ಈತನೀಗಚಿದ್ವಿಲಾಸನು ಪ
ಈತನೀಗ ಸರ್ವಭೂತ ಜಾತಚೇತನರ್ಗೆ ಸೌಖ್ಯ
ದಾತವೇದ ಶಾಸ್ತ್ರ ವಿಖ್ಯಾತ ಲೋಕೈಕನಾಥ ಅ.ಪ.
ಬ್ರಹ್ಮರೂಪನಿಂದ ಜಗವ ನಿರ್ಮಿಸುತ್ತತಾನೆ ಸರ್ವ
ಕರ್ಮಫಲಗಳನ್ನೆ ಕೊಟ್ಟು ಶರ್ಮಪಡಿಸುವ
ಚರ್ಮವಸ್ತ್ರವುಟ್ಟು ರೌದ್ರ ಕರ್ಮಿಯಾಗಿ ಕಡೆಗೆ ಕಾಲ
ಧರ್ಮವನ್ನು ತೋರಿ ಜಲದೊಳೊಮ್ಮೆ ಮಲಗಿ ತೇಲುತಿರುವ 1
ರಮೆಯನಾಳ್ವ ಭಾಗ್ಯವಂತ ಕ್ಷಮೆಯನಾಳ್ವರಾಜ್ಯಕರ್ತ
ಕಮಲಭವನ ಪಡೆದ ಹಿರಿಯನಮರರೊಡೆಯ
ಸುಮಶರನಪೆತ್ತ ಚೆಲುವ ನಮಲಗಂಗೆಯಿತ್ತು ನಲಿವ
ವಾಸುದೇವ 2
ಉರಗಶಯನ ಗರುಡಗಮನ ಪರಮಪದವನುಳಿದುಶೇಷ
ಗಿರಿಯೊಳಿರ್ದುಬಂದ ವ್ಯಾಘ್ರಗಿರಿಯ ಶಿಖರಕೆ
ಭರದಿ ನಿತ್ಯಮುಕ್ತರೊಡನೆ ಕರದಿ ಶಂಖಚಕ್ರಪಿಡಿದು
ಕರುಣದಿಂದ ಚರಣ ಸೇವಕರನು ಪೊರೆವ ವರದವಿಠಲ 3