾತಿಗೆ ನಿನ್ನ ನಾಮ ಜಪವೀಯೆಂದು 1 ಕೆಸರೊಳಗೆ ಹಾಕುವೆಯೊ ಹೊಸ ಜನುಮವೀಯುವೆಯೊ ಬಿಸಜಾಕ್ಷ ನಿನ್ನ ಮನಬಂದಂತೆ ಮಾಡೊ ಉಸಿರಾಡುವನ್ನೆಗಂ ನಿನ್ನ ಭಜನೆಯ ಗೈಸಿ ರಸ ಕಸಗಳೊಂದೆನಿಸೊ ಮಾಂಗಿರಿಯರಂಗ 2
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್