ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಎಲೆ ಮನಸೆ ನಾಂ ಪೇಳ್ವ ಬುದ್ಧಿ ಮಾತುಗಳ ಕಲಿತು ಜಾಣನಾಗಿ ನಿಜಸುಖದಿ ಬಾಳು ಪ ಪರನಿಂದೆ ಬೆರೆಸದಿರು ನಿರುತರನು ಜರಿಯದಿರು ದುರಿತದೊಳಗುರುಳದಿರು ಪರಚಿಂತೆ ಮಾಡು ಗುರುಹಿರಿಯ್ಹರಳಿಯದಿರು ದುರುಳರೊಳಗಾಡದಿರು ಹರಿಯಶರಣರ ಸೇವೆ ಸ್ಥಿರವಾಗಿ ಮಾಡು 1 ಮರವೆ ಪರದೆಯ ಹರಿ ಅರಿವಿನಮೃತ ಸುರಿ ಸ್ಥಿರಜಾನ್ಞದೊಳು ಸೇರಿ ಹರಿಚರಿತ ಬರಿ ಹರಿದಾಟವನು ಮರಿ ಜರೆಮರಣದು:ಖ ತರಿ ಪರಮಹರುಷದಿ ಮರೆ ದುವ್ರ್ಯಸನ ತೂರಿ 2 ಕ್ರೋಧವನು ಕಡೆಮಾಡು ವಾದಬುದ್ಧಿಯ ದೂಡು ಸಾಧುಜನರೊಳಗಾಡು ಶೋಧನ ಮಾಡು ಖೇದವನು ಈಡ್ಯಾಡು ವೇದದರ್ಥವ ಮಾಡು ಪಾದಸೇವೆಯ ಮಾಡು ಮಾಧವನ ಕೂಡು 3 ಕಾಮಲೋಭವ ಕಡಿ ಭೂಮಿಮೋಹವ ತೊಡಿ ಭಾಮೆಯರ ಪ್ರೇಮ ಬಿಡಿ ಕ್ಷೇಮಪಥ ಪಿಡಿ ತಾಮಸದೂರಮಾಡಿ ಸಾವಧಾನದ್ಹಿಡಿ ಪಡಿ ನೇಮದ್ಹುಡುಕಾಡಿ 4 ಮೋಸಪಾಶವ ಗೆಲಿ ಕ್ಲೇಶಗುಣಗಳ ತುಳಿ ದಾಸಜನರೊಳು ನಲಿ ಶಾಶ್ವತವ ತಿಳಿ ಹೇಸಿಕ್ವಾಸನೆಯಳಿ ದೋಷರಾಸಿಯಿಂದುಳಿ ಶ್ರೀಶ ಶ್ರೀರಾಮನಲಿ ದಾಸನಾಗಿ ಸೆಳಿ 5
--------------
ರಾಮದಾಸರು
ಬಿಡುಮನವೆ ಬಿಡದಿಹ್ಯ ಸಂಸಾರ ಪಡಕೊಂಬುದು ಮಾಡು ನೀ ಸುವಿಚಾರ 1 ವಿಚಾರದೊಳಗದ ಬಲು ವಿವೇಕ ಸೂಚಿಸಿಬಾಹುದು ಸ್ವಾತ್ಮದ ಸುಖ2 ಸ್ವಾತ್ಮದ ಸುಖ ತಿಳಿದವ ಸ್ವತ:ಸಿದ್ಧ ಮತ್ತೆಲ್ಲಿಹದವಗೆ ಭವಬಂಧ 3 ಭವಬಂಧವ ತಿಳಿಯಲುಪಾಯ ಭುವನದಲ್ಯದ ಶುಕನಳಿಕನ್ಯಾಯಾ 4 ನ್ಯಾಯವ ತಿಳಿದರೆ ನೋಯವನೆಂದು ಶ್ರಯ ತಿಳಿಯಲು ತಾ ಬಂಧು 5 ಬಂಧು ಹಗೆಯು ತನಗೆ ತಾಯೆಂದು ಸಂಧಿಸಿ ಪಾರ್ಥಗ್ಹೇಳಿದ ಹರಿ ಬಂದು 6 ಹರಿವಾಕ್ಯವೆ ಗುರುಗುಹ್ಯದ ಗುಟ್ಟು ಪರಮಾನಂದದ ಹೆಜ್ಜೆಯ ಮೆಟ್ಟು 7 ಹೆಜ್ಜೆಲೆ ನಡೆವನು ಕೋಟಿಗೊಬ್ಬವನು ಸಜ್ಜನ ಶಿರೋಮಣೆನಿಸಿಕೊಂಬುನು 8 ಶಿರೋಮಣೆನಿಕೊಂಬುದು ಗುರುಕರುಣ ಗುರುಚರಣಕೆ ಬ್ಯಾಗನೆಯಾಗು ಶರಣು 9 ಶರಣ ಹೊಕ್ಕವಗೆಲ್ಲಿಹುದು ಮರಣ ಮರಣಕ ಮರಣವ ತಂದವ ಜಾಣ 10 ಜಾಣನೆ ಜನ್ಮರಹಿತ ವಾದವನು ಜನವನ ಸಕಲ ಸಮವಗಂಡವನು 11 ಸಮಗಂಡವಗಳದಿಹ್ಯ ಶ್ರಮವೆಲ್ಲಾ ರಾಮ ವಸಿಷ್ಠರೊಳಾಡಿದ ಸೊಲ್ಲ 12 ಸೊಲ್ಲಿಗೆ ಮುಟ್ಟಿದವ ಪ್ರತಿಯಿಲ್ಲ ಎಲ್ಲರೊಳಗ ವಂದಾದವ ಬಲ್ಲ 13 ಬಲ್ಲವನೆ ಬಲ್ಲನು ಬಯಲಾಟ ಎಲ್ಲರಿಗಿದೆ ಅಗಮ್ಯದ ನೋಟ 14 ನೋಟಕ ನೀಟ ಮಾಡಿದವನು ಧನ್ಯ ನೀಟಿಲೆ ನಡೆದವ ಕೋಟಿಗೆ ಮಾನ್ಯ 15 ಕೋಟಿಗೆ ಒಬ್ಬನು ತತ್ವಜ್ಞಾನಿ ನೋಟವಗಂಡಿಹ್ಯ ಮಹಾ ಸುಜ್ಞಾನಿ 16 ಸುಜ್ಞಾನಿಗೆ ಘನಮಯ ಸುಕಾಲ ಸುಗಮ ಸುಪಥವಾಗಿಹುದನುಕೂಲ 17 ಅನುಕೂಲದ ನಿಜ ಮಾತನೆ ಕೇಳು ಅನುದಿನ ಘನಗುರು ಸೇವಿಲೆ ಬಾಳು 18 ಪರಿ ಲೇಸು ಕಳೆವುದು ಮಿಕ್ಕಿನ ಭ್ರಾಂತಿಯ ಸೋಸು 19 ಸೋಸ್ಹಿಡಿದರ ಇದೊಂದೇ ಸಾಕು ವೇಷವದೋರುವದ್ಯಾತಕೆ ಬೇಕು 20 ಬೇಕೆಂಬ ಬಯಕೆಯ ಈಡ್ಯಾಡು ಸೋಕಿ ಶ್ರೀ ಸದ್ಗುರು ಪಾದದಿ ಕೂಡು 21 ಪಡೆವುದಿದೇ ಸ್ವಸುಖ ಸಾಧನ 22
--------------
ಕಾಖಂಡಕಿ ಶ್ರೀ ಮಹಿಪತಿರಾಯರು